Gautam Gambhir: ನಾನೂ ಮನುಷ್ಯ, ಕೆಲ ತಪ್ಪುಗಳನ್ನು ಮಾಡಿದ್ದೇನೆ..!

Gautam Gambhir: ನಾನೂ ಮನುಷ್ಯ, ಕೆಲ ತಪ್ಪುಗಳನ್ನು ಮಾಡಿದ್ದೇನೆ..!


ಗೌತಮ್ ಗಂಭೀರ್: ನಾನೂ ಮನುಷ್ಯ, ಕೆಲ ತಪ್ಪುಗಳನ್ನು ಮಾಡಿದ್ದೇನೆ..!

ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಹಾಗೂ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿಯಿಲ್ಲವಾ? ಈ ಒಂದು ಪ್ರಶ್ನೆ ಮತ್ತೆ ಉದ್ಭವಿಸಲು ಮುಖ್ಯ ಕಾರಣ ಇತ್ತೀಚೆಗೆ ಗಂಭೀರ್ ನೀಡಿದ ಹೇಳಿಕೆ. ಕೋಲ್ಕತ್ತಾದಲ್ಲಿ ನಡೆದ ‘ರೇವ್‌ಸ್ಪೋರ್ಟ್ಜ್ ಟ್ರೇಲ್‌ಬ್ಲೇಜರ್ಸ್ ಕಾನ್ಕ್ಲೇವ್ 4.0’ ಕಾರ್ಯಕ್ರಮದಲ್ಲಿ ಗಂಭೀರ್‌ಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವಣ ಸಂಬಂಧದ ಬಗ್ಗೆ ಪ್ರಶ್ನೆ ಎದುರಾಗಿದೆ.

ಈ ಪ್ರಶ್ನೆಗೆ ಉತ್ತರಿಸಿದ ಗಂಭೀರ, ಆಟಗಾರರಂತೆ ತರಬೇತುದಾರರೂ ಕೂಡ ಮನುಷ್ಯರು. ಕಳೆದ 18 ತಿಂಗಳಿನಲ್ಲಿ ನಾನು ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿರಬಹುದು. ಅದನ್ನು ಒಪ್ಪಿಕೊಳ್ಳಲು ನನಗೆ ಯಾವುದೇ ಸಂಕೋಚವಿಲ್ಲ.

ಆದರೆ ಒಳ್ಳೆಯ ಉದ್ದೇಶದಿಂದ ತೆಗೆದುಕೊಂಡ ತಪ್ಪು ನಿರ್ಧಾರವನ್ನು ಒಪ್ಪಬಹುದು, ಆದರೆ ಕೆಟ್ಟ ಉದ್ದೇಶದಿಂದ ತೆಗೆದುಕೊಳ್ಳುವ ಯಾವುದೇ ತಪ್ಪು ನಿರ್ಧಾರವನ್ನು ಡ್ರೆಸ್ಸಿಂಗ್ ರೂಮ್‌ನಲ್ಲಿ ಸಹಿಸುವುದಿಲ್ಲ ಎಂದು ಖಡಕ್ಕಾಗಿ ಹೇಳಿದರು.

ನಾನು ತಂಡದ ಸಹಾಯಕ ಸಿಬ್ಬಂದಿಯಿಂದ, ಮಸಾಜ್ ಮಾಡುವವರಿಂದ ಹಿಡಿದು ಸಹಾಯಕ ತರಬೇತುದಾರರವರೆಗೆ… ಪ್ರತಿಯೊಬ್ಬರ ಕಣ್ಣಲ್ಲೂ ಕಣ್ಣಿಟ್ಟು ಮಾತನಾಡುವಷ್ಟು ಪ್ರಾಮಾಣಿಕವಾಗಿ ತಾನು ಕೆಲಸ ಮಾಡುತ್ತಿದ್ದೇನೆ. ನಾನು ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಬಹುದಾದರೆ, ನಾನು ನ್ಯಾಯಯುತ ಕೆಲಸ ಮಾಡುತ್ತಿದ್ದೇನೆ ಎಂದರ್ಥ.

ಹೀಗಾಗಿ ನಾನು ತಪ್ಪು ಮಾಡಿದರೂ ಅದು ಸರಿಯಾದ ನಿರ್ಧಾರ ಎಂಬುದು ನನ್ನ ಅನಿಸಿಕೆ. ಸರಿಯಾದ ಉದ್ದೇಶದಿಂದ ತೆಗೆದುಕೊಂಡ ತಪ್ಪು ನಿರ್ಧಾರ ಸ್ವೀಕಾರಾರ್ಹ. ನನ್ನ ಕೋಚಿಂಗ್ ಸಮಯದಲ್ಲಿ ನಾನು ತಪ್ಪುಗಳನ್ನು ಮಾಡಿರಬಹುದು. ಆದರೆ ಆ ನಿರ್ಧಾರಗಳು ಕೂಡ ಒಳ್ಳೆಯ ಉದ್ದೇಶಕ್ಕಾಗಿ. ಹೀಗಾಗಿ ಇಂತಹ ನಿರ್ಧಾರಗಳಿಂದ ನಾನು ಹಿಂದೆ ಸರಿಯುವುದಿಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಇದೆ ವೇಳೆ ಸಾಮಾಜಿಕ ಜಾಲತಾಣಗಳ ಟೀಕೆಗಿಂತ ತಂಡದ ಒಳಗಿನ 30 ಜನರ ನಂಬಿಕೆ ನನಗೆ ಮುಖ್ಯ ಪ್ರತಿಪಾದಿಸಿದ ಗಂಭೀರ್, ನನ್ನ ಅವಧಿಯಲ್ಲಿ ಭಾರತ ತಂಡವು ಗೆದ್ದ ಪ್ರಮುಖ ಪ್ರಶಸ್ತಿಗಳನ್ನು ಸ್ಮರಿಸಿದರು. ಇದು ನಾನು ಕೊಚ್ ಆಗಿ ಯಶಸ್ಸು ಸಾಧಿಸಿದ್ದೇನೆ ಎಂಬುದಕ್ಕೆ ಸಾಕ್ಷಿ ಎಂದು ಸ್ಥಾಪಿಸಿದೆ.

ಇತ್ತ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಡುವಣ ಸಂಬಂಧಗಳ ಬಗ್ಗೆ ಕೇಳಿದ ಪ್ರಶ್ನೆಗೆ ತಪ್ಪು ನಿರ್ಧಾರಗಳ ಉತ್ತರ ನೀಡಿದ ಗಂಭೀರ, ದಿಗ್ಗಜರಿಬ್ಬರನ್ನು ಟೆಸ್ಟ್ ಕ್ರಿಕೆಟ್‌ನಿಂದ ಹೊರಗಿಟ್ಟಿರುವುದನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ ಎಂದು ವಿವರಿಸಲಾಗಿದೆ.

ಇದನ್ನೂ ಓದಿ: IPL 2026: ಐಪಿಎಲ್ ಆರಂಭಕ್ಕೂ ಮುನ್ನವೇ SRH ತಂಡಕ್ಕೆ

ಒಟ್ಟಿನಲ್ಲಿ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಗಂಭೀರ್ ಗರಡಿಯಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಿದೆ, ಇಂತಹ ಪ್ರದರ್ಶನವನ್ನು ರೆಡ್ ಬಾಲ್ ಕ್ರಿಕೆಟ್ ನಲ್ಲೂ ಎದುರು ನೋಡುತ್ತಿದ್ದೇನೆ. ಪ್ರಮುಖ ಟೀಮ್ ಇಂಡಿಯಾ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್‌ಗೇರುವಲ್ಲಿ ವಿಫಲವಾದರೆ, ಭಾರತ ಟೆಸ್ಟ್ ತಂಡದ ಕೋಚ್ ಸ್ಥಾನದಿಂದ ಗೌತಮ್ ಗಂಭೀರ್ ಅವರನ್ನು ವಜಾಗೊಳಿಸಲಾಗಿದೆ. ಜೊತೆಗೆ ಏಕದಿನ ಮತ್ತು ಟಿ20 ತಂಡಗಳಿಗೆ ಗಂಭೀರ್ ಅವರನ್ನು ಕೋಚ್ ಆಗಿ ಮುಂದುವರಿಸಿ ಟೆಸ್ಟ್ ತಂಡಕ್ಕೆ ಹೊಸ ಕೋಚ್ ಅವರನ್ನು ನೇಮಿಸಿಕೊಳ್ಳುವ ಸಾಧ್ಯತೆಯಿದೆ.



Source link

Leave a Reply

Your email address will not be published. Required fields are marked *