ಹತ್ಯೆಯಾದ ಚಂದವ್ವ ಮತ್ತು ಆರೋಪಿ ಕುಮಾರ್
ರಾಯಚೂರು, ಜನವರಿ 27: ರಕ್ಕಸ ಮಗನೋರ್ವ ಹೆತ್ತ ತಾಯಿಯನ್ನೇ ಅಟ್ಟಾಡಿಸಿ, ಆಕೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಜಕ್ಕೇರು ತಾಂಡಾದಲ್ಲಿ ನಡೆದಿದೆ. ಚಂದವ್ವ (45) ಮೃತ ಮಹಿಳೆ, ಆಕೆಯ ಮೊದಲ ಪುತ್ರ ಕುಮಾರನೇ ಆರೋಪಿಯಾಗಿದ್ದಾನೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.
ಮಗನಿಂದಲೇ ಕೊಲೆಯಾದ ಚಂದವ್ವಗೆ ಒಟ್ಟು 6 ಜನ ಮಕ್ಕಳು. ಆ ಮೇಲಿನ 4 ಜನ ಹೆಣ್ಣು ಮಕ್ಕಳು ಮತ್ತು ಮಗುವಿನ ಮಗನಿಗೆ ಮದುವೆಯಾಗಿದೆ. ಮತ್ತೋರ್ವ ಪುತ್ರ ಸಂತೋಷ್ ಎಂಬಂತೆ ಇದೆ ಜಕ್ಕೇರು ತಾಂಡಾದಲ್ಲಿ ಜೆಸಿಬಿ ಆಪರೇಟರ್ ಆಗಿದ್ದಾರೆ, ಮೊದಲ ಮಗ ಕುಮಾರ್ ಹೆಂಡತಿ ಮತ್ತು ಮಕ್ಕಳ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದ. ಆದರೆ ಈತ ಸ್ವಲ್ಪ ಕಿರಿಕ್ ಪಾರ್ಟಿ, ಕುಡಿದು ಗಲಾಟೆ ಮಾಡೋದು ಈತನ ಕೆಟ್ಟ ಚಾಳಿಯಾಗಿ ಮಾರ್ಪಟ್ಟಿತ್ತು. ಈ ಮಧ್ಯೆ ಇತ್ತೀಚೆಗೆ ಬೆಂಗಳೂರಿನಲ್ಲಿ ಜಕ್ಕೇರು ತಾಂಡಾ ಗ್ರಾಮಕ್ಕೆ ಬಂದಿದ್ದ ಕುಮಾರ್, ತಾಯಿ ಚಂದವ್ವ ಜೊತೆ ಗಲಾಟೆ ಮಾಡಿದ್ದರು. ನಿನ್ನೆ ಸಂಜೆ ತಾಯಿ ಜೊತೆ ವಾಗ್ವಾದವಾಗಿ ಆಕೆಯನ್ನ ಎಳೆದಾಡಿ ಹೊಡೆದಿದ್ದ. ಬಳಿಕ ತಾಯಿ ಕೂದಲು ಹಿಡಿದು ಎಳೆದೊಯ್ದು ಮನೆ ಪಕ್ಕದ ಸೇವಾಲಾಲ್ ಭವನದ ಕಟ್ಟಡದ ಬಳಿ ಬಿಸಾಡಿದ್ದ. ಈ ವೇಳೆ ತಲೆಗೆ ಗಂಭೀರ ಪೆಟ್ಟಾಗಿ ಚಂದವ್ವ ಕುಸಿದಿದ್ದು, ಆಕೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪಾಪಿ ಮಗ ಕುಮಾರ್ ಹತ್ಯೆಗೈದಿದ್ದಾನೆ.
ಇದನ್ನೂ ಓದಿ: ಮದುವೆಯಾದ 45 ದಿನಕ್ಕೆ ಲವರ್ ಜೊತೆ ಯುವತಿ ಎಸ್ಕೇಪ್; ಪತಿ, ಸೋದರ ಮಾವ ಸೂಸೈಡ್
ಇನ್ನು ಮಗ ಕುಮಾರ್, ತಾಯಿ ಚಂದವ್ವಳ ಹತ್ಯೆ ಮಾಡಲು ಕಾರಣ ಕೇಳಿದ್ರೆ ಕೋಪ ನೆತ್ತಿಗೇರಿದೆ. ದುಡಿದು ತಾಯಿ ಸಾಕಬೇಕಿದ್ದ ಮಗ ಕುಮಾರ್, 2 ಲಕ್ಷ ಹಣ ಕೊಡು ಎಂದು ಅಮ್ಮನನ್ನೇ ಪೀಡಿಸುತ್ತಿದ್ದ. ಆಕೆ ಕೊಡದೇ ಇದ್ದಾಗ ಮನೆ ಮಾಳಿಗೆಯ ಶೀಟ್ ಒಡೆದು ಹಾಕಿ ದೊಡ್ಡ ಗಲಾಟೆ ಮಾಡಿದ್ದ. ಜಮೀನು ಮಾರಿಯಾದರೂ ಹಣ ಕೊಡು ಎಂದು ಹೇಳಿದ್ದ ಆತ, ನಿನ್ನೆಯವರೆಗೆ ಆಕೆಗೆ ಡೆಡ್ ಲೈನ್ ಕೂಡ ಕೊಟ್ಟಿದ್ದ. ಆದರೆ ನಿನ್ನೆ ತಾಯಿ ಚಂದವ್ವ, ನಿನ್ನ ತಮ್ಮ ಸಂತೋಷ್ ಮದುವೆ ಮಾಡಬೇಕಾಗಿದೆ. ಅದಕ್ಕೇ ಹಣ ಇಲ್ಲ, ನಿಂಗೆಲ್ಲಿ ಕೊಡಲಿ ಎಂದು ಬುದ್ದಿವಾದ ಹೇಳಿದ್ದಳು. ಇದೇ ವಿಚಾರಕ್ಕೆ ಕೆರಳಿದ ಪಾಪಿ ಕುಮಾರ್, ತಾಯಿಯನ್ನ ಎಳೆದಾಡಿ ಅಟ್ಟಾಡಿಸಿ ರಸ್ತೆಯಲ್ಲೇ ಹೊಡೆದಿದ್ದಾನೆ. ಈ ವೇಳೆ ಬಿಡಿಸಲು ಹೋದ ಸ್ಥಳೀಯರ ಬಳಿ ನಿಮ್ಮನ್ನೂ ಮುಗಿಸ್ತಿನಿ ಅಂತ ಕಿರುಚಾಡಿದ್ದ. ಘಟನೆ ಬೆನ್ನಲ್ಲೇ ಮುದಗಲ್ ಆರೋಪಿ ಕುಮಾರ್ ಅವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಹೆತ್ತ ತಾಯಿಯನ್ನೇ ಕೊಲೆಗೈದಿರೋ ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.