ಬೆಂಗಳೂರು, ಜನವರಿ 14: ಬೆಂಗಳೂರು (ಬೆಂಗಳೂರು) ರಾಮಮೂರ್ತಿ ವಿರುದ್ಧ ನಡೆದಿದ್ದ ಟೆಕ್ಕಿ ಯುವತಿ ಕೊಲೆ ಪ್ರಕರಣ ಸಂಬಂಧ ಆರೋಪಿ ಕರ್ನಲ್ ಕುರೈ ಕಂಬಿ ಎಣಿಸುತ್ತಿದ್ದಾನೆ. ಆದರೆ ತನಿಖೆ ವೇಳೆ ಆತ ಹೇಳಿದ ರೋಚಕ ಸಂಗತಿಗಳನ್ನು ಕೇಳಿ ಪೊಲೀಸರಿಗೇ ಶಾಕ್ ಆಗಿದೆ. ಯುವತಿಯ ಚಲನವಲನವನ್ನು ಎರಡು ತಿಂಗಳಿಂದ ಗಮನಿಸಿದ್ದ ಕರ್ನಲ್ ಕುರೈ ಓದುವ ನೆಪದಲ್ಲಿ, ಬಟ್ಟೆ ತೆಗೆದುಕೊಳ್ಳುವ ನೆಪದಲ್ಲಿ ಟೆರಸ್ ಮೇಲೆ ಹೋಗುತ್ತಿದ್ದ. ಜನವರಿ 3 ರಂದು ಯುವತಿಯ ಸ್ನೇಹಿತೆ ಇಲ್ಲದ ಸಮಯ ನೋಡಿ ಆಕೆಯ ಮನೆಗೆ ತೆರಳಿ ಘನಘೋರ ಕೃತ್ಯ ಎಸಗಿದ್ದ.
ಆರೋಪಿ ಕರ್ನಲ್ ಯುವತಿ ಶರ್ಮಿಳಾ ಮನೆಗೆ ಎಂಟ್ರಿ ಇದೆ ಮೊದಲು. ಇದಕ್ಕೂ ಮೊದಲು ಇಬ್ಬರಿಗೂ ಪರಿಚಯ ಇರಲಿಲ್ಲ. ಆದರೆ ಆರೋಪಿ ಬಾಲ್ಕಿನಿಯ ಸ್ಲೈಡ್ ವಿಂಡೋ ಓಪನ್ ಮಾಡಿದ್ದೇ ರೋಚಕವಾಗಿದ್ದು ಮನೆಯೊಳಗೂ ವಿಚಿತ್ರ ಘಟನೆಗಳು ನಡೆದಿವೆ.
ಪ್ರತಿಭಾವಂತನ ಮೋಹದ ಕೊಲೆ
ಆರೋಪಿ ಕರ್ನಲ್ ಕುರೈ SSLC ನಲ್ಲಿ ಶೇ 97 ಅಂಕ ಪಡೆದಿರುವುದು ಕೂಡ ಈಗ ಬಯಲಾಗಿದೆ. ಕಾಲೇಜಿನಲ್ಲಿ ಸ್ಲೈಡ್ ವಿಂಡೋ ಇದ್ದು, ಒಮ್ಮೆ ಅದರ ಬಾಗಿಲಿನಲ್ಲಿ ಆತನ ಪುಸ್ತಕ ಸಿಕ್ಕಿಹಾಕಿಕೊಂಡಿತ್ತು. ಅದನ್ನು ತೆಗೆಯಲು ಸ್ಲೈಡ್ ವಿಂಡೋ ಓಪನ್ ಮಾಡುವುದನ್ನು ತಿಳಿದುಕೊಂಡಿದ್ದ. ಅದೇ ತಂತ್ರ ಬಳಸಿ ಯುವತಿ ಮನೆಯ ಕಿಟಿಕಿ ತೆಗೆದು ಬೆಡ್ ರೂಂಗೆ ಪ್ರವೇಶಿಸಿದ್ದಾನೆ.
ಯುವತಿ ಮನೆಯಲ್ಲಿ ನಡೆದಿದ್ದೇನು?
ಕುರೈ ಮನೆಯೊಳಕ್ಕೆ ಬಂದಾಗ ಯುವತಿ ಎಂಟ್ರಿಯಾದಾಗ ಅಡುಗೆ ಮನೆಯಲ್ಲಿದ್ದರು. ಸ್ಟವ್ ಆನ್ ಮಾಡಿ ಹಾಲು ಕಾಯಿಸಲು ಇಟ್ಟಿದ್ದರು. ಕುರೈ ನೋಡಿ ಗಾಬರಿಯಾಗಿ ಆತನೊಂದಿಗೆ ಜಗಳ ಆಗುತ್ತಿದೆ. ನಂತರ ಆಕೆ ಪ್ರಜ್ಞಾಹೀನವಾಗಿ ಬಿದ್ದಿದ್ದರು. ಈ ವೇಳೆ ಹಾಲು ಸಂಪೂರ್ಣವಾಗಿ ಉಕ್ಕಿ ಸ್ಟವ್ ಬೆಂಕಿ ಆರಿ ಹೋಗಿತ್ತು. ಬಳಿಕ ಅಡುಗೆ ಮನೆಯಲ್ಲೇ ಯುವತಿಯನ್ನು ಮಲಗಿಸಿ ರೂಂನಲ್ಲಿ ಬೆಂಕಿ ಹಚ್ಚಿ ಪರಾರಿಯಾಗಿರುವ ಬಗ್ಗೆ ತನಿಖೆ ವೇಳೆ ಪತ್ತೆಯಾಗಿದೆ.
ಅಡುಗೆ ಕೋಣೆಯಲ್ಲಿ ಯುವತಿ ದೇಹವಾಗಿದ್ದು, ಗ್ಯಾಸ್ ಲೀಕ್ ಆಗಿ ಬೆಂಕಿ ಆಗಿರಬಹುದು ಎಂದು ಆರಂಭದಲ್ಲಿ, ಅಂದಾಜಿಸಲಾಯಿತು. ಹಾಗೆ ಬೆಂಕಿಯ ತೀವ್ರತೆಗೆ ಮೊಬೈಲ್ ಕೂಡ ಕರಗಿ ಹೋಗಿರಬಹುದು ಎಂದು ಅಂದಾಜಿಸಲಾಯಿತು. ಆದರೆ ಮನೆಯ ವಾತವಾರಣ, ಕೆಲ ಸನ್ನಿವೇಶಗಳು ಪೊಲೀಸರಿಗೆ ಅನುಮಾನ ಹುಟ್ಟಿಸಿತ್ತು. ಹೀಗಾಗಿ ಸಮೀಪದಲ್ಲಿ ಕೆಲಸ ಮಾಡುತ್ತಿರುವ ಕೆಲ ಹುಡುಗರನ್ನು ಕರೆತಂದು ವಿಚಾರಣೆ. ಕುರೈನನ್ನೂ ವಿಚಾರಣೆ ಮಾಡಬೇಕು ಎನ್ನುವಷ್ಟರಲ್ಲಿ ಯುವತಿ ಮೊಬೈಲ್ ಆತನ ಬಳಿಯೇ ಪತ್ತೆಯಾಗಿದೆ. ಈ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಟೆಕ್ಕಿ ಕೊಲೆ ಪ್ರಕರಣದಲ್ಲಿ ಸ್ಫೋಟಕ ಟ್ವಿಸ್ಟ್: ಹತ್ಯೆಗೆ ಮುನ್ನ ರೇಪ್ ಮಾಡಿರುವ ಶಂಕೆ
ಒಟ್ಟಿನಲ್ಲಿ, ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಕರ್ನಲ್ ಕುರೈ ಯುವತಿ ಮೋಹಕ್ಕೆ ಮಾರುಹೋಗಿ ಕೊಲೆಗಾರನಾಗಿ ಜೈಲು ಸೇರಿರುವುದು ದುರಂತ.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ