
ಇದಕ್ಕೆ ಮುಂದುವರಿದಂತೆ, ಶಾಸಕರ ಧಮ್ಕಿಯ ಆಡಿಯೋ ಪಾರ್ಟ್–2 ಕೂಡ ಬಿಡುಗಡೆಯಾಗಿದ್ದು, ಇದು ವಿವಾದವನ್ನು ಇನ್ನಷ್ಟು ಗಂಭೀರಗೊಳಿಸಿದೆ. ಈ ಭಾಗದಲ್ಲಿ ಶಾಸಕ ಚಂದ್ರು ಲಮಾಣಿ, ಗುತ್ತಿಗೆದಾರ ವಿಜಯ್ ಪೂಜಾರ್ ಹಾಗೂ ಶಾಸಕರ ಪಿಎ ಮಂಜುನಾಥ್ ನಡುವಿನ ಸಂಭಾಷಣೆ ಎನ್ನಲಾಗಿದೆ. ಈ ಆಡಿಯೋದಲ್ಲಿ ಕಮಿಷನ್ ಹಣ ಸಂದಾಯವಾಗದ ಹಿನ್ನೆಲೆ ಕಾಮಗಾರಿ ಚೇಂಜ್ ಆಫ್ ವರ್ಕ್, ರೀ-ಟೆಂಡರ್ ಅಥವಾ ಡೆಂಟರ್ ನಿಲ್ಲಿಸುವ ಬಗ್ಗೆ ಸೂಚನೆ ನೀಡಿರುವಂತೆ ಆರೋಪಿಸಲಾಗಿದೆ. “ವರ್ಕ್ ಆರ್ಡರ್ ಕೊಟ್ಟಿಲ್ಲ, ಚೇಂಜ್ ಮಾಡಿ” ಎಂದು ಪಿಎಗೆ ಸೂಚನೆ ನೀಡಿರುವುದು, ಹಾಗೂ “ಎರಡು ದಿನದಲ್ಲಿ ತಂದು ಕೊಡ್ತೀನಿ” ಎಂಬ ಗುತ್ತಿಗೆದಾರರ ಮಾತಿಗೆ ಒಪ್ಪದೇ, ಕೆಲಸ ಬದಲಾಯಿಸುವಂತೆ ಒತ್ತಡ ಹಾಕಿರುವುದು ಕೇಳಿಬರುತ್ತದೆ ಎನ್ನಲಾಗಿದೆ.