Headlines

ಹಾಸ್ಟೆಲ್​​ನಲ್ಲಿ BAMS ವಿದ್ಯಾರ್ಥಿ ಅನುಮಾಸ್ಪದ ಸಾವು: ಕಾಲೇಜ್ ವಿರುದ್ಧ ಕೊಲೆ, ಸಾಕ್ಷಿ ನಾಶ ಆರೋಪ

ಹಾಸ್ಟೆಲ್​​ನಲ್ಲಿ BAMS ವಿದ್ಯಾರ್ಥಿ ಅನುಮಾಸ್ಪದ ಸಾವು: ಕಾಲೇಜ್ ವಿರುದ್ಧ ಕೊಲೆ, ಸಾಕ್ಷಿ ನಾಶ ಆರೋಪ


ಗದಗ, ಡಿಸೆಂಬರ್ 11: ಕಾಲೇಜ್ ಹಾಸ್ಟೆಲ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ (ವಿದ್ಯಾರ್ಥಿ) ಶವ ಪತ್ತೆ (ಮೃತ ದೇಹ ಪತ್ತೆ) ಆಗಿರುವಂತಹ ಘಟನೆ ಮುಂಡರಗಿ ಪಟ್ಟಣದ ಎಸ್ ಬಿಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಹಾಸ್ಟೆಲ್ ನಲ್ಲಿ ನಡೆದಿದೆ. BAMS ಅಂತಿಮ ಪದವಿ ಓದುತ್ತಿದ್ದ ಈಶ್ವರ ಗಾದ(21) ಮೃತ ವಿದ್ಯಾರ್ಥಿ. ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕುಟುಂಬಸ್ಥರು ಆಡಳಿತ ಮಂಡಳಿ, ಸಿಬ್ಬಂದಿ ಗಂಭೀರ ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬಕ್ಕೆ ಮಾಹಿತಿ ನೀಡದೆ ಆಸ್ಪತ್ರೆಗೆ ಶವ ಸಾಗಾಟ ಮಾಡಲಾಗಿದೆ.

ಡೆತ್ ನೋಟ್ ಪತ್ತೆ: ಕೊಲೆ ಎಂದ ಕುಟುಂಬಸ್ಥರು

ಮೃತ ವಿದ್ಯಾರ್ಥಿ ಈಶ್ವರ ಗಾದಗೆ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಧನ್ನೂರ ಎಸ್ ಗ್ರಾಮದವರು. ಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್‌ನಲ್ಲಿ ಬಿಎಎಂಎಸ್‌ನಲ್ಲಿ ಅಂತಿಮ ಪದವಿ ಓದಿದರು. ಆರು ತಿಂಗಳ ಹಿಂದೆ ಕೂಡ ಕಾಲೇಜ್ ಉಪನ್ಯಾಸಕ ಕಿರುಕುಳ ತಾಳಲಾರದೆ ನಿದ್ದೆ ಮಾತ್ರ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇನ್ನು ಎರಡು ಲೈನ್ ಇರುವ ಡೆತ್ ನೋಟ್ ಪತ್ತೆ ಆಗಿದೆ. ‘ನನ್ನ ಸಾವಿಗೆ ಯಾರೂ ಕಾರಣ ಅಲ್ಲ, ನಾನೇ ಕಾರಣ. ಸಾರಿ ಮಮ್ಮಿ, ಪಪ್ಪಾ’ ಅಂತ ಬರೆಯಲಾಗಿದೆ. ಆದರೆ ಇದು ನಮ್ಮ ಮಗ ಬರೆದ ಡೆತ್ ನೋಟ್ ಅಲ್ಲ, ನಮ್ಮ ಮಗನ ಬರವಣಿಗೆ ಅಲ್ಲ ಆರೋಗ್ಯ ಕುಟುಂಬಸ್ಥರು. ಕಾಲೇಜ್ನವರು ಸೃಷ್ಟಿ ಮಾಡಿರುವ ಡೆತ್ ನೋಟ್ ಅಂತ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಕೋಲಾರ: ಮಲ ತಂದೆ ತಾಯಿಗೆ ತಲಾಖ್ ನೀಡಿದ ಮನನೊಂದು ಮಗ ಆತ್ಮಹತ್ಯೆ

ವಿದ್ಯಾರ್ಥಿ ಕಾಲಿನ ಬೆರಳಿ ಉಗುರು ಕಿತ್ತು ಚಿತ್ರಹಿಂಸೆ. ಕತ್ತು, ದೇಹದ ಭಾಗದಲ್ಲಿ ರಕ್ತ ಗಾಯ. ಕಾಲೇಜ್ನವರೇ ಕೊಲೆ ಮಾಡಿ ಆತ್ಮಹತ್ಯೆ ಕಥೆ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲದೆ ಸಾಕ್ಷಿ ನಾಶವಾಗಿದೆ ಎಂದು ಕುಟುಂಬಸ್ಥರ ಆರೋಪವಾಗಿದೆ.

ಈ ಹಿಂದೆ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ

ಇನ್ನು ಈಶ್ವರ ಗಾದಗೆ ಈ ಕಾಲೇಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೂರನೇ ವಿದ್ಯಾರ್ಥಿ. ಈ ಹಿಂದೆ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅದನ್ನು ಮುಚ್ಚಿ ಹಾಕಿದ್ದಾರೆ. ನಮ್ಮ ಮಗನಿಗೂ ಕಿರಕುಳ ತಿಳಿಸಿದೆ. ಇದು ಅಂತಿಮ ವರ್ಷವಿದ್ದರೂ ಸಮಾಧಾನ ಮಾಡಿದೆವು. ಆದರೆ ಕಾಲೇಜನವರು ಕೊಂಡು ಬಿಟ್ಟರು. ಎಲ್ಲಾ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾನೆ ಎಂದು ಮಗನನ್ನು ಕಳೆದುಕೊಂಡ ಹೆತ್ತವರು ಕಣ್ಣೀರು ಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *