ಭಾರತದ ದೂರಗಾಮಿ ಯೋಜನೆ; 5ಜಿಗಿಂತ 1,000 ಪಟ್ಟು ಹೆಚ್ಚು ವೇಗದ ಇಂಟರ್ನೆಟ್ ನೀಡುವ 6ಜಿ ಅಭಿವೃದ್ಧಿಗೆ ಹೆಜ್ಜೆ

ಭಾರತದ ದೂರಗಾಮಿ ಯೋಜನೆ; 5ಜಿಗಿಂತ 1,000 ಪಟ್ಟು ಹೆಚ್ಚು ವೇಗದ ಇಂಟರ್ನೆಟ್ ನೀಡುವ 6ಜಿ ಅಭಿವೃದ್ಧಿಗೆ ಹೆಜ್ಜೆ


ಜುಲೈ, ಅಕ್ಟೋಬರ್ 26: 3ಜಿ, 4ಜಿ ರೇಸ್‌ನಲ್ಲಿ ಯಾವಾಗಲೂ ಹಿಂದುಳಿದಿರುವ ಭಾರತ ಇದೀಗ 6ಜಿ ಅಭಿವೃದ್ಧಿಯಲ್ಲಿ (6G ನೆಟ್‌ವರ್ಕ್) ಜಗತ್ತಿನ ಬಲಾಢ್ಯ ದೇಶಗಳ ಜೊತೆ ಸರಿಸಮಾನವಾಗಿ ಹೆಜ್ಜೆ ಹಾಕಲು ಅಣಿಯಾಗಿದೆ. 2027 ರೊಳಗೆ ವಿಕಸಿತ ಭಾರತ ನಿರ್ಮಿಸುವ ಸಂಕಲ್ಪ ತೊಟ್ಟಿರುವ ಸರ್ಕಾರ ಇದೀಗ 6ಜಿ ಅಭಿವೃದ್ಧಿಯನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಜಾಗತಿಕ ಪರಿಣಿತರ ಜೊತೆ ಸಹಭಾಗಿತ್ವ (ಜಾಗತಿಕ ಸಹಯೋಗ), ದೇಶೀಯವಾಗಿ ಆವಿಷ್ಕಾರಗಳು, ಉತ್ಕೃಷ್ಟ ಆರ್ ಅಂಡ್ ಡಿ ಇತ್ಯಾದಿ ಮೂಲಕ 6 ನೇ ತಲೆಮಾರಿನ ವೈರ್ಲೆಸ್ ಟೆಕ್ನಾಲಜಿಯನ್ನು ರಚಿಸುವ ಭಾರತ ಕನಸು ಕಂಡಿದೆ. ಭವಿಷ್ಯದ ಟೆಲಿಕಾಂ ತಂತ್ರಜ್ಞಾನಕ್ಕೆ ಭಾರತವೇ ಜಾಗತಿಕ ಕೇಂದ್ರವಾಗಬೇಕೆಂದು ಹೊರಟಿದೆ.

ಏನಿದು 6ಜಿ ಟೆಕ್ನಾಲಜಿ?

6ಜಿ ಎಂದರೆ ಆರನೇ ತಲೆಮಾರಿನ ವೈರ್ಲೆಸ್ ಟೆಕ್ನಾಲಜಿ. ಈಗ 5ಜಿ ನೆಟ್ವರ್ಕ್ ಎಲ್ಲೆಡೆ ಅಳವಡಿಕೆ ಆಗುತ್ತಿದೆ. ಮೊದಲ 2ಜಿ ಬಂತು, ನಂತರ 3ಜಿ, 4ಜಿ ಬಂತು. 5ಜಿ ಈಗ ಅಡಿ ಇಟ್ಟಿದೆ. 6ಜಿಯನ್ನು ವಿಶ್ವದ ಹಲವೆಡೆ ಪ್ರಗತಿಯಲ್ಲಿದೆ. ಕೆಲವೆಡೆ 7ಜಿ ತಂತ್ರಜ್ಞಾನದ ಆಲೋಚನೆಯೂ ನಡೆದಿದೆ.

ಇದನ್ನೂ ಓದಿ: ಕರೆನ್ಸಿ ಇಲ್ಲ, ದೊಡ್ಡ ಸೇನೆ ಇಲ್ಲ, ಕಳ್ಳಕಾಕರಿಲ್ಲ; ರಾತ್ರಿ ಮನೆಗಳಿಗೆ ಬೀಗ ಹಾಕಲ್ಲ; ಎಲ್ಲೆಡೆ ಇಂಥದ್ದೂ ಒಂದು ದೇಶ

5ಜಿಗೆ ಚುರುಕು 6ಜಿ ನೆಟ್ವರ್ಕ್ ಬಹಳ ಕಡಿಮೆ. 1,000 ಪಟ್ಟು ಹೆಚ್ಚು ವೇಗದ ಇಂಟರ್ನೆಟ್ ಲಭ್ಯವಾಗುತ್ತದೆ. 6ಜಿ ಜೊತೆಗೆ ಐ ಆವಿಷ್ಕಾರಗಳೂ ಸೇರಿಬಿಟ್ಟರೆ ಶಕ್ತಿಶಾಲಿ ದೂರವಾಣಿ ಮತ್ತು ಇಂಟರ್ನೆಟ್ ತಂತ್ರಜ್ಞಾನಗಳು ಲಭ್ಯವಾಗುತ್ತವೆ. ರೋಬೋಟಿಕ್ಸ್, ರಿಯಲ್ ಟೈಮ್ ಗೇಮಿಂಗ್, ರಿಮೋಟ್ ಮೆಡಿಕಲ್ ಸರ್ಜರಿ ಇತ್ಯಾದಿ ಬಹಳ ಉಪಯುಕ್ತವಾದ ಕಾರ್ಯಗಳು ಸುಲಭವಾಗುತ್ತವೆ.

ಯಾವಾಗ ಬರುತ್ತದೆ 6ಜಿ?

ಎರಡು ವರ್ಷದ ಹಿಂದೆಯೇ ಭಾರತವು 6ಜಿ ವಿಶನ್ ಅನ್ನು ಬಿಡುಗಡೆ ಮಾಡಿತ್ತು. ಅದರ ಪ್ರಕಾರ 2030ರೊಳಗೆ ಭಾರತದಲ್ಲಿ 6ಜಿಯನ್ನು ಅಳವಡಿಸುವ ಗುರಿಯನ್ನು ಇಡಲಾಗಿದೆ. ಅದಕ್ಕೆ ಪೂರಕವಾದ ಮೂಲಸೌಕರ್ಯಗಳನ್ನು ಅಳವಡಿಸಲಾಗುತ್ತಿದೆ. 6ಜಿ ತಂತ್ರಜ್ಞಾನಕ್ಕೆ ಸಂಶೋಧನೆ ಮತ್ತು ನಾವೀನ್ಯತೆಗೆ ಉತ್ತೇಜಿಸಲು 106 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಇದನ್ನೂ ಓದಿ: ಭಾರತದಿಂದ 7nm ಚಿಪ್ ಯೋಜನೆ; ಇದಲಿದೆ ಗೇಮ್ ಚೇಂಜರ್; ಯಾಕೆ ಈ ಚಿಪ್ ಮಹತ್ವದ್ದು ಗೊತ್ತಾ?

ಭಾರತ್ 6ಜಿ ಮೈತ್ರಿಯನ್ನು ರಚಿಸಲಾಗಿದೆ. ಇದರಲ್ಲಿ ಸ್ಪೆಕ್ಟ್ರಂ, ಟೆಕ್ನಾಲಜಿ, ಆಯಪ್ ಇತ್ಯಾದಿ ಏಳು ವರ್ಕಿಂಗ್ ಗ್ರೂಪ್ಗಳಿವೆ. ಅಮೆರಿಕ, ಯೂರೋಪ್, ಫಿನ್ಲೆಂಡ್, ಸೌತ್ ಕೊರಿಯಾ, ಜಪಾನ್ ಇತ್ಯಾದಿ ದೇಶಗಳಲ್ಲಿ 6ಜಿ ಅಭಿವೃದ್ಧಿ ಸಂಘಟನೆಗಳು ನಿರತವಾಗಿವೆ. ಅವರ ಜೊತೆ ಭಾರತ್ 6ಜಿ ಅಲೆಯನ್ಸ್ ಕೂಡ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ. ಮೂಲಕ ಈ ಜಾಗತಿಕ ಪ್ರಮುಖ ಶಕ್ತಿಗಳೊಂದಿಗೆ ಸರಿಸಮಾನವಾಗಿ 6ಜಿಯತ್ತ ಭಾರತವೂ ಹೆಜ್ಜೆ ಹಾಕುತ್ತದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *