Headlines

ಆಳಂದ ಕ್ಷೇತ್ರದಲ್ಲಿ ಮತಗಳ್ಳತನ: ಬಂಧನ ಭೀತಿಯಿಂದ ಪಾರಾದ ಬಿಜೆಪಿ ಮಾಜಿ ಶಾಸಕ

ಆಳಂದ ಕ್ಷೇತ್ರದಲ್ಲಿ ಮತಗಳ್ಳತನ: ಬಂಧನ ಭೀತಿಯಿಂದ ಪಾರಾದ ಬಿಜೆಪಿ ಮಾಜಿ ಶಾಸಕ


ಮಾಜಿ ಶಾಸಕ ಸುಭಾಷ್ ಗುತ್ತೇದಾರ್

ಕಲಬುರಗಿ, ಅಕ್ಟೋಬರ್ 31: ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ವೋಟ್ ಚೋರಿ (ಆಳಂದ ಮತ ಕಳ್ಳತನ ಪ್ರಕರಣ) ಆರೋಪಕ್ಕೆ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್‌ಗೆ (ಸುಭಾಷ್ ಗುತ್ತೇದಾರ್) ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಸಿಸಿಹೆಚ್ 82ರ ಜಡ್ಜ್ ಸಂತೋಷ್ ಗಜಾನನ ಭಟ್ರಿಂದ ಆದೇಶ ಹೊರಡಿಸಲಾಗಿದೆ. ಆ ಮೂಲಕ ಬಂಧನ ಭೀತಿಯಿಂದ ಪಾರಾಗಿದ್ದಾರೆ.

ವೈದ್ಯಕೀಯ ನೋಟೀಸ್ ಹಿನ್ನೆಲೆ ಬಂಧನ ಭೀತಿಯಿಂದ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್‌ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಸಿಸಿಹೆಚ್ 82ರ ಜಡ್ಜ್ ಸಂತೋಷ್ ಗಜಾನನ ಭಟ್, ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ತೋರಿಸಿದ್ದಾರೆ.

ಇದನ್ನೂ ಓದಿ: ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ಆರೋಪ: ಬಿಜೆಪಿ ಮಾಜಿ ಶಾಸಕರ ಮನೆ ಮೇಲೆ ಎಸ್‌ಐಟಿ ದಾಳಿ

2023ರ ವಿಧಾನಸಭೆ ಚುನಾವಣೆಯಲ್ಲಿ ಮತಗಳ್ಳತನ ಆರೋಪದಲ್ಲಿ ಇತ್ತೀಚೆಗೆ 100ಕ್ಕೂ ಹೆಚ್ಚು ಪೊಲೀಸರ ಜೊತೆ ಎಸ್ ಐಟಿ ಅಧಿಕಾರಿಗಳ ತಂಡ ಸುಭಾಷ್ ಗುತ್ತೇದಾರ್ ಮನೆ ಸೇರಿದಂತೆ ಮೂರು ಕಡೆ ದಾಳಿ ನಡೆಸಿತ್ತು. ಕಲಬುರಗಿಯ ಗುಬ್ಬಿ ಕಾಲೋನಿಯಲ್ಲಿರುವ ನಿವಾಸದ ಮೇಲೆ ಎಸ್‌ಐಟಿ ಎಸ್‌ಪಿ ಶುಭಾನ್ವಿತಾ ನೇತೃತ್ವದಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಲಾಯಿತು.

SIT ದಾಳಿ ಮಾಡ್ತಿದ್ದಂತೆ ಅಮರ್ಜಾ ನದಿಯ ಹಿನ್ನೀರಿನಲ್ಲಿ ಅರ್ಧಂಬರ್ಧ ಸುಟ್ಟ ದಾಖಲೆ ಇತ್ತು. ಆದರೆ ಬೆಂಕಿ ಇಟ್ಟ ದಾಖಲೆಗಳು, ಬೂದಿಯನ್ನ ಇಲ್ಲಿ ತಂದು ಸುರಿದಿದ್ದು ಯಾರು ಅನ್ನೋದು ಗೊತ್ತಾಗಿಲ್ಲ. ಗೂಡ್ಸ್ ವಾಹನದಲ್ಲಿ ಅರೆಬೆಂದ ಕಾಗದಗಳನ್ನು ಸಾಗಿಸಲು ಸಾಕ್ಷಿ ಸಿಕ್ಕಿದ್ದು, ವಾಹನವನ್ನ ಜಪ್ತಿ ಮಾಡಲಾಗಿದೆ. ಆದರೆ ಚಾಲಕ ಪರಾರಿಯಾಗಿದ್ದಾನೆ.

ಗುತ್ತೇದಾರ್ ಒಡೆತನದ ಅಪ್ನಾ ಬಾರ್ & ರೆಸ್ಟೋರೆಂಟ್‌ನಲ್ಲಿ ಮತದಾರರ ಪಟ್ಟಿ ಪತ್ತೆಯಾಗಿದೆ. ಮತಗಳ್ಳರು 6-7 ಬಾರಿ ಇದೇ ಬಾರ್‌ನಲ್ಲಿ ಮೀಟಿಂಗ್ ಮಾಡಿದ್ದ ಬಗ್ಗೆ ಎಸ್‌ಐಟಿಗೆ ಮಾಹಿತಿ ಸಿಕ್ಕಿತ್ತು. ಅಷ್ಟೇ ಅಲ್ಲ 2022ರ ಡಿಸೆಂಬರ್‌ನಲ್ಲಿ ಕಾಲ್ಸೆಂಟರ್ ಮೂಲಕ ಮತಪಟ್ಟಿ ಡಿಲೀಟ್ ಮಾಡಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಕಾಲ್ ಸೆಂಟರ್‌ನಿಂದ ಮತದಾರರಿಗೆ ಕರೆ ಮಾಡುವ ಕಿಡಿಗೇಡಿಗಳು, ಮಾಹಿತಿ ಕಲೆ ಹಾಕಿ ವೋಟಲ್ ಲಿಸ್ಟ್‌ನಿಂದ ಫಾರ್ಮ್ ನಂ.7 ಬಳಕೆ ಮಾಡಿ ಹೆಸರುಗಳನ್ನು ಡಿಲೀಟ್ ಮಾಡುವಂತೆ ಮಾಡಲಾಗಿದೆ. ಅಕ್ರಂ, ಅಸ್ಲಾಂ, ಜುನೈದ್, ನದೀಮ್ ಎಂಬವರು ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಆಳಂದ ಮತಗಳ್ಳತನ: ಬಿಜೆಪಿ ಮಾಜಿ ಶಾಸಕ ಮಾಲೀಕತ್ವದ ಬಾರ್ ನಲ್ಲಿ ಮತದಾರರ ಪಟ್ಟಿ ಪತ್ತೆ

ಇನ್ನು ಮತಗಳ್ಳತನದ ಬಗ್ಗೆ ಇತ್ತೀಚೆಗಷ್ಟೇ ಸ್ಪಷ್ಟನೆ ಕೊಟ್ಟಿದ್ದ ಸುಭಾಷ್ ಗುತ್ತೇದಾರ್, ಯಾವ ಮತಗಳ್ಳತನವೂ ಆಗಿಲ್ಲ, ಎಲ್ಲವೂ ಸುಳ್ಳು ಅಂದಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *