Headlines

ಗದಗ: ಫೋಟೋ ಸ್ಟುಡಿಯೋದಲ್ಲೇ ನಡೆಯುತ್ತಿತ್ತು ನಕಲಿ ಸರ್ಟಿಫಿಕೇಟ್ ದಂಧೆ!

ಗದಗ: ಫೋಟೋ ಸ್ಟುಡಿಯೋದಲ್ಲೇ ನಡೆಯುತ್ತಿತ್ತು ನಕಲಿ ಸರ್ಟಿಫಿಕೇಟ್ ದಂಧೆ!


ಗದಗ: ಫೋಟೋ ಸ್ಟುಡಿಯೋದಲ್ಲೇ ನಡೆಯುತ್ತಿತ್ತು ನಕಲಿ ಸರ್ಟಿಫಿಕೇಟ್ ದಂಧೆ!

ಗದಗ, ನವೆಂಬರ್ 24: ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಹಾತಲಗೇರಿ ನಾಕಾ ಬಳಿಯ ಕಬಾಡಿ ಎಡಿಟಿಂಗ್ ಫೋಟೋ ಸ್ಟುಡಿಯೋದಲ್ಲಿ ಅಕ್ರಮವಾಗಿ ನಕಲಿ ದಾಖಲೆ ತಯಾರು ಮಾಡುವ ದಂಧೆ ನಿರಂತರವಾಗಿ ನಡೆಯುತ್ತಿತ್ತು. ಆರೋಪಿ ರಾಘವೇಂದ್ರಸಾ ಕಬಾಡಿ ಎಂಬ ನಕಲಿ ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಸರ್ಕಾರಿ ಗುರುತಿ ಚೀಟಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಸಿಕ್ಕ ಬೆಟಗೇರಿ ಪೊಲೀಸರು ಗದಗ ಎಸ್ಪಿ ರೋಹನ್ ಜಗದೀಶ್ ಮಾರ್ಗದರ್ಶನದಲ್ಲಿ ಕಬಾಡಿ ಎಡಿಟಿಂಗ್ ಫೋಟೋ ಸ್ಟುಡಿಯೋ ಮೇಲೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಬಳಸುತ್ತಿದ್ದ ಕಂಪ್ಯೂಟರ್, ಮಾನಿಟರ್, ಕ್ಯಾಮರಾ, ಪ್ರಿಂಟರ್ ವಶಕ್ಕೆ ಪಡೆದುಕೊಂಡಿದೆ, ಈ ಜಾಲದಲ್ಲಿ ಯಾರ್ಯಾರು ಇದ್ದಾರೆ, ಎಷ್ಟು ಜನ ನಕಲಿ ಸರ್ಟಿಫಿಕೆಟ್ ಪಡೆದಿದ್ದಾರೆ ಮತ್ತು ಯಾವ ಕೆಲಸಗಳಿಗೆ ಬಳಸುತ್ತಿದ್ದಾರೆ ಎನ್ನುವುದರ ಕುರಿತು ತನಿಖೆ ಮಾಡಿ ಕ್ರಮ ಕೈಗೊಳ್ಳಿ ಎಂದು ಎಸ್ಪಿ ಹೇಳಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *