ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವೊಂದು ಕಡೆ ಹೀಗೆಲ್ಲ ಮಾಡ್ತಾರೆ ನೋಡಿ!

ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವೊಂದು ಕಡೆ ಹೀಗೆಲ್ಲ ಮಾಡ್ತಾರೆ ನೋಡಿ!


ಗದಗ, ಡಿಸೆಂಬರ್ 26: ಗದಗ ಜಿಲ್ಲೆಯ ಉಣಚಗೆರೆ ಗ್ರಾಮದಲ್ಲಿರುವ ಕೋಳಿ ಫಾರಂ ಅತಿಯಾದ ಗಲೀಜಿನಿಂದ ಕೂಡಿದ್ದು, ಜನರ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತಿದೆ. ಈ ಕೋಳಿ ಫಾರಂ ಅನೇಕ ವರ್ಷಗಳಿಂದ ಇದೇ ರೀತಿ ಕಾರ್ಯನಿರ್ವಹಿಸುತ್ತಿದೆ ಎಂಬುದು ‘ಟಿವಿ9’ ಗ್ರೌಂಡ್ ರಿಪೋರ್ಟ್‌ನಲ್ಲಿದೆ. ಕೋಳಿಗಳಿಗೆ ಕೊಳಕು ಮಿಶ್ರಿತ ಆಹಾರ ನೀಡಲಾಗುತ್ತಿದೆ ಮತ್ತು ಫಾರಂ ಪರಿಸರವು ತಿಪ್ಪೆಗುಂಡಿಗಿಂತ ಗಲೀಜಾಗಿದೆ. ಮಾರುಕಟ್ಟೆಗೆ ಸರಬರಾಜಾಗುವ ಕಳಪೆ ಮೊಟ್ಟೆಗಳು ಮತ್ತು ಕೋಳಿಗಳು ಗಜೇಂದ್ರಗಡ ಮತ್ತು ರೋಣ ತಾಲೂಕು ಸೇರಿದಂತೆ ಹಲವೆಡೆ ತಲುಪುತ್ತಿವೆ. ಇದು ಜನರ ಜೀವದೊಂದಿಗೆ ಚೆಲ್ಲಾಟವಾಡಿದಂತೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಈ ಫಾರಂ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಅವರ ನಿರ್ಲಕ್ಷ್ಯಕ್ಕೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಫಾರಂ ವಿರುದ್ಧ ಮತ್ತು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *