ಕಡ್ಲೆಪುರಿ ಮಾರುತ್ತಿದ್ದ ಕಮಲಾಕರ ಭಟ್ ಜ್ಯೊತಿಷಿ ಆಗಿದ್ಹೇಗೆ? ಬಗೆದಷ್ಟೂ ಬಯಲಾಗ್ತಿದೆ ಬಂಡವಾಳ

ಕಡ್ಲೆಪುರಿ ಮಾರುತ್ತಿದ್ದ ಕಮಲಾಕರ ಭಟ್ ಜ್ಯೊತಿಷಿ ಆಗಿದ್ಹೇಗೆ? ಬಗೆದಷ್ಟೂ ಬಯಲಾಗ್ತಿದೆ ಬಂಡವಾಳ


ಬಗೆದಷ್ಟೂ ಬಯಲಾಗ್ತಿದೆ ಕಮಲಾಕರ ಭಟ್ ಬಂಡವಾಳಚಿತ್ರದ ಕ್ರೆಡಿಟ್ ಮೂಲ: tv9

ಕಾರವಾರ, ಫೆಬ್ರವರಿ 7: ಉತ್ತರ ಕನ್ನಡದ ಸಿದ್ದಾಪುರದಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣದಲ್ಲಿ ಬಂಧಿತರಾದ ಜ್ಯೋತಿಷಿ ಕಮಲಾಕರ ಭಟ್ (ಕಮಲಾಕರ ಭಟ್) ಮತ್ತು ಸುಚಿತ್ರಾ ಹಿನ್ನೆಲೆಯ ಬಗ್ಗೆ ಬಗೆದಷ್ಟೂ ರಹಸ್ಯಗಳು ಬಯಲಾಗುತ್ತಿವೆ. ಪ್ರಭಾವಿ ಜ್ಯೋತಿಷಿ ಕಮಲಾಕರ ಭಟ್ ಅವರ ನಿಗೂಢ ಹಿನ್ನೆಲೆ ಮತ್ತು ಸಂಪತ್ತಿನ ಬಗ್ಗೆ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಕೂಡ ಹುಟ್ಟಿಕೊಂಡಿವೆ. ಸಾಮಾನ್ಯ ವ್ಯಕ್ತಿಯಾಗಿ ವೀಳ್ಯದೆಲೆ ಮತ್ತು ಕಡ್ಲೆಪುರಿ ಮಾರಾಟ ಮಾಡುತ್ತಿದ್ದ ಕಮಲಾಕರ ಭಟ್ ಕೋಟ್ಯಧಿಪತಿ ಜ್ಯೋತಿಷಿ ಹೇಗೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

ಕಮಲಾಕರ ಭಟ್ ಅವರ ಮೂಲ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ. 2005 ರ ಮೊದಲು, ಅವರು ತಮ್ಮ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಡ್ಲೆಪುರಿ ಮತ್ತು ವೀಳ್ಯದೆಲೆಯನ್ನು ಮಾರಾಟ ಮಾಡುತ್ತಿದ್ದರು. ಆರ್ಥಿಕವಾಗಿ ಹಿಂದುಳಿದಿದ್ದ ಅವರು, ಇದ್ದಕ್ಕಿದ್ದಂತೆ 2005ರಲ್ಲಿ ನಾಪತ್ತೆಯಾಗುತ್ತಾರೆ. ನಂತರ ಅವರು ಕೇರಳಕ್ಕೆ ತೆರಳಿ ಅಲ್ಲಿ ಜ್ಯೋತಿಷ್ಯ ಹಾಗೂ ವಶೀಕರಣ ಶಾಸ್ತ್ರವನ್ನು ಕಲಿತರೆಂದು ಹೇಳಲಾಗುತ್ತಿದೆ. ಕಲಿಕೆ ನಂತರ ಗ್ರಾಮಕ್ಕೆ ಮರಳಿ ಜ್ಯೋತಿಷ್ಯ ವೃತ್ತಿಯನ್ನು ಪ್ರಾರಂಭಿಸುತ್ತಾರೆ. ಆರಂಭದಲ್ಲಿ ಅಷ್ಟೇನೂ ಹೆಸರು ಮಾಡದಿದ್ದರೂ, ನಂತರ ಅವರು ಬೆಂಗಳೂರಿಗೆ ತೆರಳಿದ ಮೇಲೆ ಅವರ ಜೀವನದ ದಿಕ್ಕೇ ಬದಲಾಯಿತು.

ಟಿವಿ, ಸಾಮಾಜಿಕ ಮಾಧ್ಯಮದಿಂದ ಬದಲಾದ ಬದುಕು

ಬೆಂಗಳೂರಿನಲ್ಲಿ ಕೆಲವು ಟಿವಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ತಮ್ಮ ಪ್ರಚಾರವನ್ನು ಮಾಡಿಕೊಂಡ ಕಮಲಾಕರ ಭಟ್, ಅಲ್ಪಾವಧಿಯಲ್ಲೇ ಅಪಾರ ಜನಪ್ರಿಯತೆ ಗಳಿಸಿದರು. ಸುಮಾರು 10 ರಿಂದ 15 ವರ್ಷಗಳ ಅವಧಿಯಲ್ಲಿ ಅವರು ಕೋಟ್ಯಂತರ ರೂಪಾಯಿ ಸಂಪಾದಿಸಿ, ಬರಿಗೈಯಿಂದ ಕೋಟ್ಯಾಧಿಪತಿಯಾಗಿ ಬೆಳೆದರು. ಅವರ ಈ ಅಸಾಮಾನ್ಯ ಮತ್ತು ಅತಿ ವೇಗದ ಸಂಪಾದನೆಯು ಸಾರ್ವಜನಿಕರಲ್ಲಿ ಹಾಗೂ ಅವರ ಭಕ್ತರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಹಣವನ್ನು ಕೇವಲ ಜ್ಯೋತಿಷ್ಯದ ಮೂಲಕವೇ ಗಳಿಸಲಾಯಿತೇ ಅಥವಾ ಬೇರೆ ಯಾವುದೇ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದರೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.

ತಿಂಗಳಿಗೆ ಮೂರ್ನಾಲ್ಕು ಲಕ್ಷ ರೂ. ಕಚೇರಿ ನಿರ್ವಹಣೆಗೆ ಖರ್ಚು!

ಕಮಲಾಕರ ಭಟ್ ಬೆಂಗಳೂರು, ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ತಮ್ಮ ಕಚೇರಿಗಳನ್ನು ತೆರೆದಿದ್ದರು. ಪ್ರತಿಯಲ್ಲಿ 10 ರಿಂದ 15 ಜನ ಸಿಬ್ಬಂದಿ ಕೆಲಸ ಮಾಡಲು ಕಚೇರಿ. ಈ ಬಗ್ಗೆ ಅವರು ಕಚೇರಿ ನಡೆಸುತ್ತಿದ್ದ ಕಟ್ಟಡದ ಬಗ್ಗೆ ಮಾಹಿತಿ ಇದೆ. ತಿಂಗಳಿಗೆ ಸುಮಾರು ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳನ್ನು ತಮ್ಮ ಕಚೇರಿ ನಿರ್ವಹಣೆ ಮತ್ತು ಸಿಬ್ಬಂದಿ ವೇತನಕ್ಕಾಗಿ ಖರ್ಚು ಮಾಡಿದೆ. ಇಷ್ಟು ದೊಡ್ಡ ಪ್ರಮಾಣದ ಖರ್ಚುಗಳನ್ನು ನಿಭಾಯಿಸಲು ಅವರಿಗೆ ತಿಂಗಳ ಆದಾಯ ಎಲ್ಲಿಂದ ಬರುತ್ತಿದೆ ಎಂಬ ಬಗ್ಗೆ ಈಗ ಚರ್ಚೆಯಾಗುತ್ತಿದೆ.

ಸಿದ್ದಾಪುರ ಮತ್ತು ಶಿವಮೊಗ್ಗ ಭಾಗದಲ್ಲಿ ಕೆಲವು ಬ್ರೋಕರ್‌ಗಳನ್ನು ನೇಮಿಸಿಕೊಂಡು, ವಶೀಕರಣ ಮತ್ತು ಜ್ಯೋತಿಷ್ಯ ಸೇವೆಗಳಿಗಾಗಿ ಗ್ರಾಹಕರನ್ನು ಕರೆತರಲು. ಇದರಿಂದ ಬ್ರೋಕರ್‌ಗಳಿಗೆ ಕಮಿಷನ್ ನೀಡಿ, ತಮ್ಮ ಪ್ರಚಾರವನ್ನು ಹೆಚ್ಚಿಸಿಕೊಂಡರು.

ಇದನ್ನೂ ಓದಿ: ‘ಅವಳಿಗಾಗಿ ನಾಯಿ ತರದಾಡಿದ್ದೆ’: ಕಮಲಾಕರನ ಒಂದೊಂದೇ ರಂಗಿನಾಟ ಬಯಲು!

ಸುಚಿತ್ರಾ ಕೂಡ ಆರಂಭದಲ್ಲಿ ಬ್ರೋಕರ್ ಕೆಲಸ ಮಾಡುವುದಾಗಿದೆ. ಸುಚಿತ್ರಾ ಪತಿ ಆಕೆ ಕಮಲಾಕರ ಭಟ್, ಇತರ ಯುವಕರೊಂದಿಗೂ ಸುಚಿತ್ರಾ ಸಂಬಂಧ ಹೊಂದಿದ್ದರು ಮತ್ತು ಅವರ ಇನ್ಸ್ಟಾಗ್ರಾಮ್ ರೀಲ್ಗಳು ತಮಗೆ ಬೇಸರ ತಂದಿವೆ ಎಂದು ಆರೋಪಿಸಿದ್ದಾರೆ. ಇದೀಗ ಕಮಲಾಕರ ಭಟ್ ಬಂಧನದೊಂದಿಗೆ ಅವರ ಪ್ರಭಾವ ಮತ್ತು ಸಂಪತ್ತಿನ ಮೂಲದ ರಹಸ್ಯಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಕುರಿತು ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ಹೋಬೀಳುವ ನಿರೀಕ್ಷೆ ಇದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *