Bigg Boss ಗಿಲ್ಲಿ ನಟನ ಬಗ್ಗೆ ಪ್ರಶ್ನೆ ಮಾಡಿದ್ರೆ ಹಾರಿಕೆ ಉತ್ತರ ಕೊಟ್ಟಿದ್ದೇಕೆ ‘ಮಹಾನಟಿ’ ಗಗನಾ? | Gagana Bhari Opinion On Bigg Boss Kannada Season 12 Gagana Bhari

Bigg Boss ಗಿಲ್ಲಿ ನಟನ ಬಗ್ಗೆ ಪ್ರಶ್ನೆ ಮಾಡಿದ್ರೆ ಹಾರಿಕೆ ಉತ್ತರ ಕೊಟ್ಟಿದ್ದೇಕೆ ‘ಮಹಾನಟಿ’ ಗಗನಾ? | Gagana Bhari Opinion On Bigg Boss Kannada Season 12 Gagana Bhari


15

ಗಗನಾ ಬಗ್ಗೆ ಗಿಲ್ಲಿ ನಟ ಕಾಮಿಡಿ

Image Credit : colors kannada, instagram

ಗಗನಾ ಬಗ್ಗೆ ಗಿಲ್ಲಿ ನಟ ಕಾಮಿಡಿ

ಹೌದು, ಮಹಾನಟಿ ಶೋನಲ್ಲಿ ಮುಗ್ಧ ಮಾತುಗಳಿಂದ ಮನಸ್ಸು ಗೆದ್ದಿದ್ದ ಗಗನಾ ಭಾರಿ ಅವರು ‘ಭರ್ಜರಿ ಬ್ಯಾಚುಲರ್ಸ್’‌, ‘ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ಭಾಗವಹಿಸಿದ್ದರು. ಆ ವೇಳೆ ಗಿಲ್ಲಿ ನಟ ಅವರ ಜೊತೆ ವೇದಿಕೆ ಮೇಲೆ ಒಂದಿಷ್ಟು ಮಾತುಕತೆ ನಡೆಯುತ್ತಿತ್ತು. ನಾನು ಗಗನಾಳನ್ನು ಪ್ರೀತಿಸುತ್ತಿದ್ದೇನೆ ಎಂದು ಗಿಲ್ಲಿ ಅವರು ಕಾಮಿಡಿ ಮಾಡುತ್ತಿದ್ದರು. ಇವರಿಬ್ಬರ ಫನ್‌ ವಿಡಿಯೋಗಳು ಈಗಲೂ ಸೋಶಿಯಲ್‌ ಮೀಡಿಯಾದಲ್ಲಿ ಸೌಂಡ್‌ ಮಾಡುತ್ತಿರುತ್ತವೆ.

25

ಗಗನಾ ಮಾತನಾಡಿಲ್ಲ

Image Credit : colors kannada, instagram

ಗಗನಾ ಮಾತನಾಡಿಲ್ಲ

ಈಗ ಯುಟ್ಯೂಬರ್ಸ್‌ ಗಗನಾ ಭಾರಿ ಜೊತೆ ಮಾತನಾಡುವಾಗ ಗಿಲ್ಲಿ ನಟನ ಬಗ್ಗೆ ಮಾತನಾಡಿದ್ದಾರೆ. ಆದರೆ ಗಗನಾ ಮಾತ್ರ ಗಿಲ್ಲಿ ಬಗ್ಗೆ ಮಾತನಾಡಿಲ್ಲ, ವಿಶ್‌ ಕೂಡ ಮಾಡಿಲ್ಲ. ಗೌತಮಿ ಜಾಧವ್‌, ಕಾರುಣ್ಯಾ ರಾಮ್‌ರಿಂದ ಹಿಡಿದು ಅನೇಕರು ಗಿಲ್ಲಿ ಬಗ್ಗೆ ಮಾತನಾಡಿದ್ದುಂಟು. ಆದರೆ ಗಗನಾ ಮಾತ್ರ ಏನೂ ಹೇಳಿಲ್ಲ, ಇದು ವೀಕ್ಷಕರಿಗೆ ಸಿಟ್ಟು ತಂದಿದೆ.

35

ಹಾರಿಕೆ ಉತ್ತರ ಕೊಟ್ಟರು

Image Credit : colors kannada, instagram

ಹಾರಿಕೆ ಉತ್ತರ ಕೊಟ್ಟರು

ಯಾರು‌ ಚೆನ್ನಾಗಿ ಆಡುತ್ತಾರೋ ಅವರೇ ಗೆಲ್ಲಬೇಕು, ನಾನು ಬಿಗ್‌ ಬಾಸ್‌ ಶೋವನ್ನು ಅಷ್ಟಾಗಿ ನೋಡುತ್ತಿಲ್ಲ, ಕ್ಲಿಪ್ಪಿಂಗ್ಸ್‌ ನೋಡಿದ್ದೇನೆ. ಅಷ್ಟೇ ಎಂದು ಯುಟ್ಯೂಬರ್ಸ್‌ ಪ್ರಶ್ನೆಗೆ ಗಗನಾ ಬಾರಿ ಅವರು ಉತ್ತರ ನೀಡಿದ್ದಾರೆ.

45

ಗಿಲ್ಲಿ ನಟನಿಗೆ ವಿಶ್‌ ಮಾಡ್ತೀರಾ?

Image Credit : colors kannada, instagram

ಗಿಲ್ಲಿ ನಟನಿಗೆ ವಿಶ್‌ ಮಾಡ್ತೀರಾ?

ಗಿಲ್ಲಿ ನಟ ಅವರು ನಿಮಗೆ ಪರಿಚಯ ಇದ್ದಾರೆ ಅಲ್ವಾ? ಅವರಿಗೆ ನೀವು ವಿಶ್‌ ಮಾಡ್ತೀರಾ ಎಂದು ಪ್ರಶ್ನೆ ಕೇಳಲಾಗಿತ್ತು. ಆಗ ಗಗನಾ ಅವರು ಎಲ್ಲರಿಗೂ ವಿಶ್‌ ಮಾಡ್ತೀನಿ ಎಂದು ಹೇಳಿದ್ದಾರೆ.

55

ಕಾಮೆಂಟ್‌ ಮಾಡ್ತಿರೋ ವೀಕ್ಷಕರು

Image Credit : colors kannada

ಕಾಮೆಂಟ್‌ ಮಾಡ್ತಿರೋ ವೀಕ್ಷಕರು

ಗಗನಾ ಮಾತು ಕೇಳಿ ನೂರಾರು ಜನರು ಕಾಮೆಂಟ್‌ ಮಾಡುತ್ತಿದ್ದಾರೆ. ಗಗನಾ ಅವರಿಗೆ ಸೊಕ್ಕು, ಗಿಲ್ಲಿ ನಟನಿಗೆ ವಿಶ್‌ ಮಾಡಬಹುದಿತ್ತು. ಸೆಲೆಬ್ರಿಟಿ ಆಗಿದ್ದೀನಿ ಎನ್ನೋ ಅಹಂಕಾರ ಬಂದಿದೆ ಎಂದೆಲ್ಲ ಕಾಮೆಂಟ್‌ ಮಾಡುತ್ತಿದ್ದಾರೆ.  

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *