
ನೆಲಮಂಗಲ, ಮಾರ್ಚ್ 14: ಮಧ್ಯಪ್ರಾಚ್ಯದಲ್ಲಿ ಯುದ್ದದ ಎಫೆಕ್ಟ್ ಹಿನ್ನೆಲೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳು (ಗ್ಯಾಸ್ ಸಿಲಿಂಡರ್) ಅಭಾವ ಉಂಟಾಗಿದ್ದು, ಹೋಟೆಲ್ ಉದ್ಯಮದ ಮೇಲೆ ಎಫೆಕ್ಟ್ ಜೊತೆಗೆ ಪೀಣ್ಯ ಕೈಗಾರಿಕಾ ಪ್ರದೇಶದ ಮೇಲೂ ದೊಡ್ಡ ಪರಿಣಾಮ ಬೀರಿದೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಕಚ್ಚಾ ವಸ್ತು ಪೂರೈಕೆ ಮಾಡುವ ಕಂಪನಿಗಳಿದ್ದು ಸಿಲಿಂಡರ್ ಎಫೆಕ್ಟ್ನಿಂದ ಕೈಕೈ ಹಿಸುಕಿಕೊಳ್ಳುತ್ತದೆ.
ಪೀಣ್ಯ ಕೈಗಾರಿಕಾ ಪ್ರದೇಶಕ್ಕೂ ತಟ್ಟಿದ ಕಮರ್ಷಿಯಲ್ ಸಿಲಿಂಡರ್ ಬಿಸಿ
ಕಮರ್ಷಿಯಲ್ ಸಿಲಿಂಡರ್ ಸ್ಟಾಕ್ ಬ್ಯಾಂಡ್ ಹಿನ್ನೆಲೆ ಹೋಟೆಲ್ ಉದ್ಯಮದ ಜೊತೆಗೆ ಪೀಣ್ಯ ಕೈಗಾರಿಕಾ ಪ್ರದೇಶದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಖರೀದಿಸಿಕೊಂಡು ಬಂದಿರುವ ಕಂಪನಿಗಳು ಗ್ಯಾಸ್ ಸಿಲಿಂಡರ್ ಇಲ್ಲದೆ ಕೈಕಟ್ಟಿ ಕುಳಿತಿದ್ದಾರೆ. ಪೀಣ್ಯ ಪ್ರದೇಶದ ಶ್ರೀ ಲಕ್ಷ್ಮಿ ಫ್ರೋಫೈಲ್ ಕಂಪನಿಯಲ್ಲಿ 50ಕ್ಕೂ ಹೆಚ್ಚು ಕಾರ್ಮಿಕರಿದ್ದು ಕೆಲಸವಿಲ್ಲದೆ ಕೈ ಕಟ್ಟಿ ಕುಳಿತಿದ್ದಾರೆ.
ಇದನ್ನೂ ಓದಿ: ಬುಕ್ ಆಗದ ಗ್ಯಾಸ್ : ಖಾಲಿ ಸಿಲಿಂಡರ್ ಹಿಡಿದು ಕುಳಿತ ಜನ; ಮನೆ ಅಡುಗೆಗೂ ಕುತ್ತು
ಇನ್ನು ಈ 40 ಕಂಪನಿಗಳಿಗೆ ಕಚ್ಚಾ ವಸ್ತು ಪೂರೈಕೆ ಮಾಡುವ ಕಂಪನಿ, 30 ವರ್ಷಗಳಿಂದ ನಡೆಸಿಕೊಂಡು ಬರ್ತಿದೆ. ಇರಾಕ್ ಮತ್ತು ಇಸ್ರೇಲ್ ಯುದ್ದದಿಂದ ಗ್ಯಾಸ್ ಮೇಲೆ ಪರಿಣಾಮ ಬೀರಿದ್ದು ದಿನನಿತ್ಯ ಕಂಪನಿಯಲ್ಲಿ 50 ಕಾರ್ಮಿಕರಿಗೆ ಕೆಲಸ ಇಲ್ಲ. ಪ್ರತಿನಿತ್ಯ 15 ಗ್ಯಾಸ್ ಸಿಲಿಂಡರ್ ಅವಶ್ಯಕತೆಯಿದೆ. ಇದೀಗ ಸಿಲಿಂಡರ್ ಇಲ್ಲದೆ ಕಾರ್ಮಿಕರು ಕೈ ಕಟ್ಟಿ ಕುಳಿತಿದ್ದಾರೆ. ಇದ್ರಿಂದ ಕೋಟ್ಯಂತರ ರೂ ನಷ್ಟವಾಗಿದೆ.
ಇದನ್ನೂ ಓದಿ: ಗ್ಯಾಸ್ ಅಭಾವದ ಮಧ್ಯೆ ಮಂಗಳೂರು ಹೋಟೆಲ್ ವೊಂದರಿಂದ ಭರ್ಜರಿ ಆಫರ್: ಷರತ್ತು ಅನ್ವಯ
ಒಟ್ಟಿನಲ್ಲಿ ಕಮರ್ಷಿಯಲ್ ಸಿಲಿಂಡರ್ ಎಫೆಕ್ಟ್ ನಿಂದ ಸಾಕಷ್ಟು ಉದ್ಯಮಗಳ ಮೇಲೆ ಪರಿಣಾಮ ಬೀರಿದ್ದು, ಪೀಣ್ಯ ಕೈಗಾರಿಕಾ ಪ್ರದೇಶದ ಮೇಲೂ ಇದರ ಎಫೆಕ್ಟ್ ತಟ್ಟಿದೆ.
ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.