ಗದಗ, ಫೆಬ್ರವರಿ 28: ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9ನೇ ತರಗತಿಯ ಮೂವರು ವಿದ್ಯಾರ್ಥಿಗಳು (ವಿದ್ಯಾರ್ಥಿಗಳು) ಕೆರೆಯಲ್ಲಿ ಈಜಲು ತೆರಳಿ ಸಾವನ್ನಪ್ಪಿರುವಂತಹ (ಸಾವು) ಘಟನೆ ಗದಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ನಡೆದಿದೆ. ಪರಶುರಾಮ ವಡ್ಡರ ಮತ್ತು ಬಸವರಾಜ ಬಡಿಗೇರ ಮೃತ ವಿದ್ಯಾರ್ಥಿಗಳು. ಮನೆಯ ವಿದ್ಯಾರ್ಥಿ ಬಚಾವ್ ಆಗಿದ್ದಾನೆ. ಮುಳಗುಂದ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದ ಪರಶುರಾಮ ವಡ್ಡರ, ಬೆಳದಡಿ ಗ್ರಾಮದ ಬಸವರಾಜ ಬಡಿಗೇರ ಮತ್ತು ಇನ್ನೋರ್ವ ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದರು. ಇಂದು ಶಾಲೆ ಮುಗಿಸಿಕೊಂಡು 3 ವಿದ್ಯಾರ್ಥಿಗಳು ಕೆರೆಯಲ್ಲಿ ಈಜಲು ತೆರಳಿದ್ದಾರೆ.
ಇದನ್ನೂ ಓದಿ: ಕುಡಿದ ನಶೆಯಲ್ಲಿ ವ್ಯಕ್ತಿ ಮೇಲೆ ಕಾರು ಹರಿಸಿ ಕೊಲೆ; ಪ್ರಭಾವಿ ಮುಖಂಡರ ಮಕ್ಕಳು ಅಂದರ್!
ಈ ವೇಳೆ ಇಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ವಿದ್ಯಾರ್ಥಿ ಬಚಾವ್ ಆಗಿದ್ದಾನೆ. ಸದ್ಯ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರೂ ಬರದಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇನ್ನು 20 ಅಡಿ ಆಳದ ಕೆರೆಯಲ್ಲಿ ಸ್ಥಳೀಯರು ಮತ್ತು ಮುಳುಗು ನೀರಿನಲ್ಲಿ ಶೋಧ ನಡೆದಿದೆ.
ದುಷ್ಕರ್ಮಿಗಳಿಂದ ಯುವಕನ ಕತ್ತುಕೊಯ್ದು ಬರ್ಬರ ಹತ್ಯೆ
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಹೊರವಲಯದಲ್ಲಿ ದುಷ್ಕರ್ಮಿಗಳಿಂದ ಯುವಕನ ಕತ್ತುಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಗ್ಲಿ ಗ್ರಾಮದ ಮೊಹಮ್ಮದ್ ಫಾರೂಕ್ ಶೇಖ್ ಸನದಿ(25) ಕೊಲೆಯಾದ ಯುವಕ. ಘಟನಾ ಸ್ಥಳಕ್ಕೆ ಲಕ್ಷ್ಮೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ SSLC ವಿದ್ಯಾರ್ಥಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸಂಕೇತ ಕೊಲೆ ರಹಸ್ಯ ಬಯಲು!
ಸದ್ಯ ಪೊಲೀಸರಿಗೆ ಯುವಕನ ಕೊಲೆ ಪ್ರಕರಣ ತಲೆನೋವಾಗಿದೆ. ಹಂತಕರ ಸುಳಿವಿಗಾಗಿ ಖಾಕಿ ತೀವ್ರ ಶೋಧ ನಡೆಸಿದೆ. ಸೋಕೋ ತಂಡದಿಂದ ಪರಿಶೀಲನೆ ನಡೆಸಿದ್ದು, ಹಂತಕರ ಪತ್ತೆಗಾಗಿ ಶ್ವಾನ ದಳದಿಂದ ಶೋಧ ನಡೆಸಲಾಗಿದೆ. ನಿನ್ನೆ ಮಧ್ಯಾಹ್ನ ಫೋನ್ ಕರೆ ಬಂದ ಬಳಿಕ ಮನೆಯಿಂದ ಹೋಗಿದ್ದ ಯುವಕ ಇದೀಗ ಹೆಣವಾಗಿ ಪತ್ತೆ ಆಗಿದ್ದಾನೆ. ಸದ್ಯ ಯುವಕನ ಹತ್ಯೆ ಲಕ್ಷ್ಮೇಶ್ವರ ಪಟ್ಟಣವನ್ನು ಬೆಚ್ಚಿಬಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.