Food safety guide: ಕೆಲವು ಆಹಾರ ಪದಾರ್ಥ ಇಲ್ಲದೆ ಊಟ ಮಾಡುವುದು ಹಲವರಿಗೆ ಕಷ್ಟದ ಕೆಲಸ. ಸ್ನ್ಯಾಕ್ಸ್ ತಿನ್ನುವಾಗ ಮತ್ತು ಖಾರವಾದ ಆಹಾರಗಳನ್ನು ಸೇವಿಸುವಾಗಲೂ ಇವು ಬೇಕೇಬೇಕು. ಒಂದು ವೇಳೆ ಈ ಆಹಾರಗಳ ಎಕ್ಸ್‌ಪೈರಿ ಡೇಟ್ ಮುಗಿದಿದ್ದರೆ ಅದನ್ನ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ ಅಂತಾರೆ ತಜ್ಞರು.

ಚೀಸ್, ಹಾಲು, ಮೊಟ್ಟೆಯಿಂದ ತಯಾರಿಸಿದ ಸಲಾಡ್‌ಗಳನ್ನು ಎಕ್ಸ್‌ಪೈರಿ ಡೇಟ್ ನಂತರ ಬಳಸಬಾರದು. ಇದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ.

ಸಾಸ್‌ನಲ್ಲಿ ಹಲವು ಬಗೆಯ ಪ್ರಿಸರ್ವೇಟಿವ್‌ಗಳಿರುತ್ತವೆ. ಹಾಗಾಗಿ ಇದು ಹಳೆಯದಾದಂತೆ ಇದರಲ್ಲಿ ಫಂಗಸ್ ಬೆಳೆಯುತ್ತದೆ.

ಎಕ್ಸ್‌ಪೈರಿ ಡೇಟ್ ಕಳೆದ ಮಯೋನೀಸ್ ತಿನ್ನುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಯಾಕಂದ್ರೆ ಇದರಲ್ಲಿ ಮೊಟ್ಟೆ ಮತ್ತು ಎಣ್ಣೆ ಇರುತ್ತೆ. ಇದು ಬೇಗನೆ ಬ್ಯಾಕ್ಟೀರಿಯಾಗಳನ್ನು ಸೃಷ್ಟಿಸುತ್ತದೆ.

ಗಾಳಿ ಮತ್ತು ತೇವಾಂಶದ ಸಂಪರ್ಕಕ್ಕೆ ಬಂದಾಗ ಉಪ್ಪಿನಕಾಯಿ ಬೇಗನೆ ಹಾಳಾಗುತ್ತದೆ. ಆದ್ದರಿಂದ ಎಕ್ಸ್‌ಪೈರಿ ಡೇಟ್ ಕಳೆದ ಉಪ್ಪಿನಕಾಯಿಯನ್ನು ಎಂದಿಗೂ ಬಳಸಬೇಡಿ.

ಹಾರ ಪದಾರ್ಥಗಳನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಬೇಗನೆ ಹಾಳಾಗುತ್ತವೆ. ಹಾಗೆಯೇ, ಎಕ್ಸ್‌ಪೈರಿ ಡೇಟ್ ಕಳೆದ ಪದಾರ್ಥಗಳನ್ನು ಬಳಸಬಾರದು.

Source link
Expired foods: ಎಕ್ಸ್‌ಪೈರಿ ಡೇಟ್ ಆಗಿರುವ ಈ 3 ಆಹಾರ ಪದಾರ್ಥಗಳನ್ನ ತಿನ್ನಲೇಬೇಡಿ