ಜನರು ಮತ್ತು ಸಂಸ್ಥೆಗಳ ಆದಾಯಕ್ಕೆ ಕಾನೂನಿನ ಪ್ರಕಾರ ತೆರಿಗೆ ಪಾವತಿಯಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಐಟಿ ಇಲಾಖೆ ಇದೆ. ಜನರು ದೊಡ್ಡ ಮಟ್ಟದ ಆದಾಯವನ್ನು ಪತ್ತೆ ಮಾಡಲು ಇಲಾಖೆ (ಆದಾಯ ತೆರಿಗೆ) ಬಳಿ ವಿವಿಧ ಮಾರ್ಗೋಪಾಯಗಳಿವೆ. ಅದಕ್ಕಾಗಿ ಬ್ಯಾಂಕು, ಅಂಚೆ ಕಚೇರಿ ಇತ್ಯಾದಿ ಹಣಕಾಸು ಸಂಸ್ಥೆಗಳ ನೆರವನ್ನು ಐಟಿ ಇಲಾಖೆ ಪಡೆಯುತ್ತದೆ. ಒಬ್ಬ ವ್ಯಕ್ತಿಯಿಂದ ಮಿತಿಗಿಂತ ಹೆಚ್ಚಿನ ಮೊತ್ತದ ವಹಿವಾಟು ಆದಾಗ ಸ್ಟೇಟ್ಮೆಂಟ್ ಆಫ್ ಫೈನಾನ್ಷಿಯಲ್ ಟ್ರಾನ್ಸಾಕ್ಷನ್ ಎಂಬ ಮಾರ್ಗದ ಮೂಲಕ ಮಾಹಿತಿ ಪಡೆಯುತ್ತದೆ. ಆಗ ಇಲಾಖೆಯು ವ್ಯಕ್ತಿಯ ಹಣಕಾಸು ಚಟುವಟಿಕೆ, ಆದಾಯ ಮೂಲಗಳನ್ನು ಶೋಧಿಸುವ ಕಾರ್ಯ ಆರಂಭಿಸಲು ಸಾಧ್ಯ. ಅಂಥ ಕೆಲ ಹಣಕಾಸು ವಹಿವಾಟುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಕ್ಯಾಷ್ ಪೇಮೆಂಟ್
ಬ್ಯಾಂಕ್, ಪೇ ಆರ್ಡರ್, ಬ್ಯಾಂಕರ್ಸ್ ಚೆಕ್ ಗಳಿಗೆ ಮಾಡುವ ಒಟ್ಟಾರೆ ಕ್ಯಾಶ್ ಪೇಮೆಂಟ್ ಒಂದು ಹಣಕಾಸು ವರ್ಷದ 10 ಲಕ್ಷ ರೂಗಿಂತ ಹೆಚ್ಚಿದೆ, ಅದಕ್ಕೆ ಸಂಬಂಧಿಸಿದ ಹಣಕಾಸು ಸಂಸ್ಥೆಗಳು ಆದಾಯ ತೆರಿಗೆ ಇಲಾಖೆ ಗಮನಕ್ಕೆ ತರಬೇಕು ಎಂಬ ನಿಯಮವಿದೆ.
ಪಿಪಿಐಗಳಿಗೆ ಪಾವತಿ
ಆರ್ಬಿಐನಿಂದ ನೀಡಲಾದ ಪಿಪಿಐಗೆ (ಪ್ರೀಪೇಡ್ ಇನ್ಸ್ಟ್ರುಮೆಂಟ್ಸ್) ಕ್ಯಾಶ್ ಪಾವತಿ ಒಂದು ವರ್ಷದಲ್ಲಿ 10 ಲಕ್ಷ ರೂ ಮೀರಿದರೆ ಅದು ಐಟಿ ಗಮನಕ್ಕೆ ಬರುತ್ತದೆ.
ಕ್ಯಾಷ್ ಡೆಪಾಸಿಟ್
ಒಬ್ಬ ವ್ಯಕ್ತಿ ಅಥವಾ ಹೆಚ್ಚಿನ ಚಾಲ್ತಿ ಖಾತೆಗಳಿಗೆ (ಕರೆಂಟ್ ಅಕೌಂಟ್) ಒಂದು ಹಣಕಾಸು ಪಡೆದ ಒಟ್ಟಾರೆ 50 ಲಕ್ಷ ರೂ ಹೆಚ್ಚಿನ ಕ್ಯಾಶ್ ಡೆಪಾಸಿಟ್ ಆದರೆ…
ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್ನಿಂದ ತೆರಿಗೆ ಉಳಿತಾಯದ ಜೊತೆಗೆ ತಿಂಗಳಿಗೆ 20,000 ರೂ ಆದಾಯವನ್ನು ಹೇಗೆ ಸೃಷ್ಟಿಸುವುದು? ಇಲ್ಲಿದೆ ಡೀಟೇಲ್ಸ್
ಕ್ಯಾಶ್ ವಿತ್ತರಾಯಲ್
ಒಬ್ಬ ವ್ಯಕ್ತಿಯ ಕರೆಂಟ್ ಅಕೌಂಟ್‌ನಿಂದ ಒಟ್ಟು 50 ಲಕ್ಷಕ್ಕೂ ಅಧಿಕ ಮೊತ್ತದ ಕ್ಯಾಷ್ ವಿತ್ಡ್ರಾ ಮಾಡಿದ…
ಸೇವಿಂಗ್ ಅಕೌಂಟ್‌ಗಳಿಗೆ ಕ್ಯಾಷ್ ಡೆಪಾಸಿಟ್
ಕರೆಂಟ್ ಅಕೌಂಟ್ ಮತ್ತು ಫಿಕ್ಸೆಡ್ ಡೆಪಾಸಿಟ್ ಅಲ್ಲ, ಇತರ ಅಕೌಂಟ್‌ಗಳಿಗೆ ಒಂದು ವರ್ಷದವರೆಗೆ ಇಡಲಾದ ಕ್ಯಾಶ್ ಡೆಪಾಸಿಟ್ 10 ಲಕ್ಷ ರೂ ಮೀರಿದಾಗ ಐಟಿ ಗಮನಕ್ಕೆ ತರದಿದ್ದರೆ.
ಕ್ಯಾಷ್ ಪೇಮೆಂಟ್ ಮಿತಿ
ಸರಕು ಮತ್ತು ಸೇವೆಗಳ ಮಾರಾಟದಲ್ಲಿ ಒಂದು ವಹಿವಾಟಿನಲ್ಲಿ 2 ಲಕ್ಷ ರೂಗಿಂತ ಅಧಿಕ ಕ್ಯಾಶ್ ಪೇಮೆಂಟ್ ಬಂದಾಗ ಅದು ಐಟಿ ಗಮನಕ್ಕೆ ಹೋಗಬಹುದು.
ಕ್ರೆಡಿಟ್ ಕಾರ್ಡ್ಗೆ ಕ್ಯಾಷ್ ಪೇಮೆಂಟ್
ಕ್ರೆಡಿಟ್ ಕಾರ್ಡ್‌ಗಳಿಗೆ ಒಂದು ಲಕ್ಷ ರೂಗಿಂತ ಅಧಿಕ ಪಾವತಿಯನ್ನು ಕ್ಯಾಷ್‌ನಲ್ಲಿ…
ಕ್ರೆಡಿಟ್ ಕಾರ್ಡ್ಗೆ ಇತರ ಪೇಮೆಂಟ್
ಕ್ರೆಡಿಟ್ ಕಾರ್ಡ್‌ಗೆ ಕ್ಯಾಶ್ ಇತರ ಮಾರ್ಗಗಳಲ್ಲಿ ಪೇಮೆಂಟ್ ಮಾಡಿದಾಗ ಒಂದು ವರ್ಷದಲ್ಲಿ 10 ಲಕ್ಷ ರೂಗಿಂತ ಅಧಿಕ ಇದ್ದಾಗ, ಐಟಿ ಗಮನಕ್ಕೆ ಬರುತ್ತದೆ.
ನಿಶ್ಚಿತ ಠೇವಣಿ
ಟೈಮ್ ಡೆಪಾಸಿಟ್ ಅಥವಾ ಫಿಕ್ಸೆಡ್ ಡೆಪಾಸಿಟ್‌ಗಳಿಗೆ ಒಬ್ಬ ಮಗುವಿಗೆ 10 ಲಕ್ಷ ರೂಗಿಂತ ಹೆಚ್ಚಿನ ಮೊತ್ತವನ್ನು ಹಾಕಿದಾಗ…
ಬಾಂಡ್ ಅಥವಾ ಡಿಬಂಚರ್
ಬಾಂಡ್ ಅಥವಾ ಡಿಬಂಚರ್‌ಗಳ ಖರೀದಿಗೆ ಒಮ್ಮೆ 10 ಲಕ್ಷ ರೂಗಿಂತ ಹೆಚ್ಚು ಹಣ ವ್ಯಯಿಸಿದಾಗ…
ಷೇರು ಖರೀದಿಗೆ…
ಒಂದು ವರ್ಷದ 10 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಷೇರುಗಳನ್ನು ಖರೀದಿಸಿದಾಗ…
ಷೇರು ಮರುಖರೀದಿ…
ಓಪನ್ ಮಾರ್ಕೆಟ್ ಖರೀದಿ ಹೊರತಾಗಿ, ಷೇರುಗಳ ಮರುಖರೀದಿಗೆ ಒಂದು ವರ್ಷದ 10 ಲಕ್ಷ ರೂ ಮೊತ್ತವಾದಾಗ…
ಮ್ಯೂಚುವಲ್ ಫಂಡ್ ಖರೀದಿ
ಒಂದು ವರ್ಷದಲ್ಲಿ 10 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಮ್ಯೂಚುವಲ್ ಫಂಡ್ ಯುನಿಟ್ ಅನ್ನು ಖರೀದಿಸಲಾಗಿದೆ…
ಇದನ್ನೂ ಓದಿ: ಹಣದ ರಹಸ್ಯಗಳು: ಹಣಕಾಸು ಸಂಕಷ್ಟ ಬರಬಾರದೆಂದಾದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ…
ಸ್ಥಿರಾಸ್ತಿಯ ಖರೀದಿ ಅಥವಾ ಮಾರಾಟ
ನಿವೇಶನ, ಮನೆ ಇತ್ಯಾದಿ ಚಿರಾಸ್ತಿಯ ವಹಿವಾಟು ಮೌಲ್ಯ ಅಥವಾ ಸ್ಟ್ಯಾಂಪ್ ವ್ಯಾಲ್ಯುಯೇಷನ್ 30 ಲಕ್ಷ ರೂಗಿಂತ ಹೆಚ್ಚಿದೆ…
ಫಾರೆಕ್ಸ್ ವಹಿವಾಟು
ವಿದೇಶೀ ಕರೆನ್ಸಿಯ ಮಾರಾಟ ಅಥವಾ ಫಾರೆಕ್ಸ್ ಕಾರ್ಡ್ ಸಾಲದಿಂದ 10 ಲಕ್ಷ ರೂ ಮೀರಿದಾಗ…
ವಿದೇಶೀ ಕರೆನ್ಸಿ ಖರೀದಿ…
ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್, ಟ್ರಾವೆಲರ್ಸ್ ಚೆಕ್, ಡ್ರಾಫ್ಟ್ ಅಥವಾ ಇನ್ಯಾವುದೇ ಇನ್ಸ್‌ಟ್ರುಮೆಂಟ್ ಮೂಲಕ ವಿದೇಶೀ ಕರೆನ್ಸಿ ಖರೀದಿ ಮಾಡುವ ವೆಚ್ಚ ಒಂದು ವರ್ಷದ 10 ಲಕ್ಷ ರೂ ಮೀರಿದ…
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ