
ಜನವರಿ, ಮಾರ್ಚ್ 29: ಈಕ್ವಿಟಿಗಳಿಂದ ಮಾರ್ಚ್ ತಿಂಗಳಿನಲ್ಲಿ 12.3 ಬಿಲಿಯನ್ ಡಾಲರ್ನಷ್ಟು ಎಫ್ಪಿಐಗಳ ಹೂಡಿಕೆಗಳು ಹೊರಹೋಗಿವೆ. ಅಂದರೆ, ಮಾರ್ಚ್ನಲ್ಲಿ ಇಲ್ಲಿಯವರೆಗೆ (27, ಶುಕ್ರವಾರ) 1.14 ಲಕ್ಷ ಕೋಟಿ ರೂ ಈಕ್ವಿಟಿಗಳನ್ನು ವಿದೇಶೀ ಹೂಡಿಕೆದಾರರು ಮಾರಿದ್ದಾರೆ. ಇನ್ನೂ ಎರಡು ಟ್ರೇಡಿಂಗ್ ಸೆಷನ್ಗಳು ಉಳಿದಿದ್ದು, ಇನ್ನೂ ಸಾವಿರಾರು ಕೋಟಿ ರೂ ಎಫ್ಪಿಐಗಳು (ಎಫ್ಪಿಐ- ವಿದೇಶಿ ಪೋರ್ಟ್ಫೋಲಿಯೋ ಹೂಡಿಕೆದಾರರು) ಹೊರಹರಿವು ಆಗುವ ನಿರೀಕ್ಷೆಯಿದೆ.
ಯಾವುದೇ ಒಂದು ತಿಂಗಳಿನಲ್ಲಿ ಇಷ್ಟು ಮೊತ್ತದ ವಿದೇಶೀ ಹೂಡಿಕೆಗಳ ಹೊರಹರಿವು ಕಂಡಿದ್ದು ಇದೆ ಮೊದಲು. 2024ರ ಅಕ್ಟೋಬರ್ ತಿಂಗಳಿನಲ್ಲಿ 94,017 ಕೋಟಿ ರೂ ಮೊತ್ತದಷ್ಟು ವಿದೇಶೀ ಹೂಡಿಕೆಗಳು ಹೊರಹೋಗಿದ್ದವು. ಅದು ಇಲ್ಲಿಯ ದಾಖಲೆಯಾಗಿತ್ತು. ಮಾರ್ಚ್ ತಿಂಗಳ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ ಹೊರಹರಿವಿನ ಮೈಲಿಗಲ್ಲು ಸೃಷ್ಟಿಯಾಗಿದೆ.
ಇದನ್ನೂ ಓದಿ: ಅಬಕಾರಿ ಸುಂಕ ಕಡಿತದಿಂದ ಸರ್ಕಾರಕ್ಕೆ ಎರಡೇ ವಾರದಲ್ಲಿ 7,000 ಕೋಟಿ ಆದಾಯದ ಅಂದಾಜು
ಮಾರ್ಚ್ ತಿಂಗಳಿನಲ್ಲಿ ಎಫ್ಪಿಐಗಳು ಸತತವಾಗಿ ಹೂಡಿಕೆಗಳನ್ನು ಹಿಂಬಾಲಿಸುವ ಟ್ರೆಂಡ್ ಇತ್ತು. ಈಕ್ವಿಟಿ ಕ್ಯಾಷ್ ಮಾರುಕಟ್ಟೆಯಲ್ಲಿ ಮಾರ್ಚ್ 27ರವರೆಗೆ ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆದಾರರು ಮಾರಿದ ಈಕ್ವಿಟಿಗಳ ಮೌಲ್ಯ 1,13,380 ಕೋಟಿ ರೂ.
2026ರಲ್ಲಿ, ಅಂದರೆ ಜನವರಿಯಿಂದ ಈಚೆಗೆ ಎಫ್ಪಿಐಗಳಿಂದ ಆಗಿರುವ ಹೂಡಿಕೆ ನಿರ್ಗಮನ ಒಟ್ಟು 1.27 ಲಕ್ಷ ಕೋಟಿ ರೂ. ಇದರಲ್ಲಿ ಮಾರ್ಚ್ ತಿಂಗಳಲ್ಲೇ ಸಿಂಹಪಾಲು. ಫೆಬ್ರುವರಿ ತಿಂಗಳಲ್ಲಿ ವಿಭಿನ್ನ ಟ್ರೆಂಡ್ ಇತ್ತು. ಎಫ್ಪಿಐಗಳು 22,615 ಕೋಟಿ ರೂನಷ್ಟು ಮೊತ್ತದ ಭಾರತೀಯ ಈಕ್ವಿಟಿಗಳನ್ನು ಖರೀದಿಸಲಾಗಿದೆ. ಕಳೆದ 17 ತಿಂಗಳಲ್ಲೇ ಅತಿಹೆಚ್ಚು ಮಾಸಿಕ ಒಳಹರಿವು ಅದಾಗಿತ್ತು.
ಇದನ್ನೂ ಓದಿ: ಎಲ್ಎನ್ಜಿಯನ್ನು ಖರೀದಿಸುವ ಭಾರತ; ಎಲ್ಪಿಜಿ, ಪಿಎನ್ಜಿ, ಎಲ್ಎನ್ ಜಿಗಿರುವ ವ್ಯತ್ಯಾಸಗಳೇನು?
ಇರಾನ್ ಯುದ್ಧದ ಪರಿಣಾಮವು ಮಾರ್ಚ್ ತಿಂಗಳಿನಲ್ಲಿ ಈಕ್ವಿಟಿ ಮಾರುಕಟ್ಟೆ ಮೇಲೆ ತೀವ್ರವಾಗಿ ಬಿದ್ದಿದೆ. ಜೊತೆಗೆ, ಕಳೆದ 18 ತಿಂಗಳಿನಲ್ಲಿ ಭಾರತದ ಈಕ್ವಿಟಿ ಮಾರುಕಟ್ಟೆಯ ಸಾಧನೆಯು ಇತರ ದೇಶಗಳ ಮಾರುಕಟ್ಟೆಗೆ ದುರ್ಬಲ ಸಾಧನೆ ತೋರಿದೆ. ಹೀಗಾಗಿ, ಎಫ್ಪಿಐಗಳು ಭಾರತದ ಈಕ್ವಿಟಿಗಳಲ್ಲಿ ಹೂಡಿಕೆ ಕಡಿಮೆ ಇರಬಹುದು. ಇದರ ಜೊತೆಗೆ, ಅಮೆರಿಕದ ಬಾಂಡ್ ಯೀಲ್ಡ್ ಹೆಚ್ಚಾಗಿರುವುದು ಮತ್ತು ಜಾಗತಿಕವಾಗಿ ಆರ್ಥಿಕ ಸ್ಥಿತಿ ಸಂಕುಚಿತಗೊಂಡಿರುವುದು ಕೂಡ ಎಫ್ಪಿಐಗಳ ಹೊರಹರಿವಿಗೆ ಕಾರಣವಾಗಿರುವುದು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ