Headlines

ಒಂದು ರೂಪಾಯಿ ಖರ್ಚು ಮಾಡಿದ್ರೆ ಎಂದೂ ಒಣಗಲ್ಲ ತುಳಸಿ

ಒಂದು ರೂಪಾಯಿ ಖರ್ಚು ಮಾಡಿದ್ರೆ ಎಂದೂ ಒಣಗಲ್ಲ ತುಳಸಿ

ಒಂದು ರೂಪಾಯಿ ಖರ್ಚು ಮಾಡಿದ್ರೆ ಎಂದೂ ಒಣಗಲ್ಲ ತುಳಸಿ

Tulsi plant Garden tips : ತುಳಸಿ ಗಿಡ ಒಣಗಿದ್ರೆ ಒಳ್ಳೆಯದಲ್ಲ ಎನ್ನುವ ನಂಬಿಕೆ ನಮ್ಮಲ್ಲಿದೆ. ನಿಮ್ಮ ಮನೆಯಲ್ಲೂ ಪದೇ ಪದೇ ತುಳಸಿ ಗಿಡ ಹಾಳಾಗ್ತಿದ್ರೆ ಟೆನ್ಷನ್ ಬೇಡ. ಸಿಂಪಲ್ ಟ್ರಿಕ್ ಬಳಸಿ ತುಳಸಿ ಗಿಡ ಬೆಳೆಸಿ.

ಹಿಂದೂಗಳ ಪ್ರತಿಯೊಬ್ಬರ ಮನೆ ಮುಂದೆ ತುಳಸಿ ಗಿಡವನ್ನು ನೋಡ್ಬಹುದು. ತುಳಸಿಯನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತೆ. ತುಳಸಿಗೆ ಪ್ರತಿ ದಿನ ಪೂಜೆ ನಡೆಯುತ್ತೆ. ಆದ್ರೆ ಈ ತುಳಸಿ ಗಿಡವನ್ನು ಬೆಳೆಸೋದು ಕಷ್ಟ. ಒಂದೆರಡು ತಿಂಗಳ ನಂತ್ರ ಗಿಡ ಒಣಗಲು ಶುರುವಾಗುತ್ತದೆ. ಇದ್ರಿಂದ ಹೊಸ ಗಿಡ ಬೆಳೆಸುವ ಅನಿವಾರ್ಯತೆ ಎದುರಾಗುತ್ತೆ. ನಿಮ್ಮ ಮನೆಯಲ್ಲಿರುವ ತುಳಸಿ ಗಿಡ ಒಣಗಬಾರದು ಅಂದ್ರೆ ಒಂದು ಸರಳ ಟ್ರಿಕ್ಸ್ ಬಳಸಬಹುದು. ಕಡಿಮೆ ಖರ್ಚಿನಲ್ಲಿ ಇದನ್ನು ಮಾಡ್ಬಹುದು.

ನೀವು ತುಳಸಿ ಗಿಡದ ಆರೈಕೆಗೆ ಶಾಂಪೂ ಬಳಸಬಹುದು. ಒಂದು ರೂಪಾಯಿ ಶಾಂಪೂ ನಿಮ್ಮ ತುಳಸಿ ಗಿಡ ಚೆನ್ನಾಗಿ ಬೆಳೆಯಲು ಹೆಲ್ಪ್ ಮಾಡುತ್ತೆ. ಒಂದು ರೂಪಾಯಿ ಶಾಂಪೂವನ್ನು ತಂದು ಅದನ್ನು ಒಂದು ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ. ತುಳಸಿ ಗಿಡ, ಎಲೆ, ಕಾಂಡಕ್ಕೆ ಸ್ಪ್ರೇ ಮಾಡಿ.

ತುಳಸಿ ಗಿಡದಲ್ಲಿರುವ ಕಪ್ಪು ಕೀಟಗಳನ್ನು ನಾಶಪಡಿಸಲು ಶಾಂಪೂ ಅತ್ಯುತ್ತಮವಾಗಿದೆ. ಶಾಂಪೂವನ್ನು ನೀರಿಗೆ ಬೆರೆಸಿ ಸ್ಪ್ರೇ ಮಾಡಿದ್ರೆ ತುಳಸಿ ಗಿಡದಲ್ಲಿರುವ ಕಪ್ಪು ಕೀಟಗಳು ಸಾಯುತ್ವೆ. ಇದನ್ನು ಪ್ರತಿ ದಿನ ಮಾಡ್ಬಾರದು. ನೀವು ಮೂರರಿಂದ ನಾಲ್ಕು ದಿನಕ್ಕೊಮ್ಮೆ ಶಾಂಪೂ ಸ್ಪ್ರೇ ಮಾಡಿದ್ರೆ ಸಾಕು. ಶಾಂಪೂ ಸ್ಪ್ರೇ ಮಾಡಿದ ಮರುದಿನ ಶುದ್ಧ ನೀರಿನಿಂದ ತುಳಸಿ ಗಿಡವನ್ನು ತೊಳೆಯಬೇಕು. ಕೆಲವೇ ದಿನಗಳಲ್ಲಿ ನಿಮಗೆ ಇದ್ರ ಪರಿಣಾಮ ಕಾಣಿಸುತ್ತದೆ. ಕಪ್ಪು ಕೀಟಗಳು ನಾಶವಾಗಿ ತುಳಸಿ ಗಿಡ ಸುಂದರವಾಗಿ, ಹಸಿರು ಎಲೆಗಳಿಂದ ಕಂಗೊಳಿಸುತ್ತದೆ.

ನೀವು ತುಳಸಿ ಗಿಡಕ್ಕೆ ಆಲಮ್ ಕೂಡ ಬಳಕೆ ಮಾಡಬಹುದು. ಅಲ್ಯುಮಿನಿಯಂ ಮತ್ತು ಪೊಟ್ಯಾಶಿಯಂ ಪದಾರ್ಥ ಬಳಸಿ ಈ ಪಟಿಕವನ್ನು ತಯಾರಿಸಿರುತ್ತಾರೆ. ನೀವು ಇದನ್ನು ಆರಾಮವಾಗಿ ತುಳಸಿ ಗಿಡಕ್ಕೆ ಬಳಕೆ ಮಾಡಬಹುದು.

ತುಳಸಿ ಗಿಡಕ್ಕೆ ನೀವು ತಿಂಗಳಿಗೆ ಒಂದು ಬಾರಿ ಪಟಿಕದ ನೀರನ್ನು ಹಾಕಬೇಕು. ಒಂದು ಲೀಟರ್ ನೀರಿಗೆ ಪಟಿಕದ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಇದನ್ನು ಸ್ಪ್ರೇ ಬಾಟಲಿಗೆ ಹಾಕಿ, ತುಳಸಿ ಗಿಡದ ಎಲ್ಲ ಕಡೆ ಸ್ಪ್ರೇ ಮಾಡಿ. ಎಲೆ, ಬೇರುಗಳು ಸೇರಿದಂತೆ ಎಲ್ಲ ಕಡೆ ಸ್ಪ್ರೇ ಮಾಡಬೇಕು. ಇದು ನಿಮ್ಮ ತುಳಸಿ ಗಿಡ ಒಣಗದಂತೆ ತಡೆಯುತ್ತದೆ. ಹಸಿರಾದ ಎಲೆಗಳು ಗಿಡದ ಮೇಲೆ ಕಂಗೊಳಿಸುತ್ತವೆ. ಇಲ್ಲಿ ನೆನಪಿಡಬೇಕಾದ ವಿಷ್ಯ ಅಂದ್ರೆ ನೀವು ಪಟಿಕವನ್ನು ಕೇವಲ ತಿಂಗಳಿಗೆ ಒಂದು ಬಾರಿ ಮಾತ್ರ ಬಳಸಬೇಕು. ನೀವು ಅದಕ್ಕಿಂತ ಹೆಚ್ಚು ಬಾರಿ ಬಳಸಿದ್ರೆ ತುಳಸಿ ಗಿಡ ಹಾಳಾಗುವ ಸಾಧ್ಯತೆ ಇರುತ್ತದೆ.

ತುಳಸಿಯನ್ನು ಹಸಿರಾಗಿಡಲು, ಅದರ ಬೇರುಗಳು ಉಸಿರಾಡಲು ಅವಕಾಶ ನೀಡುವುದು ಮುಖ್ಯ. ಅದರ ಮಣ್ಣು ಒಣಗಿದಾಗ ಮಣ್ಣನ್ನು ಅಗೆಯಿರಿ. ಮಣ್ಣಿನ ಮೇಲಿನ ಪದರವನ್ನು ನಿಧಾನವಾಗಿ ಸಡಿಲಗೊಳಿಸಿ. ಬೇರುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಿ. ಸಸ್ಯದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ಪ್ರತಿದಿನ ನೀರು ಹಾಕಿ.

ತುಳಸಿ ಗಿಡಕ್ಕೆ ನೀವು ಉಪ್ಪನ್ನು ಹಾಕಬಹುದು. ಉಪ್ಪು ಹಾಕುವುದರಿಂದ ಸಸ್ಯಕ್ಕೆ ಪೋಷಕಾಂಶಗಳು ದೊರೆಯುತ್ತವೆ. ಇದು ಉತ್ತಮ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕೀಟಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

Source link

Leave a Reply

Your email address will not be published. Required fields are marked *