Headlines

ಲಕ್ಕುಂಡಿಯಲ್ಲಿ‌ ನಿಧಿ ಸಿಕ್ಕ ಬಳಿಕ ಮತ್ತೊಂದು ರಹಸ್ಯ ಬಯಲು: ಹಳೆ ಪ್ರಕರಣಕ್ಕೆ ಮರುಜೀವ; ಮೌಲ್ವಿ ಬಂಧನ

ಲಕ್ಕುಂಡಿಯಲ್ಲಿ‌ ನಿಧಿ ಸಿಕ್ಕ ಬಳಿಕ ಮತ್ತೊಂದು ರಹಸ್ಯ ಬಯಲು: ಹಳೆ ಪ್ರಕರಣಕ್ಕೆ ಮರುಜೀವ; ಮೌಲ್ವಿ ಬಂಧನ


ಗದಗ, ಫೆಬ್ರವರಿ 20: ಪ್ರಾಚೀನ ಲಕ್ಕುಂಡಿ (ಲಕ್ಕುಂಡಿ) ಗ್ರಾಮದಲ್ಲಿ ಸಾಕಷ್ಟು ಸಂಪತ್ತು ಇದೆ ಎಂಬ ನಂಬಿಕೆಯಿದೆ. ಅದಕ್ಕೆ ಪುಷ್ಟಿ ನೀಡುವಂತೆ ಮನೆಯ ಪಾಯ ಮುಚ್ಚುವ ವೇಳೆ ಚಿನ್ನದ ನಿಧಿ ಸಿಕ್ಕಿದೆ. ಇದರ ಬೆನ್ನಲ್ಲೇ ಲಕ್ಕುಂಡಿ ಚಿನ್ನದ ನಿಧಿ ರಹಸ್ಯ ಬಯಲಾಗಿದೆ. 2022ರಲ್ಲಿ ಲಕ್ಕುಂಡಿ ಗ್ರಾಮದಲ್ಲಿ ಅಪಾರ ಪ್ರಮಾಣದ ಚಿನ್ನದ ಸಂಪತ್ತು ಸಿಕ್ಕಿದ್ದು, ಅದನ್ನು ಮಾರಾಟ ಮಾಡಲು ಸಂಚು ರೂಪಿಸಲಾಗಿದೆ. ಅಂದು ನಿಧಿ ಶೋಧ ಮಾಡಿದ್ದ ಮಾಸ್ಟರ್ ಮೈಂಡ್‌ನನ್ನು ಇದೀಗ ಬಂಧಿಸಲಾಗಿದೆ (ಬಂಧನ) ಮಾಡಿದ್ದು, ಆ ಮೂಲಕ ಚಿನ್ನದ ನಿಧಿಯ ಅಸಲಿ ಸತ್ಯ ಬಯಲಿಗೆಳೆದಿದ್ದಾರೆ.

ಹಳೆ ಪ್ರಕರಣಕ್ಕೆ ಮರುಜೀವ

ಲಕ್ಕುಂಡಿ ಗ್ರಾಮದ ರಿತ್ತಿ ಕುಟುಂಬದ ಮನೆಯ ಪಾಯ ಮುಚ್ಚುವ ವೇಳೆ 455 ಗ್ರಾಂ ಚಿನ್ನದ ನಿಧಿ ಇದೆ. ಈ ವಿಚಾರ ದೇಶ ಸೇರಿದಂತೆ ವಿದೇಶದಲ್ಲಿ ಭಾರೀ ಸುದ್ದಿ ಮಾಡಿದೆ. ಇದೆ ವೇಳೆ ಹಳೆ ಪ್ರಕರಣವೊಂದು ಮರು ಜೀವಿಸಿದೆ. 2022ರಲ್ಲಿ ಧಾರವಾಡ ನಿವಾಸಿ ಬಸೀರಾಬೇಗಂ ಅವರು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಿಧಿ ಆಸೆ ತೋರಿಸಿ ವಂಚಿಸ ದೂರು ನೀಡಿದ್ದರು. ಆಗ ಆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಕೈಬಿಟ್ಟಿದ್ದರು.

ಇದನ್ನೂ ಓದಿ: ಚಿನ್ನದ ಒಡವೆ ವಂಚನೆ: ಸಣ್ಣಬಸಪ್ಪ ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ ದೃಶ್ಯ

ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ, 2026 ಫೆಬ್ರವರಿ 11ರಂದು ಸಮಾಜ ಸೇವಕ ಪೀರಸಾಬ್ ಗೌತಾಳ ಎನ್ನುವವರು, ಸರ್ಕಾರಕ್ಕೆ ಸೇರಬೇಕಾದ ನಿಧಿ ಕಂಡವರ ಪಾಲಾಗಿದೆ ಎಂದು ದೂರು ನೀಡಿದ್ದರು. ಆಗ ಎಸ್ಪಿ ರೋಹನ್ ಜಗದೀಶ್ ತಂಡ ರಚನೆ ಮಾಡಿ ತನಿಖೆ ನಡೆಸಿದ್ದರು. ಆ ವೇಳೆ ಹಂಡೆಯಲಿ ಚಿನ್ನ ಇರುವ ವಿಡಿಯೋ ಕೂಡ ನೀಡಿದ್ರು. ಮತ್ತೊಮ್ಮೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡಲು ಸಾಧ್ಯವಾಗುತ್ತದೆ. ಉತ್ತರಾಖಂಡದ ಹಜರತ್ ಎನ್ನುವವನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಈ ವೇಳೆ ಅದು ನಕಲಿ ಚಿನ್ನ ಎನ್ನುವ ಸತ್ಯ ಬಹಿರಂಗವಾಗಿದೆ. 2022 ರಲ್ಲಿ ಗದಗ ನಗರದಲ್ಲಿ ಒಂದು ಹಂಡೆ ಖರೀದಿಸಿದ್ದಾನೆ, ನಂತರ ಮತ್ತೊಂದು ಅಂಗಡಿಯಲ್ಲಿ ಚಿನ್ನದ ಬಣ್ಣದ ಬಿಸ್ಕೆಟ್ ಖರೀದಿಸಿ, ಇದೆ ನಿಧಿಯಂದು ತೋರಿಸಿದ್ದಾನೆ. ಆ ವಿಡಿಯೋ ಇಟ್ಟುಕೊಂಡು ಸಾಕಷ್ಟು ಜನರಿಗೆ ಮೋಸ ಮಾಡಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.

22 ಲಕ್ಷ ರೂ. ಹಣ ಸುಲಿಗೆ

ಧಾರವಾಡ ನಿವಾಸಿಯಾದ ಬಸೀರಾಬೇಗಂ ಅವರು ವ್ಯಾಪಾರಸ್ಥರು. ಲಕ್ಕುಂಡಿ ಗ್ರಾಮದ ಸಣ್ಣ ಬಸಪ್ಪ ಹಾಗೂ ದೊಡ್ಡ ಬಸಪ್ಪ ಪಶು ಆಹಾರ ಖರೀದಿಸಲು ಹೋದಾಗ, ಆ ಸಮಯದಲ್ಲಿ ಗ್ಯಾಸ್ ಹಾಕಿಸಿಕೊಳ್ಳಲು ಬಂದಿದ್ದ ಉತ್ತರಾಖಂಡದ ಹಜರತ್ ಪರಿಚಯ ಆಗುತ್ತೆ. ಈ ವೇಳೆ ಹಜರತ್ ನಾನು ನಿಧಿ ಶೋಧ ಮಾಡುತ್ತೇನೆ ಅಂತಾ ಹೇಳಿದ್ದಾನೆ. ಹಜರತ್ ನಿಧಿ ಸಿಕ್ಕ ಮೇಲೆ ಸಾಕಷ್ಟು ಹಣ ಬರುತ್ತದೆ ಎಂದು ನಂಬಿದ್ದರು. ಹೀಗಾಗಿ ಪ್ರಮುಖ ಆರೋಪಿ ಹಜರತ್ ಉತ್ತರಾಖಂಡದಿಂದ ಬರಲು ಆತನ ಖರ್ಚು ವೆಚ್ಚ ಅಂತಾ ಮಹಿಳೆಯೊಬ್ಬರಿಂದ ಸುಮಾರು 22 ಲಕ್ಷ ರೂ. ಹಣ ಸುಲಿಗೆ ಮಾಡಿದ್ದಾರೆ. ಇದು ಎಫ್‌ಐಆರ್‌ನಲ್ಲಿ ಕೂಡ ಉಲ್ಲೇಖವಾಗಿದೆ.

ಪ್ಲಾನ್ ಮಾಡಿ, ಒಂದು ದಿನ ಲಕ್ಕುಂಡಿ ಗ್ರಾಮಕ್ಕೆ ಹಜರತ್ ಬಂದು, ಗದಗನಲ್ಲಿ ಹಂಡೆ ಖರೀದಿಸಿ, ಚಿನ್ನದ ಬಣ್ಣದ ನಕಲಿ ಬಿಸ್ಕೆಟ್ ಇಟ್ಟು, ಸಣ್ಣ ಬಸಪ್ಪ ಹಾಗೂ ದೊಡ ಬಸಪ್ಪ ಅವರ ಜಮೀನಿನಲ್ಲಿ ನಿಧಿ ಶೋಧ ಮಾಡಿದ ನಾಟಕ ಮಾಡಿದರು. ಸಣ್ಣ ಬಸಪ್ಪನಿಗೆ 20 ಲಕ್ಷ ರೂ ಹಣ ಕೊಡು ಈ ನಿಧಿ ನಿನಗೆ ಕೊಡುತ್ತೇನೆ ಅಂತಾ ಹೇಳಿದ್ದ. ಆಗ ಸ್ವಲ್ಪ ವೈಮನಸ್ಸು ಉಂಟಾಗಿದೆ. ನಿಧಿ ಶೋಧನೆ ಮಾಡಲು ಬಂದ ಹಜರತ್ ಕಾಲಿನಿಂದ ಒದ್ದು ಆಗ ಚಿನ್ನವು ಮಣ್ಣಾಗಿದೆ ಎಂದು ವಂಚನೆ ಮಾಡಿ ಎಸ್ಕೇಪ್ ಆಗಿದ್ದಾನೆ. ಈವಾಗ ನನ್ನ ಅರೆಸ್ಟ್ ಮಾಡಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್, ಬೇರೆ ರಾಜ್ಯದ ವ್ಯಕ್ತಿಗೆ ಲಕ್ಕುಂಡಿ ನಿಧಿ ಗೊತ್ತಾಗಿದೆ?

ಈ ನಕಲಿ ನಿಧಿ ಆಸೆಗೆ ಬಿದ್ದ ಹಜರತ್ ಮೌಲ್ವಿ ಸುಮಾರು 8ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿದ್ದಾನೆ. ದೆಹಲಿ ಮಹಿಳೆ ಮತ್ತು ಧಾರವಾಡ ಮಹಿಳೆ ಸೇರಿದಂತೆ ಹಲವು ಜನರು ಮೊಸಕ್ಕೆ ಒಳಗಾಗಿದ್ದಾರೆ. ಒಟ್ಟಿನಲ್ಲಿ ಚಿನ್ನದ ನಿಧಿ ಬೆನ್ನಲ್ಲೇ ಹಳೆ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ. ಇನ್ನು ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳುತ್ತೆ ಕಾದು ನೋಡ್ಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 6:15 pm, ಶುಕ್ರ, 20 ಫೆಬ್ರವರಿ 26



Source link

Leave a Reply

Your email address will not be published. Required fields are marked *