ಗಿಡದ ತುಂಬಾ ಗುಲಾಬಿ ಹೂ ಬಿಡ್ಬೇಕು ಅಂದ್ರೆ ಇದೊಂದು ವಸ್ತು ಹಾಕಿ ಮ್ಯಾಜಿಕ್ ನೋಡಿ

ಗಿಡದ ತುಂಬಾ ಗುಲಾಬಿ ಹೂ ಬಿಡ್ಬೇಕು ಅಂದ್ರೆ ಇದೊಂದು ವಸ್ತು ಹಾಕಿ ಮ್ಯಾಜಿಕ್ ನೋಡಿ

ಗಿಡದ ತುಂಬಾ ಗುಲಾಬಿ ಹೂ ಬಿಡ್ಬೇಕು ಅಂದ್ರೆ ಇದೊಂದು ವಸ್ತು ಹಾಕಿ ಮ್ಯಾಜಿಕ್ ನೋಡಿ

Garden Tips : ಬೆಳಿಗ್ಗೆ ಮನೆಯಲ್ಲಿ ಅರಳಿದ ಗುಲಾಬಿ ಹೂ ನೋಡಿದ್ರೆ ಮನಸ್ಸು ಖುಷಿಯಾಗುತ್ತದೆ. ಅದೇ ಒಣಗಿದ ಗಿಡ ಮನಸ್ಸಿಗೆ ನೋವು ನೀಡುತ್ತದೆ. ಮನೆ ಬಾಲ್ಕನಿಯಲ್ಲಿರುವ ಗುಲಾಬಿ ಗಿಡದಲ್ಲಿ ಪ್ರತಿ ದಿನ ಒಂದೊಂದು ಹೂ ಅರಳಬೇಕು ಅಂದ್ರೆ ಈ ಟಿಪ್ಸ್ ಟ್ರೈ ಮಾಡಿ.

ಗಿಡದ ತುಂಬಾ ಹೂ ಬಿಡ್ಬೇಕು ಎನ್ನುವ ಆಸೆಯಲ್ಲಿ ಗುಲಾಬಿ ಗಿಡ ನೆಟ್ಟಿರ್ತೇವೆ. ಅನೇಕ ಬಾರಿ ಈ ಗಿಡ ನಮ್ಮ ಆಸೆಗೆ ತಣ್ಣೀರೆರೆಚಿರುತ್ತೆ. ಆರಂಭದಲ್ಲಿ ಒಂದೆರಡು ಹೂ ಆದ್ರೂ ನಂತ್ರ ಗಿಡದಲ್ಲಿ ಮೊಗ್ಗು ಕಾಣಿಸೋದಿಲ್ಲ. ಎಲೆಗಳ ಬಣ್ಣ ಹಳಿದಿಯಾಗುತ್ತೆ. ಸರಿಯಾದ ಟೈಂಗೆ ನೀರು ಹಾಕಿದ್ರೂ, ಆರೈಕೆ ಮಾಡಿದ್ರೂ ಗಿಡದಲ್ಲಿ ಹೂ ಯಾಕೆ ಬಿಡ್ತಿಲ್ಲ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತೆ. ಬಾಲ್ಕನಿಯಲ್ಲಿ ಬೆಳೆಸಿದ ಗಿಡದ ತುಂಬಾ ಸದಾ ಗುಲಾಬಿ ಹೂ ಬಿಡ್ತಿರಬೇಕು ಅಂದ್ರೆ ಸಿಂಪಲ್ ಟಿಪ್ಸ್ ಫಾಲೋ ಮಾಡಿ.

ಒಂದೇ ಮಣ್ಣಿನಲ್ಲಿ ಎರಡು, ಮೂರು ವರ್ಷ ಗಿಡ ಇದ್ದಾಗ ಮಣ್ಣಿನಲ್ಲಿ ಪೋಷಕಾಂಶ ಇರೋದಿಲ್ಲ. ಸೂಕ್ತ ಪ್ರಮಾಣದ ಪೋಷಕಾಂಶದ ಸಿಕ್ಕಿಲ್ಲ ಎಂದಾಗ ಗಿಡ ಒಣಗಲು ಶುರುವಾಗುತ್ತದೆ. ಗಿಡಕ್ಕೆ ಪೋಷಕಾಂಶ ಇರುವ ಮಣ್ಣನ್ನು ನೀಡುವುದು ಬಹಳ ಮುಖ್ಯ. ಸಾಸಿವೆ ಕೇಕನ್ನು ನೀವು ಗುಲಾಬಿ ಗಿಡಕ್ಕೆ ಗೊಬ್ಬರವಾಗಿ ಬಳಸಬಹುದು. ಇದು ಗುಲಾಬಿ ಗಿಡಕ್ಕೆ ವರದಾನ ಅಂದ್ರೆ ತಪ್ಪಾಗೋದಿಲ್ಲ.

ಸಾಸಿವೆ ಕೇಕ್ ಅನ್ನೋದು ಸಾಸಿವೆಯ ಉಪ ಉತ್ಪನ್ನ. ಇದನ್ನು ಜಾನುವಾರುಗಳಿಗೆ ಮೇವಾಗಿ, ಮಣ್ಣಿಗೆ ಪೋಷಕಾಂಶವಾಗಿ ಮತ್ತು ಸಾಸಿವೆ ಎಣ್ಣೆ ದ್ರಾವಕ ತೆಗೆಯಲು ಬಳಸ್ತಾರೆ. ಮಾರ್ಕೆಟ್ ನಲ್ಲಿ ನಿಮಗೆ ಸಾಸಿವೆ ಕೇಕ್ ಸುಲಭವಾಗಿ ಸಿಗುತ್ತದೆ.

ಸಾಸಿವೆ ಕೇಕ್ ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ನಂತಹ ಅಗತ್ಯ ಅಂಶಗಳನ್ನು ಒಳಗೊಂಡಿದೆ. ಇವು ಸಸ್ಯಗಳ ಬೆಳವಣಿಗೆ, ಎಲೆಗಳ ಬಣ್ಣ ಮತ್ತು ಮೊಗ್ಗು ಅರಳಲು ಸಹಾಯ ಮಾಡುತ್ತದೆ. ನೀವು ಈ ಸಾಸಿವೆ ಕೇಕನ್ನು ಮಣ್ಣಿಗೆ ಬಳಸುವ ವಿಧಾನ ಕೂಡ ಮುಖ್ಯ.

ಸಾಸಿವೆ ಕೇಕ್, ಸಸ್ಯಕ್ಕೆ ಪ್ರತಿರೋಧಕ ಶಕ್ತಿ ನೀಡುತ್ತದೆ. ಇದು ಕೀಟ ಮತ್ತು ಶಿಲೀಂಧ್ರಗಳ ಅಪಾಯ ಕಡಿಮೆ ಮಾಡುತ್ತದೆ. ಪದೇ ಪದೇ ಒಣಗುವ ಗಿಡಕ್ಕೆ ಇದು ಹೆಚ್ಚು ಪ್ರಯೋಜನಕಾರಿ. ಸುಮಾರು 100 ಗ್ರಾಂ ಸಾಸಿವೆ ಕೇಕ್ ತೆಗೆದುಕೊಳ್ಳಿ. ಇದನ್ನು 1 ಲೀಟರ್ ನೀರಿಗೆ ಸೇರಿಸಿ ಮತ್ತು 2 ದಿನಗಳವರೆಗೆ ಮುಚ್ಚಿಡಿ. ಎರಡು ದಿನಗಳ ನಂತರ, ದ್ರಾವಣ ಸಿದ್ಧವಾಗುತ್ತದೆ. ಅದನ್ನು ಸೋಸಿ. ಪ್ರತಿ ಗುಲಾಬಿ ಗಿಡದ ಬೇರುಗಳ ಬಳಿ ಸುಮಾರು 1 ಕಪ್ ದ್ರಾವಣವನ್ನು ಹಾಕಬೇಕು.

ನೀವು ಗುಲಾಬಿ ಗಿಡಕ್ಕೆ ತಿಂಗಳಲ್ಲಿ ಒಮ್ಮೆ ಮಾತ್ರ ಈ ದ್ರಾವಣವನ್ನು ಹಾಕಬೇಕು. ನೇರವಾಗಿ ಸಾಸಿವೆ ಕೇಕ್ ಹಾಕಬಾರದು. ಗಿಡದ ಸಾಮರ್ಥ್ಯ ನೋಡಿ ಅನ್ನು ಹಾಕ್ಬೇಕು. ಹೆಚ್ಚಾದಲ್ಲಿ ಗಿಡಕ್ಕೆ ಅಪಾಯ ಹೆಚ್ಚು. ನಿಯಮಿತವಾಘಿ ನೀವು ಇದನ್ನು ಬಳಸಿದ್ರೆ ಕೆಲವೇ ದಿನಗಳಲ್ಲಿ ಗುಲಾಬಿ ಗಿಡದ ತುಂಬ ಮೊಗ್ಗು ಅರಳುತ್ತದೆ.

ಗುಲಾಬಿ ಗಿಡವನ್ನು ಪ್ರತಿದಿನ ಕನಿಷ್ಠ 4–5 ಗಂಟೆಗಳ ಕಾಲ ಸೂರ್ಯನ ಬೆಳಕಿನಲ್ಲಿ ಇಡಿ. ಅತಿಯಾದ ನೀರು ಹಾಕಬೇಡಿ. ಎಲೆ ಒಣಗಲು ಶುರುವಾದ್ರೆ ತಕ್ಷಣ ಕ್ರಮತೆಗೆದುಕೊಳ್ಳಿ. ಪ್ರತಿ 25–30 ದಿನಗಳಿಗೊಮ್ಮೆ ಲಘುವಾಗಿ ಗೊಬ್ಬರ ಹಾಕಿ. ಈ ಸರಳ ಹಂತಗಳು ನಿಮ್ಮ ಗುಲಾಬಿಗಳು ಹೆಚ್ಚು ಕಾಲ ಅರಳಲು ಸಹಾಯ ಮಾಡುತ್ತದೆ.

Source link

Leave a Reply

Your email address will not be published. Required fields are marked *