ಹೊಸ ಬಟ್ಟೆ ತರಲು ಹೋಗಿದ್ದ ವಿದ್ಯಾರ್ಥಿ ದುರಂತ ಅಂತ್ಯ: ಚೀಲದಲ್ಲಿ ತುಂಬಿ ಕೆರೆಗೆಸೆದ ಸ್ನೇಹಿತರು

ಹೊಸ ಬಟ್ಟೆ ತರಲು ಹೋಗಿದ್ದ ವಿದ್ಯಾರ್ಥಿ ದುರಂತ ಅಂತ್ಯ: ಚೀಲದಲ್ಲಿ ತುಂಬಿ ಕೆರೆಗೆಸೆದ ಸ್ನೇಹಿತರು


ಹೊಸ ಬಟ್ಟೆ ತರಲು ಹೋಗಿದ್ದ ವಿದ್ಯಾರ್ಥಿ ದುರಂತ ಅಂತ್ಯ: ಚೀಲದಲ್ಲಿ ತುಂಬಿ ಕೆರೆಗೆಸೆದ ಸ್ನೇಹಿತರು

ರಾಯಚೂರು, (ಮಾರ್ಚ್ 10): ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಹೊಸ ಬಟ್ಟೆ ಖರೀದಿಗೆ ಹೋದ ಬಾಲಕ ಕರೆಂಟ್ ಶಾಕ್ ತಗುಲಿ ಸಾವನ್ನಪ್ಪಿದ ಘಟನೆ ರಾಯಚೂರು (ರಾಯಚೂರು) ಜಿಲ್ಲೆ ಲಿಂಗಸೂರಿನಲ್ಲಿ ನಡೆದಿದೆ. ಗುಂಡಸಾಗರ ಗ್ರಾಮದ 15 ವರ್ಷದ ಕಾರ್ತಿಕ್ ಮೃತಪಟ್ಟ ಯುವಕ. ಬಟ್ಟೆ ಖರೀದಿಸಿ ವಾಪಸ್ ಬರುವ ವೇಳೆ ನೀರು ಕುಡಿಯಲೆಂದು ಹೋದಾಗ ಕಾರ್ತಿಕ್ ವಿದ್ಯುತ್ ತಗುಲಿ ಸಾವನ್ನಪ್ಪಿದ್ದು, ಇದರಿಂದ ಆತಂಕಗೊಂಡ ಸ್ನೇಹಿತರು, ತಮ್ಮ ಮೇಲೆ ಬರುತ್ತೆಂಬ ಭಯಕ್ಕೆ ಕಾರ್ತಿಕನ ಶವವನ್ನು ಗೋಣಿಚೀಲದಲ್ಲಿ ತುಂಬಿ ಕಲ್ಲು ಕಟ್ಟಿ ಕೆರೆಗೆ ಎಸೆದಿದ್ದಾರೆ.

ಹೊಸ ಬಟ್ಟೆ ತರಲು ಹೋಗಿದ್ದ ಸ್ನೇಹಿತರು

ಇಂದು (ಮಾರ್ಚ್ 10) ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಇತ್ತು. ಹೀಗಾಗಿ ಸ್ನೇಹಿತರು ನಿನ್ನೆ(ಮಾರ್ಚ್ 09) ಹೊಸ ಬಟ್ಟೆ ಖರೀದಿಸಲು ಬೈಕ್‌ನಲ್ಲಿ ಲಿಂಗಸ್ಗೂರಿಗೆ ಹೋಗಿದ್ದರು. ಬಟ್ಟೆ ಎಲ್ಲಾ ಖರೀದಿಸಿ ವಾಪಸ್ ಗುಂಡಸಾಗರಕ್ಕೆ ಹೊರಟ್ಟಿದ್ದರು. ಆದರೆ, ದಾರಿಯಲ್ಲಿ ಕಾರ್ತಿಕನಿಗೆ ಬಾಯಾರಿಕೆಯಾಗಿ ಗುಂಡಸಾಗರಕ್ಕೆ ಈ ನಾಲ್ಕೈದು ಕಿಮಿ ಇರುವ ಮಾರ್ಗ ಮಧ್ಯೆ ರಸ್ತೆ ಪಕ್ಕದ ಹೊಲದಲ್ಲಿ ನೀರು ಕುಡಿಯಲು ಹೋಗಿದ್ದ. ಆಗ ಬೋರ್ ವೆಲ್ ನ ವಿದ್ಯುತ್ ತಗುಲಿದೆ, ಬಿದ್ದು ಒದ್ದಾಡಿದ್ದಾನೆ. ಬಳಿಕ ಸ್ನೇಹಿತರು ಕಾರ್ತಿಕ್ ನನ್ನನ್ನು ಬೈಕ್ ನಲ್ಲಿ ಕೂರಿಸಿಕೊಂಡು ಚಿಕಿಲಿಂಗಸುಗೂರು ತಾಲೂಕು ಆಸ್ಪತ್ರೆಗೆ ತೆರಳಲು ಮುಂದಾಗಿದ್ದಾರೆ. ಆದರೆ ಮಾರ್ಗ ಮಧ್ಯೆ ಕಾರ್ತಿಕ್ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಅನ್ಯಧರ್ಮದವರೊಂದಿಗೆ ಮೊಮ್ಮಗಳು ವಿವಾಹ: ಇದೆ ಸಿಟ್ಟಿನಲ್ಲಿ ಮರಿಮೊಮ್ಮಗನನ್ನ ಕೊಂದ ಅಜ್ಜಿ

ಕಾರ್ತಿಕ್ ಮೃತದೇಹವನ್ನು ಕೆರೆಗೆಸೆದ ಸ್ನೇಹಿತರು

ಈ ವೇಳೆ ಆತನ ಕಾಲುಗಳು ರಸ್ತೆಯ ತಾಗಿ ರಕ್ತ ಗಾಯ ಕಾರಣ.ಇದರಿಂದ ಅವರ ಮೇಲೆ ಕೊಲೆ ಆರೋಪ ಬರುತ್ತೆ ಎಂದು ಆತಂಕಗೊಂಡ ಸ್ನೇಹಿತರು, ಕಾರ್ತಿಕ್ ನ ಮೃತದೇಹವನ್ನ ಬೈಕ್ ಮೇಲೆ ಕೂರಿಸಿಕೊಂಡು ಲಿಂಗಸುಗೂರು ಎಪಿಎಂಸಿ ಬಳಿ ತೆರಳಿದ್ದು, ಅಲ್ಲಿ ಚೀಲದಲ್ಲಿ ಕಾರ್ತಿಕ್ ಮೃತದೇಹ ಹಾಕಿ ಮೂಟೆ ಕಟ್ಟಿದ್ದಾರೆ. ಬಳಿಕ ಮೂರ್ನಾಲ್ಕು ಕಲ್ಲುಗಳನ್ನ ಹಾಕಿ ಎಪಿಎಂಸಿ ಬಳಿಯ ಕರಡಕಲ್ ಕೆರೆಯಲ್ಲಿ ಬೀಸಾಡಿದ್ದಾರೆ.ಬಳಿಕರಿಗೆ ಬಂದು ಮದುವೆ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಆದರೆ ಘಟನೆಯ ಬಗ್ಗೆ ತುಟಿ ಬಿಚ್ಚಿಲ್ಲ. ಇನ್ನೊಂದೆಡೆ ತಡರಾತ್ರಿ ಆದ್ರೂ ಮಗ ಮನೆಗೆ ಬಾರದಕ್ಕೆ ಕಾರ್ತಿಕ್ ಮನೆಯವರು ಹುಡುಕಾಡಿದ್ದು, ಕೊನೆಗೆ ಸಂಬಂಧಿಯೊಬ್ಬ ಕಾರ್ತಿಕ್ ಸ್ನೇಹಿತರನ್ನು ಪ್ರಶ್ನಿಸಿದಾಗ ಮೂಟೆ ಕಟ್ಟಿ ಕರೆಗೆ ಬೀಸಾಡಿದ್ದಾಗ ತಪ್ಪೊಪ್ಪಿಕೊಂಡಿದ್ದಾಳೆ.

ಈ ಮಾಹಿತಿ ತಿಳಿದು ಕರಡಕಲ್ ಕೆರೆ ಬಳಿ ಪೊಲೀಸರು ಭೇಟಿ ನೀಡಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶವಕ್ಕಾಗಿ ಕರೆ ಮಾಡಿ ಹುಡುಕಾಟ ನಡೆಸಿದ್ದು, ಗೋಣಿ ಚೀಲದಲ್ಲಿ ಕಾರ್ತಿಕ್ ಶವವಿದೆ. ಇನ್ನು ಕಾರ್ತಿಕ್ ಬಂಧನ ಆತನನ್ನ ಕರೆದೊಯ್ದಿದ್ದ ಸ್ನೇಹಿತರ ವಿರುದ್ಧ ಕೊಲೆ ಆರೋಪದಡಿ ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *