ಬಾಗಲಕೋಟೆ, (ಜನವರಿ 22): ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು ಹಿಡಿದು 6 ಜನ ಕಳ್ಳರ (ಕಳ್ಳರು) ಗ್ಯಾಂಗ್ ರಾಜಾರೋಷವಾಗಿ ಹೋಗುತ್ತಿರುವ ದೃಶ್ಯ ರಬಕವಿ ಜನರನ್ನು ಬೆಚ್ಚಿಬೀಳಿಸಿದೆ. ಜನವರಿ 19ರ ಮಧ್ಯರಾತ್ರಿ 2 ಗಂಟೆಯ ವೇಳೆಗೆ ವಿದ್ಯಾನಗರ, ಬಸವನಗರದ ಆಕಡೆಯಿಂದ ಈಕಡೆ ಕಳ್ಳತನಕ್ಕೆ ಹೊಂಚು ಹಾಕುತ್ತಿರುವ ದೃಶ್ಯ ಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಈ ಸಿಸಿಟಿವಿ ಕ್ಯಾಮೆರಾದ ದೃಶ್ಯ ನೋಡಿ ಸಾರ್ವಜನಿಕರಲ್ಲಿ ಭಯ ಆವರಿಸಿದೆ. ಕೂಡಲೇ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಲು ಜನರು ಇದ್ದಾರೆ.