Headlines

ಬಾವಿಗೆ ಬಿದ್ದು 3 ದಿನ ಬಳಿಕ ಬದುಕಿ ಬಂದ ವೃದ್ಧ: ಗ್ಯಾಸ್ ಸಿಲಿಂಡರ್ OTP ವ್ಯಕ್ತಿಯ ಜೀವ ಉಳಿಸಿದ್ಹೇಗೆ ಗೊತ್ತಾ?

ಬಾವಿಗೆ ಬಿದ್ದು 3 ದಿನ ಬಳಿಕ ಬದುಕಿ ಬಂದ ವೃದ್ಧ: ಗ್ಯಾಸ್ ಸಿಲಿಂಡರ್ OTP ವ್ಯಕ್ತಿಯ ಜೀವ ಉಳಿಸಿದ್ಹೇಗೆ ಗೊತ್ತಾ?


ಬಾವಿಗೆ ಬಿದ್ದು 3 ದಿನ ಬಳಿಕ ಬದುಕಿ ಬಂದ ವೃದ್ಧ: ಗ್ಯಾಸ್ ಸಿಲಿಂಡರ್ OTP ವ್ಯಕ್ತಿಯ ಜೀವ ಉಳಿಸಿದೆ ಗೊತ್ತಾ?

ಉಡುಪಿ, (ಏಪ್ರಿಲ್ 06): ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೂರು ದಿನಗಳ ಕಾಲ ಜೀವ ಕೈಯಲ್ಲಿ ಹಿಡಿದುಕೊಂಡಿದ್ದ ವ್ಯಕ್ತಿ ಕೊನೆಗೂ ಪವಾಡ ಸದೃಶರಾಗಿ ಬದುಕಿಬಂದ ಘಟನೆ ಉಡುಪಿಯ (ಉಡುಪಿ) ಕಂಬಳಕಟ್ಟೆಯಲ್ಲಿ ನಡೆದಿದೆ. ಕಂಬಳಕಟ್ಟೆಯ ನಿವಾಸಿ 62 ವರ್ಷದ ಶ್ರೀನಿವಾಸ ಆಚಾರ್ಯ, 20 ಅಡಿ ಆಳದ ನೀರಿರುವ ಬಾವಿಗೆ ಬಿದ್ದು ಮೂರು ದಿನ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಗೆದ್ದುಬಂದಿದ್ದಾರೆ. ಹೌದು.. ಗ್ಯಾಸ್ ಸಿಲಿಂಡರ್ ಒಟಿಪಿಯಿಂದ (ಗ್ಯಾಸ್ ಸಿಲಿಂಡರ್ OTP) ಬಡಜೀವ ಬದುಕಿದೆ. ಇದು ಅಚ್ಚರಿ ಅನ್ನಿಸಿದರೂ ಸತ್ಯ.

ಮನೆ ಮುಂದಿನ 10 ಅಡಿ ಅಗಲ ಹಾಗೂ 20 ಅಡಿ ಆಳದ ಬಾವಿಗೆ ಕಸ ಬಿದ್ದು ಪಂಪ್ ಮೂಲಕ ನೀರು ಸರಿಯಾಗಿ ಬಾರದ ಕಾರಣ ಕಳೆದ ಶನಿವಾರ ಸಂಜೆ ಪಂಪ್ ಫುಟ್ ಬಾಲ್ ಪೈಪಿಗೆ ಕಟ್ಟಿದ್ದ ಹಗ್ಗವನ್ನು ಮೇಲಕ್ಕೆಳೆಯಲು ಅವರು ಪ್ರಯತ್ನಿಸಿದ್ದರು. ಈ ವೇಳೆ ಹಗ್ಗ ತುಂಡಾದ ಕಾರಣ ಆಯತಪ್ಪಿ ಬಾವಿಗೆ ಬಿದ್ದಿದ್ದಾರೆ. ಬಾವಿಯ ನೀರಿನಲ್ಲಿ ಮುಳುಗಿದರೂ ಜೀವ ಉಳಿಸಿಕೊಳ್ಳಲು ಪರದಾಡಿದ್ದ ಕೈಗೆ ಬಾವಿಯೊಳಗಿದ್ದ ಫುಟ್ ಬಾಲ್ ಪೈಪ್ ಹಾಗೂ ಅದಕ್ಕೆ ಕಟ್ಟಿದ್ದ ಹಗ್ಗ ಸಿಕ್ಕಿದ್ದು, ಅದನ್ನು ಹಿಡಿದುಕೊಂಡೇ ಜೀವ ರಕ್ಷಣೆಗಾಗಿ ಬೊಬ್ಬೆ ಹಾಕಿದ್ದರು. ಆದರೆ ಅವರ ಕೂಗು ಹೊರಕ್ಕೆ ಯಾರಿಗೂ ಕೇಳಲಿಲ್ಲ. ಕೊನೆಗೆ ಗ್ಯಾಸ್ ಸಿಲಿಂಡರ್ ಒಟಿಪಿಯಿಂದಾಗಿ ಶ್ರೀನಿವಾಸ ಆಚಾರ್ಯರ ಜೀವ ಉಳಿದಿದೆ. ಅದು ಹೇಗೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

ಇದನ್ನೂ ಓದಿ: ಒಟಿಪಿಯಿಂದ ಬದುಕಿತು ಬಡಜೀವ: 3 ದಿನ ಬಳಿಕ ಬಾವಿಯೊಳಗಿಂದ ಪವಾಡ ಸದೃಶರಾಗಿ ಬದುಕಿ ಬಂದ ವೃದ್ಧ



Source link

Leave a Reply

Your email address will not be published. Required fields are marked *