Headlines

ಟ್ರಾಫಿಕ್​ಗೆ ಕಡಿವಾಣ ಹಾಕಲು ಐಟಿ ಕಂಪನಿಗಳ ಪ್ಲಾನ್: ಮೆಟ್ರೋದಲ್ಲಿ ಕಚೇರಿಗೆ ಬರೋ ಟೆಕ್ಕಿಗಳಿಗೆ ಉಚಿತ ಮೆಟ್ರೋ ಪಾಸ್

ಟ್ರಾಫಿಕ್​ಗೆ ಕಡಿವಾಣ ಹಾಕಲು ಐಟಿ ಕಂಪನಿಗಳ ಪ್ಲಾನ್: ಮೆಟ್ರೋದಲ್ಲಿ ಕಚೇರಿಗೆ ಬರೋ ಟೆಕ್ಕಿಗಳಿಗೆ ಉಚಿತ ಮೆಟ್ರೋ ಪಾಸ್


ಮೆಟ್ರೋದಲ್ಲಿ ಆಫೀಸ್ಗೆ ಬರೋ ಟೆಕ್ಕಿಗಳಿಗೆ ಉಚಿತ ಮೆಟ್ರೋ ಪಾಸ್

ಬೆಂಗಳೂರು, ನವೆಂಬರ್ 14: ನಗರದಿಂದ ಸಿಟಿಗೆ ಹೋಗಬೇಕು ಎಂದರೆ ಸುಮಾರು ಎರಡರಿಂದ ಮೂರು ಗಂಟೆ ಬೇಕು. ಆದರೆ ಮೆಟ್ರೋದಲ್ಲಿ (ನಮ್ಮ ಮೆಟ್ರೋ) ಹೋದರೆ 30 ರಿಂದ 40 ನಿಮಿಷ ಸಾಕು. ಹೀಗಾಗಿ ಟ್ರಾಫಿಕ್‌ಗೆ ಕಡಿವಾಣ ಹಾಕಲು ಸಂಸ್ಥೆಯೊಂದು ಐಟಿಬಿಟಿ ಕಂಪನಿಗಳ ಟೆಕ್ಕಿಗಳಿಗೆ ಉಚಿತ ಮೆಟ್ರೋ ಪಾಸ್ ನೀಡಲು ಮುಂದಾಗಿದೆ.

ಟ್ರಾಫಿಕ್ ಸಮಸ್ಯೆಗೆ ದೊಡ್ಡ ಮಟ್ಟದಲ್ಲಿ ಪರಿಹಾರ

ಆರ್.ವಿ ರೋಡ್ ಇಂದ ಬೊಮ್ಮಸಂದ್ರ ಮಾರ್ಗದಲ್ಲಿರುವ (ಯೆಲ್ಲೋ ಲೈನ್) ಐಟಿಬಿಟಿ ಕಂಪನಿಗಳಿಗೆ ಬರುವ ಟೆಕ್ಕಿಗಳಿಗೆ ಸಂಚಾರ ಮಾಡಲು ಸಂಸ್ಥೆಯೊಂದು ಮೆಟ್ರೋ ಪಾಸ್ ನೀಡಲು ಮುಂದಾಗಿದೆ. ಪ್ರಾಯೋಗಿಕವಾಗಿ ಈಗಾಗಲೆ ಕೆಲ ಕಂಪನಿಗಳು 250 ಉದ್ಯೋಗಿಗಳಿಗೆ ಸಿಎಸ್ಆರ್ ಫಂಡ್ನಿಂದ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ)ಆರ್ಬಿಟ್ ವಾಲೆಟ್ ರೂಪೇ ಕಾರ್ಡ್ ಮೂಲಕ 1500 ರೂಪಾಯಿ ಪಾಸ್ ನೀಡಲಾಗುತ್ತದೆ. ಸಿಟಿ ಭಾಗದಲ್ಲಿ ಪ್ರತಿದಿನ ಸುಮಾರು 2.5 ಟೆಕ್ಕಿಗಳು ಕೆಲಸಕ್ಕಾಗಿ ಲಕ್ಷ ಮಾರ್ಗ ಸಂಚಾರ ಮಾಡಲಾಗುತ್ತಿದೆ, ಇದನ್ನು ಸೇರಿಸಲಾಗಿದೆ ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆಗೆ ದೊಡ್ಡ ಮಟ್ಟದಲ್ಲಿ ಪರಿಹಾರ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ ಮೆಟ್ರೋ ಪ್ರಯಾಣಿಕರಿಗೆ ಸುದ್ದಿ: ಇನ್ನರ್ ರಿಂಗ್ ಮೆಟ್ರೋ ಯೋಜನೆ ಕೈಬಿಡಲು ಪ್ಲ್ಯಾನ್

ನೌಕರರಿಗೆ ಪ್ರತಿ ತಿಂಗಳು 1500 ರೂಪಾಯಿ ಬೆಲೆಯ ಪಾಸ್

ಸಿಟಿ ಮಾರ್ಗದಲ್ಲಿ ನೂರಾರು ಬಿಟಿ ಕಂಪನಿಗಳು, ಈ ಕಂಪನಿಗಳಲ್ಲಿ ಕೆಲಸ ಮಾಡಲು ಪ್ರತಿದಿನ ಐಟಿ ನೌಕರರ ಸ್ವಂತ ಕಾರು, ಬೈಕ್, ಕಂಪನಿ ಕ್ಯಾಬ್‌ಗಳಲ್ಲಿ ಬರುವುದರಿಂದ ಸಿಲ್ಕ್ ಬೋರ್ಡ್ ಭಾಗದಲ್ಲಿ ವಿಪರೀತವಾಗಿ ಟ್ರಾಫಿಕ್ ಸಮಸ್ಯೆ ಕಾಡುತ್ತಿದೆ. ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ನಿಲ್ಲುತ್ತಿದ್ದಾರೆ, ಇದಕ್ಕೆ ಕಡಿವಾಣ ಹಾಕಲು ಸಂಸ್ಥೆಯು ನೌಕರರಿಗೆ ಪ್ರತಿ ತಿಂಗಳು 1500 ರೂಪಾಯಿ ಮುಖ ಬೆಲೆಯ ಪಾಸ್‌ಗೆ ಚಿಂತಿಸಲಾಗಿದೆ. ಮುಂದಿನ ದಿನಗಳಲ್ಲಿ ಆ ಭಾಗದ ದೊಡ್ಡ ದೊಡ್ಡ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮೆಟ್ರೋ ಪಾಸ್ ನೀಡಲಾಗುವುದು, ಇದರಿಂದ ಟೆಕ್ನಿಕ್ಸ್ ಸರಿಯಾದ ಸಮಯಕ್ಕೆ ಕಚೇರಿಗೆ ಬರಲಿದೆ. ಇದರ ಜೊತೆಗೆ ಟ್ರಾಫಿಕ್ ಸಮಸ್ಯೆಯೂ ಕಡಿಮೆ ಆಗಲಿದೆ ಎಂದು ಐಟಿ ಬಿಟಿ ಅಸೋಸಿಯೇಷನ್ ​​ವಕ್ತಾರ ಮಯೂರ್ ಹೇಳಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *