
ವಿಘ್ನಗಳನ್ನು ನಿವಾರಿಸುವ ಅವನ ಕಾರ್ಯಕ್ಕೆ ಸಂಬಂಧಿಸಿದ್ದರೆ ವಿಘ್ನೇಶ್ವರ ಎಂದೂ, ಆನೆ ಮುಖವಾಗಿದ್ದಕ್ಕೆ ಗಜಾನನ ಎಂದೂ, ಒಂದೇ ದಂತ ಉಳ್ಳವನಾಗಿರುವುದಕ್ಕೆ “ಏಕದಂತ”ನೆಂದೂ, ಹೊಗೆ ಬಣ್ಣದವನಾದ್ದರಿಂದ ಧೂಮ್ರವರ್ಣನೆಂದು, ಬಾಲಕನಾದ ಗಣೇಶನಿಗೆ “ಬಾಲಗಣಪತಿ”ಯೆಂದೂ, ಕಲಿಯುಗದಲ್ಲಿ ಕುದುರೆಯ ಮೇಲೆ ಸವಾರಿ ಮಾಡುವವನು “ಧೂಮ್ರವರ್ಣ” ಅಥವಾ “ಶೂರ್ಪಕರ್ಣ” ರೂಪದಲ್ಲೂ ಕಾಣಿಸಿಕೊಳ್ಳುತ್ತಾನೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.