
ಕೊಡಗು, ಏಪ್ರಿಲ್ 02: ಗಲ್ಫ್ ರಾಷ್ಟ್ರದಲ್ಲಾಗುತ್ತಿರುವ ಯುದ್ಧದಿಂದಾಗಿ ಗ್ಯಾಸ್ ಪೂರೈಕೆಯಲ್ಲಿ (ಅನಿಲ ಕೊರತೆ) ವ್ಯತ್ಯಯವಾಗಿದೆ. ಪ್ರತಿಯೊಂದು ಕ್ಷೇತ್ರವೂ ಸೌದೆ ಒಲೆಗಳತ್ತ ಮುಖ ಮಾಡಿದೆ. ಹೀಗಾಗಿ ಸೌದೆ, ಇದ್ದಿಗೆ ಭಾರೀ ಬೇಡಿಕೆ ಬಂದಿದೆ. ಗ್ಯಾಸ್ ಕೊರತೆಯಿಂದಾಗಿ ಇದೀಗ ಸೌದೆ ಮತ್ತು ಇದ್ದಿಲು ಬಳಸಲಾಗುತ್ತಿದೆ. ಇದೀಗ ಸೀಸನ್ ಅಲ್ಲದಿದ್ದರೂ ಸೌದೆಗೆ ವ್ಯಾಪಕ ಬೇಡಿಕೆ ಸೃಷ್ಟಿಯಾಗುತ್ತಿದೆ.
ಗ್ಯಾಸ್ ಸಿಲಿಂಡರ್ ಇಲ್ಲದೇ ಪರದಾಟ
ಇರಾನ್-ಇಸ್ರೆಲ್ ಯುದ್ಧದಿಂದಾಗಿ ಜಾಗತಿಕವಾಗಿ ಆಗಿರುವ ಚಿತ್ರಗಳು ಒಂದೆರಡಲ್ಲ. ವಿಶೇಷವಾಗಿ ಅಡುಗೆ ಅನಿಲದ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರಿದೆ. ಅದರಲ್ಲೂ ಪ್ರವಾಸೋದ್ಯಮ ಜಿಲ್ಲೆಯಾಗಿರುವ ಕೊಡಗಿನಲ್ಲಿ ಹೋಟೆಲ್, ರೆಸಾರ್ಟ್, ಹೋಮ್ ಸ್ಟೇಗಳಲ್ಲಿ ಕಮರ್ಷಿಯಲ್ ಸಿಲಿಂಡರ್ಗಳಿಲ್ಲದೆ ಎಲ್ಲರೂ ಪರದಾಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದಾದ್ಯಂತ ಆಟೋ ಗ್ಯಾಸ್ ಹಾಹಾಕಾರ: ಬಂಕ್ಗಳ ಮುಂದೆ ಕಿಲೋಮೀಟರ್ ಗಟ್ಟಲೆ ಕ್ಯೂ, ಚಾಲಕರ ಬದುಕು ದುಸ್ತರ
ಇದುವರೆಗೂ ಹೋಟೆಲ್‌ಗಳಲ್ಲಿ ಅಡುಗೆ ಮಾಡಲು ಹೊಗೆ ಮುಕ್ತ ಗ್ಯಾಸನ್ನ ಬಳಸಲಾಯಿತು. ಆದರೆ ಇದೀಗ ವಾಣಿಜ್ಯ ಸಿಲಿಂಡರ್ ಕೊರತೆಯಿಂದಾಗಿ ಗ್ಯಾಸ್ ಬಳಸಿ ಅಡುಗೆ ಮಾಡಲಾಗುತ್ತಿಲ್ಲ. ಸದ್ಯ ಇದ್ದಲ್ಲಿಗೆ ಬೇಡಿಕೆ ಬಂದಿದೆ. ಸಾಂಪ್ರದಾಯಿಕ ಶೈಲಿಯಲ್ಲೇ ಗ್ರಿಲ್ ಚಿಕನ್, ತಂದೂರಿ ಚಿಕನ್ ಮಾಡಲು ಮುಂದಾಗಿದ್ದಾರೆ. ಯಾವುದೇ ಮಡಿಕೇರಿಯಲ್ಲಿ ಇದ್ದಿಲು ಬೇಡಿಕೆ ಬಂದಿದೆ.
ಸೌದೆಗೆ ಬೇಡಿಕೆ: ಕೆಜಿಗೆ 8 ರೂ ಮಾರಾಟ
ಇದೇ ವೇಳೆ ಸೌದೆಗೂ ಕೂಡ ಜಿಲ್ಲೆಯಲ್ಲಿ ಭಾರೀ ಬೇಡಿಕೆಯಿದೆ. ಇದುವರೆಗೂ ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮನೆಗಳಲ್ಲಿ ಮಾತ್ರ ಸೌದೆಗಳನ್ನು ಬಳಸುತ್ತಾರೆ. ಆದರೆ ಈಗ ಹೋಟೆಲ್, ರೆಸಾರ್ಟ್ ಸೌದೆ ಓಲೆಗಳನ್ನು ಬಳಸಲಾಗುತ್ತಿದೆ. ಇಂತಹ ಸೌದೆ ಡಿಪೋಗಳು ಹಾಗೂ ಹಳೆ ಮನೆಯ ಸಾಮಾಗ್ರಿ ಮಾರಾಟ ಕೇಂದ್ರಗಳಲ್ಲಿ ಸೌದೆಗಳಿಗೆ ಬೇಡಿಕೆ ಇದೆ. ಕೆಜಿಗೆ 8 ರೂ.ನಂತೆ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಗ್ಯಾಸ್ ಸಮಸ್ಯೆ ಮಧ್ಯೆ! ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಪಲ್ಟಿ
ಜಿಲ್ಲೆಯ ಪ್ರತಿಷ್ಠಿತ ಹೋಟೆಲ್, ರೆಸಾರ್ಟ್ಗಳ ಬಾಣಸಿಗರ ಎಲ್ಲಾ ಹಳೆಯ ಸೌದೆ ಓಲೆಗಳಿಗೆ ಪರಿವರ್ತನೆಯಾಗಿದೆ. ಅಷ್ಟೇ ಅಲ್ಲದೆ ಈಗ ಕೊಡಗಿನ ಕಾಫಿ ತೋಟಗಳಲ್ಲಿ ಬೇಕಾದಷ್ಟು ಸೌದೆಗಳು ಸಿಗ್ತಾ ಇರೋದು ಬೇಡಿಕೆ ತಕ್ಕಷ್ಟು ಪೂರೈಕೆ ದೊರೆಯುವಂತೆ ಮಾಡಿದೆ. ಯಾವುದೇ ಸದ್ಯಕ್ಕೆ ಕೊಡಗಿನ ಅಡುಗೆಗಂತೂ ಯಾವುದೇ ಅಡ್ಡಿ ಆತಂಕವಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.