ಬಾಲಿವುಡ್ (ಬಾಲಿವುಡ್) ಮೇಲೆ ಭೂಗತ ಪ್ರಪಂಚದ ಕಣ್ಣು ಬಿದ್ದಿದೆ. ಕೆಲ ಹಿಂದೆ ದಾವೂದ್, ಚೋಟಾ ಶಕೀಲ್ ಇನ್ನೂ ಕೆಲ ಪಾತಕಿಗಳ ಸಮಯದಲ್ಲಿ ಬಾಲಿವುಡ್ ಅಕ್ಷರಶಃ ನಡುಗಿತ್ತು. ಅದಾದ ಬಳಿಕ ಕಳೆದ ಪ್ರತಿನಿಧಿಯಿಂದ ಭೂಗತ ಜಗತ್ತಿನ ಉಪಟಳ ಇಲ್ಲದೆ ಆರಾಮವಾಗಿತ್ತು ಆದರೆ ಇದೀಗ ಮತ್ತೆ ಬಾಲಿವುಡ್ ಮೇಲೆ ಭೂಗತ ಜಗತ್ತಿನ ಕಣ್ಣು ಬಿದ್ದಿದೆ. ಸಲ್ಮಾನ್ ಖಾನ್, ಕಪಿಲ್ ಶರ್ಮಾ ಇನ್ನೂ ಹಲವಾರು ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕಲಾಗಿದೆ. ಇದೀಗ ರೋಹಿತ್ ಶೆಟ್ಟಿ ಮತ್ತು ರಣವೀರ್ ಸಿಂಗ್ ಅವರಿಗೆ ಬೆದರಿಕೆ ಹಾಕಲಾಗಿದೆ.
ಕೆಲ ದಿನಗಳ ಹಿಂದಷ್ಟೇ ನಿರ್ದೇಶಕ, ನಿರ್ಮಾಪಕ ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಅದಾದ ಬಳಿಕ ನಟ ರಣವೀರ್ ಸಿಂಗ್‌ಗೆ ಕೊಲೆ ಬೆದರಿಕೆ ಹಾಕಲಾಗಿದೆ. ಅದಾಗಿ ಕೆಲವೇ ದಿನಗಳಲ್ಲಿ ಮತ್ತೆ ರಣ್ವೀರ್ ಸಿಂಗ್ ಗೆ ವಾಟ್ಸ್ ಆ್ಯಪ್ ಮೂಲಕ ಬೆದರಿಕೆ ಹಾಕಲಾಗಿದೆ, ‘ನಿಮ್ಮ ಮ್ಯಾನೇಜರ್, ನಿಮ್ಮ ಎಲ್ಲ ಸಿಬ್ಬಂದಿಯನ್ನೂ ಕೊಲ್ಲುತ್ತೇವೆ’ ಎಂದು ಮಾಫಿಯಾಕ್ಕೆ ಸೇರಿದ ದುರುಳರು ಎಚ್ಚರಿಕೆ ನೀಡಿದ್ದಾರೆ.
ವಾಯ್ಸ್ ಮೆಜೇಜ್ ಮೂಲಕ ರೋಹಿತ್ ಶೆಟ್ಟಿಗೆ ಬಂದಿರುವ ಎಚ್ಚರಿಕೆಯಲ್ಲಿ ‘ಲೈನ್’ಗೆ ಬಂದುಬಿಡು, ಇಲ್ಲದೇ ಹೋದರೆ ಅದರ ಪರಿಣಾಮ ಹೇಗಿರುತ್ತದೆ ಎಂದು ನೀನು ನೋಡಿದೆ. ಮಾತಿನಂತೆ ನಡೆದುಕೊಳ್ಳದೇ ಹೋದರೆ ಶಿಕ್ಷೆ ಹೇಗಿರುತ್ತದೆ ಎಂದು ನಿನಗೆ ತೋರಿಸುತ್ತೇವೆ’ ಎಂದು ವಾಯ್ಸ್ ಮೆಸೇಜ್‌ನಲ್ಲಿ ಹೇಳಲಾಗಿದೆ. ಈ ಎಚ್ಚರಿಕೆ ನಿನಗೆ ತೋರಿಸಿದೆ, ಇಡೀ ಚಿತ್ರರಂಗಕ್ಕೆ ಎಂದು ಸಹ ವಾಯ್ಸ್ ಮೆಸೇಜ್ ನಲ್ಲಿದೆ. ಇನ್ನು ರಣವೀರ್ ಸಿಂಗ್ ಕೂಡ ಹೊಸದಾಗಿ ಎಚ್ಚರಿಕೆ ಬಂದಿದ್ದು ಕೊಲೆ ಮಾಡುವ ಎಚ್ಚರಿಕೆಯನ್ನು ನೀಡಲಾಗಿದೆ.
ಇದನ್ನೂ ಓದಿ:’ಧುರಂಧರ’ ಬಳಿಕ ಹಾರರ್ ಸಿನಿಮಾಕ್ಕೆ ಕೈ ಹಾಕಿದ ರಣವೀರ್ ಸಿಂಗ್
ಬೆದರಿಕೆ ಬಂದ ಬೆನ್ನಲ್ಲೆ ರಣ್ವೀರ್ ಸಿಂಗ್ ಮನೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ, ಅವರ ಪತ್ನಿ ದೀಪಿಕಾ ಪಡುಕೋಣೆಗೂ ಸಹ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಣವೀರ್ ಸಿಂಗ್ ಅವರ ಮ್ಯಾನೇಜರ್ ಗೆ ಬಂದಿರುವ ವಾಯ್ಸ್ ಮೆಸೇಜ್ ನಲ್ಲಿ ಒಂದು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಡಲಾಗಿದೆ. ಹಣ ನೀಡದೇ ಹೋದರೆ ರಣವೀರ್ ಸಿಂಗ್ ಅವರಿಗೆ ‘ಬುದ್ಧಿ’ ಕಲಿಸಲಾಗಿದೆ ಎಂದು ಹೇಳಲಾಗಿದೆ. ರಣ್ವೀರ್ ಸಿಂಗ್ ಅವರಿಗೆ ಆರೋಪಿಗಳನ್ನು ಕೊಲೆ ಮಾಡುವುದಾಗಿ ಸಹ ಹೇಳಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ