Headlines

ಕಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆ; ಹಳೆಯ 29 ಕಾನೂನುಗಳ ಬದಲು ಹೊಸ 4 ಕಾನೂನು ಸಂಹಿತೆ ಜಾರಿಗೆ

ಕಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆ; ಹಳೆಯ 29 ಕಾನೂನುಗಳ ಬದಲು ಹೊಸ 4 ಕಾನೂನು ಸಂಹಿತೆ ಜಾರಿಗೆ


ಜನವರಿ, ನವೆಂಬರ್ 21: ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರವು ಕಾರ್ಮಿಕ ಕ್ಷೇತ್ರದಲ್ಲಿ ಸುಧಾರಣೆಗಳನ್ನು (ಕಾರ್ಮಿಕ ಸುಧಾರಣೆಗಳು) ತಂದಿದೆ. ಇವತ್ತಿನಿಂದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು (ಕಾರ್ಮಿಕ ಸಂಕೇತಗಳು) ಜಾರಿಗೆ ತರುತ್ತಿದೆ. ಹಿಂದಿನ 29 ಕೇಂದ್ರೀಯ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಹೊಸ ಸಂಹಿತೆಗಳನ್ನು ತಂದಿದೆ. ಸರ್ಕಾರವು ಈ ಕಾರ್ಮಿಕ ಸಂಹಿತೆಯ ಅನುಷ್ಠಾನವನ್ನು ಐತಿಹಾಸಿಕ ನಿರ್ಧಾರವೆಂದು ಬಣ್ಣಿಸಿದೆ. ಜಾಗತಿಕವಾದ ಅತ್ಯುತ್ತಮ ನೀತಿಗಳಿಗೆ ಸಂಬಂಧಿಸಿದಂತೆ ಭಾರತದ ಕಾರ್ಮಿಕ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದೆ. ಕಾರ್ಮಿಕ ಹಿತ ದೃಷ್ಟಿಯಲ್ಲಿಟ್ಟುಕೊಂಡು ನಿಯಮ ರೂಪಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಸರ್ಕಾರ ತಂದಿರುವ ನಾಲ್ಕು ಕಾರ್ಮಿಕ ಸಂಘಟನೆಗಳು

  • 2019ರ ವೇತನ ಸಂಹಿತೆ
  • 2020ರ ಔದ್ಯಮಿಕ ಸಂಬಂಧಗಳ ಸಂಹಿತೆ
  • 2020ರ ಸಾಮಾಜಿಕ ಭದ್ರತಾ ಸಂಹಿತೆ
  • 2020ರ ಉದ್ಯೋಗನಿರತ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯಸ್ಥಿತಿ ಸಂಹಿತೆ.

ಭವಿಷ್ಯಕ್ಕೆ ಅಣಿಗೊಂಡಿರುವ, ಸಂರಕ್ಷಿತವಾಗಿರುವ ಕೆಲಸಗಾರರ ಪಡೆ ಮತ್ತು ಕ್ಷಮತೆಯ ಉದ್ಯಮಗಳನ್ನು ನಿರ್ಮಿಸುವ ಉದ್ದೇಶದಿಂದ ಈ ಸಂಹಿತೆಗಳನ್ನು ರೂಪಿಸಲಾಗಿದೆ. ಉದ್ಯೋಗ ಸೃಷ್ಟಿ ಮತ್ತು ಇನ್ನೂ ಸೂಕ್ಷ್ಮವಾದ ಕಾರ್ಮಿಕ ಸುಧಾರಣೆಗಳನ್ನು ಮಾಡಲು ಇದು ಸಹಾಯಕ ವಸ್ತು ಸರ್ಕಾರದ ಅನಿಸಿಕೆ.

ಇದನ್ನೂ ಓದಿ: ಪಿಎಫ್ ಅರ್ಹತೆಗೆ ವೇತನ ಮಿತಿ 15,000 ರೂನಿಂದ 25,000 ರೂಗೆ ಏರಿಸಲು ಸರ್ಕಾರದಿಂದ ಚಿಂತನೆ

ಕಾರ್ಮಿಕ ಸಂಹಿತೆಗಳ ಮುಖ್ಯಾಂಶಗಳು

  • ಎಲ್ಲಾ ಕಾರ್ಮಿಕರ ನೇಮಕಾತಿ ಪತ್ರ ನೀಡುವುದು ಕಡ್ಡಾಯ. ಇದರಿಂದ ಉದ್ಯೋಗವು ಕಾನೂನುಬದ್ಧವಾಗುವುದಿಲ್ಲ.
  • ಅರೆಕಾಲಿಕ ಮತ್ತು ಗುತ್ತಿಗೆ ಆಧಾರಿತ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕೆಲಸಗಾರರು ಪಿಎಫ್, ಐಎಸ್ ಐ, ಇನ್‌ಶೂರೆನ್ಸ್ ಸೌಲಭ್ಯ ಇರುವ ಯೂನಿವರ್ಸಲ್ ಸೋಶಿಯಲ್ ಸೆಕ್ಯುರಿಟಿ ವ್ಯಾಪ್ತಿಗೆ ಬರುತ್ತಾರೆ.
  • ಎಲ್ಲಾ ಕಾರ್ಮಿಕರಿಗೂ ನಿಗದಿತವಾಗಿರುವ ಕನಿಷ್ಠ ವೇತನ ಪಡೆಯುವ ಹಕ್ಕು ಸಿಗುತ್ತದೆ.
  • 40 ವರ್ಷಕ್ಕಿಂತ ಹೆಚ್ಚಿನ ವಯಸ್ಸಾಗಿರುವ ಕೆಲಸಗಾರರಿಗೆ ವಾರ್ಷಿಕವಾಗಿ ಉಚಿತ ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಬೇಕು.
  • ವೇತನವನ್ನು ಸರಿಯಾದ ಸಮಯಕ್ಕೆ ನೀಡುವುದು ಕಡ್ಡಾಯ
  • ಮಹಿಳೆಯರಿಗೆ ಮೈನಿಂಗ್ ಸೇರಿದಂತೆ ಎಲ್ಲಾ ಸೆಕ್ಟರ್‌ಗಳಲ್ಲಿ ನೈಟ್ ಶಿಫ್ಟ್ ಕೆಲಸ ಮಾಡಲು ಅನುಮತಿಸಬೇಕು.
  • ಒಂದು ರಿಜಿಸ್ಟ್ರೇಶನ್, ಲೈಸೆನ್ಸ್ ಮತ್ತು ರಿಟರ್ನ್ ಸೌಲಭ್ಯ ನೀಡುವ ಮೂಲಕ ಉದ್ದಿಮೆಗಳಿಗೆ ಸರಳಗೊಳಿಸಲಾಗಿದೆ.

ಗಿಗ್ ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರು ಅಧಿಕೃತ ಉದ್ಯೋಗ ಕ್ಷೇತ್ರದ ವ್ಯಾಪ್ತಿಗೆ ಬರುತ್ತಾರೆ. ಪ್ಲಾಟ್ಫಾರ್ಮ್ ಎಂದರೆ ಇಲ್ಲಿ ಸ್ವಿಗ್ಗಿ, ಜೊಮಾಟೊ, ಬ್ಲಿಂಕಿಂಟ್ ಇತ್ಯಾದಿ ಅಗ್ರಿಗೇಟರ್ಗಳು. ಅಂದರೆ ಡೆಲಿವರಿ ಪಾರ್ಟ್ನರ್ಸ್, ರೈಡಿಂಗ್ ಪಾರ್ಟ್ನರ್ಸ್ ಅವರಿಗೆ ಕಾನೂನು ಮಾನ್ಯತೆ ಸಿಗುತ್ತದೆ. ಕೃಷಿಕರ ಸಂಸ್ಥೆಗಳು ಇಂಥ ಕಾರ್ಮಿಕರಿಗೆಂದು ವೆಲ್ಫೇರ್ ಫಂಡ್‌ಗಳನ್ನು ರಚಿಸಬೇಕು. ತಮ್ಮ ಬ್ಯುಸಿನೆಸ್ ಟರ್ನೋವರ್ನಲ್ಲಿ ಶೇ. 1-2ರಷ್ಟನ್ನು ಈ ಕಾರ್ಮಿಕ ಕಲ್ಯಾಣ ನಿಧಿಗೆ ಹಾಕಬೇಕು ಎಂದು ಹೊಸ ಕಾನೂನು ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: ಸದ್ಯ ಷೇರುಪೇಟೆ ಸುರಕ್ಷಿತ ಇಲ್ಲ; ಕಾದಿದೆ ವಿಪತ್ತು: ವ್ಯಾಲ್ಯುಯೇಶನ್ ಎಕ್ಸ್‌ಪರ್ಟ್ ದಾಮೋದರನ್ ಆತಂಕ

ಗುತ್ತಿಗೆ ಆಧಾರಿತ ನೌಕರರು ರೆಗ್ಯುಲರ್ ಉದ್ಯೋಗಿಗಳಿಗೆ ನೀಡುವ ಗ್ರ್ಯಾಚುಟಿ ಇತ್ಯಾದಿ ಸೌಲಭ್ಯಗಳನ್ನು ಪಡೆಯಬಹುದು. ಮಹಿಳೆಯರು ಪುರುಷರಷ್ಟು ಸಮ ವೇತನ, ರಾತ್ರಿ ಪಾಳಿ ಕೆಲಸ ಇತ್ಯಾದಿ ಅವಕಾಶ ಪಡೆಯಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *