ಹಣ್ಣುಗಳನ್ನು ತಿನ್ನುವುದು ಕಿಡ್ನಿಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಸಂಗ್ರಹವಾದ ಕಲ್ಮಶಗಳನ್ನು ತೆಗೆದುಹಾಕುವುದೇ ಕಿಡ್ನಿಗಳ ಪ್ರಮುಖ ಕೆಲಸ. ನಿಮ್ಮ ಕಿಡ್ನಿಗಳ ಆರೋಗ್ಯವನ್ನು ವೃದ್ಧಿಸಲು ಈ ಹಣ್ಣುಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಿ.

ಬ್ಲೂಬೆರ್ರಿಗಳಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ, ಕಿಡ್ನಿಯಲ್ಲಿನ ಉರಿಯೂತವನ್ನು ತಡೆಯಲು ಸಹಾಯ ಮಾಡುತ್ತವೆ.

ಕ್ರ್ಯಾನ್‌ಬೆರ್ರಿಗಳು ಮೂತ್ರನಾಳದ ಸೋಂಕನ್ನು (UTI) ತಡೆಯುತ್ತವೆ. ಇವು ಕಿಡ್ನಿ ಆರೋಗ್ಯವನ್ನು ಕಾಪಾಡಲು ಸಹಕಾರಿ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಅಧಿಕವಾಗಿವೆ.

ಸೇಬಿನಲ್ಲಿ ಫೈಬರ್, ವಿಟಮಿನ್ ಸಿ ಮತ್ತು ಉರಿಯೂತ ಶಮನಕಾರಿ ಗುಣಗಳು ಸಮೃದ್ಧವಾಗಿವೆ. ಇವು ಕಿಡ್ನಿಗಳ ಆರೋಗ್ಯವನ್ನು ರಕ್ಷಿಸಲು ನೆರವಾಗುತ್ತವೆ.

ಕೆಂಪು ದ್ರಾಕ್ಷಿಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಫ್ಲೇವನಾಯ್ಡ್‌ಗಳು ಅಧಿಕವಾಗಿವೆ. ಇವು ಉರಿಯೂತವನ್ನು ತಡೆದು, ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತವೆ.

ದಾಳಿಂಬೆಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಪಾಲಿಫಿನಾಲ್‌ಗಳು ಹೇರಳವಾಗಿವೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಕಿಡ್ನಿಗಳನ್ನು ರಕ್ಷಿಸಿಕೊಳ್ಳಬಹುದು.

Source link
Kidney Health: ಈ 5 ಹಣ್ಣುಗಳಲ್ಲಿದೆ ನೀವು ಹುಡುಕುತ್ತಿರುವ ಆರೋಗ್ಯದ ರಹಸ್ಯ!