ಎಣ್ಣೆ ಕೊಡಿಸದ್ದಕ್ಕೆ ಕಿರಿಕ್​: ಮಾರಮ್ಮ ದೇಗುಲದ ಬಳಿಯೇ ಮಾರಾಮಾರಿ; ಲಾಂಗ್​ನಿಂದ ದಾಳಿ

ಎಣ್ಣೆ ಕೊಡಿಸದ್ದಕ್ಕೆ ಕಿರಿಕ್​: ಮಾರಮ್ಮ ದೇಗುಲದ ಬಳಿಯೇ ಮಾರಾಮಾರಿ; ಲಾಂಗ್​ನಿಂದ ದಾಳಿ


ಬೆಂಗಳೂರು, ಅಕ್ಟೋಬರ್ 27: ಕುಡಿಯಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನ ಮೇಲೆ ಲಾಂಗ್ ನಿಂದ ಹಲ್ಲೆ ನಡೆಸಿರುವ ಬೆಂಗಳೂರಿನ (ಬೆಂಗಳೂರು) ಅರಸು ಕಾಲೋನಿಯ ಮಾರಮ್ಮ ದೇಗುಲ ಬಳಿ ನಡೆದಿದೆ. ಡೆಲಿವರಿ ಬಾಯ್ ಮುನಿಯಪ್ಪ ಎಂಬವರ ಮೇಲೆ ಗೌತಮ್ ಮತ್ತು ಸೂರ್ಯ ಹಲ್ಲೆ. ಅ.21ರಂದು ರಾತ್ರಿ 10 ಗಂಟೆಗೆ ನಡೆದಿರುವ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಆರೋಪಿಗಳನ್ನ ತಿಲಕ್ನಗರ ಪೊಲೀಸರು ಬಂಧಿಸಿದ್ದಾರೆ.

ಈಸ್ಟ್ ಎಂಡ್ ಬಾರ್, ಮುನಿಯಪ್ಪಮದ್ಯ ಸೇವಿಸುತ್ತಿದ್ದ ವೇಳೆ ಅಲ್ಲಿಗೆ ಬಂದ ಆರೋಪಿಗಳು ಎಣ್ಣೆ ಕೊಡಿ ಎಂದು ಕೇಳಿದ್ದಾರೆ. ಈ ವೇಳೆ ನನ್ನ ಬಳಿ ಹಣ ಇಲ್ಲ, ನಿನಗೆ ಯಾಕೆ ಎಣ್ಣೆ ಕೊಡಬೇಕು ಎಂದು ಮುನಿಯಪ್ಪ ಪ್ರಶ್ನಿಸಿದ್ದಾರೆ. ಇದೇ ಕೋಪದಲ್ಲಿದ್ದ ಆರೋಪಿಗಳು, ಕಾಲೋನಿ ಮಾರಮ್ಮ ದೇವಸ್ಥಾನ ಬಳಿ ಕಿರಿಕ್ ಮಾಡಿದ್ದಾರೆ. ನಾನು ಜೈಲಿನಿಂದ ಹೊರ ಬಂದು 15 ದಿನ ಅಷ್ಟೇ ಆಗಿದ್ದು, ನನ್ನನ್ನು ಕಂಡ್ರೆ ಭಯ ಇಲ್ವಾ ಎಂದು ಗೌತಮ್ ಗಲಾಟೆ ಮಾಡಿದ್ದಾನೆ. ವೇಳೆ ಮಾತಿಗೆ ಮಾತಿಗೆ ಮಾತು ಬೆಳೆದು ಮುನಿಯಪ್ಪ ಮೇಲೆ ಆರೋಪಿಗಳಾದ ಗೌತಮ್ ಮತ್ತು ಸೂರ್ಯ ಲಾಂಗ್ ನಿಂದ ಈ ಹಲ್ಲೆ. ಘಟನೆ ಸಂಬಂಧ ತಿಲಕ್ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ: ವೀಕೆಂಡ್ ಪಾರ್ಟಿ ವೇಳೆ ಕಿರಿಕ್: ಸ್ನೇಹಿತನನ್ನೇ ಕೊಂದು ಆರೋಪಿ ಪರಾರಿ

ಕ್ಯಾಶಿಯರ್ ಕೊಲೆ: ಆರೋಪಿ ಬಂಧನ

ಮದ್ಯಸೇವನೆ ಬಳಿಕ ಸ್ನ್ಯಾಕ್ಸ್ ನೀಡಿದ್ದಕ್ಕೆ ಕ್ಯಾಶಿಯರ್ ಕೊಲೆ ಪ್ರಕರಣ ಸಂಬಂಧ ಘಟನೆ ನಡೆದು 24 ಗಂಟೆಯಲ್ಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಭಾಷ್ ಅಲಿಯಾಸ್ ಮಿಯಾತನನ್ನು ಮಾಲೂರು ಎಂಬಾತನ ಪೊಲೀಸರು ಬಂಧಿಸಿದ್ದು, ಕಳೆದ ರಾತ್ರಿ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದಲ್ಲಿ ಕೊಲೆಯಾಗಿತ್ತು. ಮನೆ ಬಳಿ ಹೊಂಚು ಹಾಕಿ ಚಾಕುವಿನಿಂದ ಇರಿದು ಹಾಸನ ಮೂಲದ ಕುಮಾರ್ ಎಂಬಾತನನ್ನು ಪತ್ನಿ, ಮಕ್ಕಳ ಎದುರೇ ಆರೋಪಿ ಕೊಲೆಗೈದಿದ್ದ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *