Headlines

ಶ್ರವಣಕುಮಾರನ ಸಾಹಸ… ಟೆಂಪೋ ಡ್ರೈವರ್ ಆಗಿದ್ದವ ನಾಲ್ಕೇ ವರ್ಷದಲ್ಲಿ ವಿಮಾನ ಸಂಸ್ಥೆ ಕಟ್ಟಿದ ಕಥೆ..!

ಶ್ರವಣಕುಮಾರನ ಸಾಹಸ… ಟೆಂಪೋ ಡ್ರೈವರ್ ಆಗಿದ್ದವ ನಾಲ್ಕೇ ವರ್ಷದಲ್ಲಿ ವಿಮಾನ ಸಂಸ್ಥೆ ಕಟ್ಟಿದ ಕಥೆ..!


ಕೇಂದ್ರ ಸರ್ಕಾರದಿಂದ ಲೈಸೆನ್ಸ್ ಪಡೆದ ಮೂರು ಹೊಸ ಏರ್ಲೈನ್ ​​ಕಂಪನಿಗಳಲ್ಲಿ ಶಂಖ್ ಏರ್ (Shankh Air) ಒಂದು. ಇದರ ಸ್ಥಾಪನೆ ಹಾಗೂ ಸ್ಥಾಪಕನ ಹಿಂದಿನ ಕಥೆ ನಿಜಕ್ಕೂ ರೋಚಕ. ಮನಸ್ಸಿದ್ದರೆ ಮಾರ್ಗ ಎನ್ನುವುದಕ್ಕೆ ಮಾದರಿ ಶ್ರವಣ್ ಕುಮಾರ್ ವಿಶ್ವಕರ್ಮ (ಶ್ರವಣ್ ಕುಮಾರ್ ವಿಶ್ವಕರ್ಮ). ಉತ್ತರಪ್ರದೇಶದ ಈ ವ್ಯಕ್ತಿ ಒಂದು ಕಾಲದಲ್ಲಿ ಕಾನಪುರದ ಬೀದಿಗಳಲ್ಲಿ ಟೆಂಪೋ ಡ್ರೈವರ್ ಆಗಿ ಜೀವನ ನಿರ್ವಹಣೆ ಮಾಡುತ್ತಿದ್ದಾನೆ. ಇವತ್ತು ವಿಮಾನ ಕಂಪನಿಯ ಮಾಲೀಕನಾಗಿ ಬೆಳೆದಿದ್ದಾರೆ. ಶಂಖ್ ವಿಮಾನಗಳು ಹಾರಾಟ ನಡೆಸಲಿವೆ.

ಶ್ರವಣ್ ಕುಮಾರ್ ವಿಶ್ವಕರ್ಮ ಹೆಚ್ಚು ಓದಲಿಲ್ಲ. ಆಟೋರಿಕ್ಷಾ ಓಡಿಸುತ್ತಿದ್ದರು. ಟೆಂಪೋ ಇಟ್ಟುಕೊಂಡು ಕೆಲ ಬ್ಯೂಸಿನೆಸ್ ಗಳಿಗೆ ವಿಫಲ ಯತ್ನ ಮಾಡಿದರು. ಆದರೆ, ಹತಾಶರಾಗಲಿಲ್ಲ. 2014ರಲ್ಲಿ ಸಿಮೆಂಟ್ ಬ್ಯೂಸಿನೆಸ್ ಗೆ ಇಳಿದಾಗ ವಿಶ್ವಾಸ ಸಿಕ್ಕಿತು. ಟಿಎಂಟಿ ರೀಬಾರ್ ಉದ್ಯಮ ಕೈಹಿಡಿಯಿತು. ಸಿಮೆಂಟ್, ಮೈನಿಂಗ್ ಮತ್ತು ಟ್ರಾನ್ಸ್‌ಪೋರ್ಟ್ ಸೆಕ್ಟರ್‌ನಲ್ಲಿ ಬ್ಯುಸಿನೆಸ್ ಬೆಳೆಸಿದರು. ಹಲವು ಟ್ರಕ್‌ಗಳನ್ನು ಖರೀದಿಸಿದರು. ಈ ಹಂತದಲ್ಲೇ ಅವರಿಗೆ ಭವಿಷ್ಯದ ಯೋಜನೆಗಳು ಮನಸ್ಸಿಗೆ ಬಂದವು. ಅಂಥ ಒಂದು ಆಲೋಚನೆಯ ಕುಡಿಯೇ ಶಂಖ್ ಏರ್.

ಇದನ್ನೂ ಓದಿ: ಬರಲಿವೆ ಹೊಸ ವಿಮಾನಗಳು; ಶಂಖ್ ಏರ್ ಆಯ್ತು, ಈಗ ಅಲ್ ಹಿಂದ್ ಏರ್‌ಗಳು ಮತ್ತು ಫ್ಲೈ ಎಕ್ಸ್‌ಪ್ರೆಸ್‌ಗೂ ಸಿಕ್ಕಿತು ಎನ್ ಒಸಿ

ನಾಲ್ಕು ವರ್ಷದ ಹಿಂದೆ, ಟ್ರಕ್‌ನಂತೆ ವಿಮಾನಗಳನ್ನು ಓಡಿಸಬೇಕೆಂಬ ಆಲೋಚನೆ ವಿಶ್ವಕರ್ಮರ ತಲೆಯಲ್ಲಿ ಮೊದಲಿಟ್ಟಿತು. ಅಷ್ಟಕ್ಕೇ ಅದು ನಿಲ್ಲಲಿಲ್ಲ. ವಿಮಾನ ಸಂಸ್ಥೆ ಕಟ್ಟಲು ಏನು ಬೇಕು, ಆ ಉದ್ಯಮ ಹೇಗೆ ಕೆಲಸ ಮಾಡುತ್ತೆ ಎಂದು ಅರಿಯಲು ಯತ್ನಿಸಿದರು. ತಮ್ಮ ಟ್ರಾನ್ಸ್‌ಪೋರ್ಟ್ ಬ್ಯೂಸಿನೆಸ್‌ನಲ್ಲಿ ವಿಮಾನದ ಸೇವೆಯನ್ನೂ ನಡೆಸಿ ಅನುಭವ ಇದ್ದ ಕಾರಣ ಶಂಖ್ ಏರ್‌ಗೆ ಸರ್ಕಾರದಿಂದ ಎನ್ ಒಸಿ ಕೂಡ ಸಿಕ್ಕಿತು.

ಬಸ್, ಟೆಂಪೋದಂತೆ ವಿಮಾನವೂ ಕೂಡ ಒಂದು ಸಾರಿಗೆ ವಾಹನ ಎನ್ನುವ ವಿಶ್ವಕರ್ಮ

ವಿಮಾನಗಳ ಬಗ್ಗೆ ಶ್ರವಣಕುಮಾರ್ ವಿಶ್ವಕರ್ಮ ಅವರಿರುವ ಧೋರಣೆ ಗಮನಾರ್ಹ ಎನಿಸುತ್ತದೆ. ಅವರ ಪ್ರಕಾರ ವಿಮಾನ ಎಂಬುದು ಬಸ್ ಅಥವಾ ಟೆಂಪೋ ರೀತಿಯಲ್ಲೇ ಒಂದು ಸಾರಿಗೆ ವಾಹನ ಮಾತ್ರ. ಅದನ್ನು ಬೇರೆ ರೀತಿಯಲ್ಲಿ ನೋಡಬಾರದು ಎಂದು ಶಂಖ್ ಏರ್‌ನ ಚೇರ್ಮನ್ ಆಗಿರುವ ಅವರು ಹೇಳುತ್ತಾರೆ.

ಇದನ್ನೂ ಓದಿ: ರಿಸರ್ಚ್ ಅನಾಲಿಸ್ಟ್ ಲೈಸೆನ್ಸ್ ಪಡೆದು, ಯಾರಿಗೋ ಪಾಸ್ವರ್ಡ್ ಕೊಟ್ಟು, ದಿನಸಿ ಅಂಗಡಿ ನಡೆಸುತ್ತಿದ್ದ ವ್ಯಕ್ತಿ

ಶಂಖ್ ಏರ್ ಇದೇ ಜನವರಿ ತಿಂಗಳಿನಲ್ಲಿ ಕಾರ್ಯಾಚರಣೆಗೆ ಇಳಿಯುತ್ತದೆ. ಆರಂಭದಲ್ಲಿ ಏರ್‌ಬಸ್‌ನ ಮೂರು ವಿಮಾನಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಲಕ್ನೋ, ಮುಂಬೈ, ದೆಹಲಿ ಕೆಲ ನಗರಗಳಿಗೆ ಇವರ ವಿಮಾನಗಳ ಹಾರಾಟ ನಡೆಯುತ್ತಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *