ಗದಗ, ಅಕ್ಟೋಬರ್ 28: ಗದಗ ಜಿಲ್ಲೆಯ ವಿವೇಕಾನಂದ ನಗರ ಬಡಾವಣೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಹೈರಾಮಾ ನಡೆದಿದೆ. ಕಳ್ಳತನದ ಆರೋಪದ ಮೇಲೆ ಗ್ರಾಮಸ್ಥರು ಬೆನ್ನಟ್ಟಿದಾಗ, ಬಸವರಾಜ್ ಸೊಲ್ಲಾಪುರ ಎಂಬ ಯುವಕ ಸುಮಾರು 30-40 ಅಡಿ ಎತ್ತರದ ತೆಂಗಿನ ಮರವನ್ನು ಏರಿ ಕುಳಿತಿದ್ದಾನೆ. ಈ ಮಂಗಳವಾರ ನಸುಕಿನ ಜಾವ 3 ರಿಂದ 3:30 ರ ಸುಮಾರಿಗೆ ನಡೆದಿದೆ. ಮೂಲತಃ ಬೆಳಗಾವಿ ಜಿಲ್ಲೆಯ ಕಬ್ಬೂರು ಗ್ರಾಮದ ನಿವಾಸಿಯಾಗಿರುವ ಬಸವರಾಜ್, ನಸುಕಿನ ಜಾವ ಬಡಾವಣೆಯ ಮನೆ ಬಾಗಿಲು ಬಡಿದಿದ್ದಾನೆ. ಇದರಿಂದ ಭಯಗೊಂಡ ಸ್ಥಳೀಯರು ಆತನನ್ನು ಕಳ್ಳ ಎಂದು ಶಂಕಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದಾಗ ಅವರ ಸೈರನ್ ಶಬ್ದ ಕೇಳಿ ಭಯಗೊಂಡ ಬಸವರಾಜ್, ತಪ್ಪಿಸಿಕೊಳ್ಳಲು ತೆಂಗಿನ ಮರ ಏರಿದ್ದಾನೆ. ನಾಲ್ಕು ಗಂಟೆಗೂ ಹೆಚ್ಚು ಕಾಲ ಮರದಲ್ಲೇ ಕಳೆದ ಯುವಕನನ್ನು, ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯರ ಸಹಾಯದಿಂದ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ನಂತರ ಆತನನ್ನು ಪೊಲೀಸರು ಒಪ್ಪಿಸಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ