ಜಿಬಿಎ ಚುನಾವಣೆ: ಬ್ಯಾಲೆಟ್ ಪೇಪರ್ ಬಳಕೆಗೆ ವಿರೋಧ, ಇವಿಎಂ ಬಳಸುವಂತೆ ಸಂಘ-ಸಂಸ್ಥೆಗಳ ಪಟ್ಟು

ಜಿಬಿಎ ಚುನಾವಣೆ: ಬ್ಯಾಲೆಟ್ ಪೇಪರ್ ಬಳಕೆಗೆ ವಿರೋಧ, ಇವಿಎಂ ಬಳಸುವಂತೆ ಸಂಘ-ಸಂಸ್ಥೆಗಳ ಪಟ್ಟು


ಬೆಂಗಳೂರು, ಫೆಬ್ರವರಿ 1: ಆರೇಳು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪಾಲಿಕೆ (GBA) ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ರೆಡಿಯಾಗಿದೆ. ಸುಪ್ರೀಂ ಕೋರ್ಟ್ ಸೂಚನೆ ಬೆನ್ನಲ್ಲೇ ಕೆಲಸ ಕಾರ್ಯಗಳು ಭರದಿಂದ ಸಾಗಿದ್ದು, ಮತದಾರರ ಅಂತಿಮ ಪಟ್ಟಿ ಹಾಗೂ ಚುನಾವಣಾ ದಿನಾಂಕ ಘೋಷಣೆ ಆಗೋದಕ್ಕೆ ಬಾಕಿ ಇದೆ. ಉಳಿದಂತೆ 369 ವಸತಿ ಹಾಗೂ ಮೀಸಲಾತಿ ಎಲ್ಲವೂ ನಿಗದಿಯಾಗಿದೆ. ಆದರೆ ಈ ಬಾರಿಯ ಚುನಾವಣೆಗೆ ರಾಜ್ಯ ಚುನಾವಣ ಆಯೋಗ ಬ್ಯಾಲೆಟ್ ಪೇಪರ್ ಬಳಕೆ ಮಾಡಲು ಮುಂದಾಗಿರುವುದು ಸಾರ್ವಜನಿಕ ಸಂಘ, ಸಂಸ್ಥೆಗಳ ಸಿಟ್ಟಿಗೆ ಕಾರಣವಾಗಿದೆ.

ಬಿ ಪ್ಯಾಕ್, ಸಿಟಿಜನ್ಸ್ ಫಾರ್ ಸಿಟಿಜನ್ಸ್ ಸೇರಿದ ನಗರದ ಹಲವು ಸಂಘ, ಸಂಸ್ಥೆಗಳು ಬ್ಯಾಲೆಟ್ ಪೇಪರ್ ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಜೊತೆಗೆ, ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಗ್ರೇಶಿಗೆ ಈ ಬಗ್ಗೆ ಮನವಿಯನ್ನೂ ಕೊಟ್ಟಿದ್ದು ಬ್ಯಾಲೆಟ್ ಪೇಪರ್ ಕೈ ಬಿಟ್ಟು ಇವಿಎಂ ಅನ್ನೇ ಬಳಸುವಂತೆ ಕೇಳಿದೆ. ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಹೆಸರು ಮಾಡಿರುವ ಬೆಂಗಳೂರಿನ ಪಾಲಿಕೆ ಚುನಾವಣೆ ಬ್ಯಾಲೆಟ್ ಪೇಪರ್ ನಲ್ಲಿ ನಡೆಸಿದರೆ ಅದು ಬೆಂಗಳೂರಿಗೆ ಅವಮಾನ ಮಾಡಿದಂತೆ ಎಂಬುದು ಸಂಘ, ಸಂಸ್ಥೆಗಳ ವಾದ.

ಆದರೆ, ರಾಜ್ಯ ಚುನಾವಣ ಆಯೋಗ ಬ್ಯಾಲೆಟ್ ಪೇಪರ್ ಕೈ ಬಿಡುವ ಲಕ್ಷಣ ಕಾಣುತ್ತಿಲ್ಲ. ಈ ಆಯೋಗದಿಂದ ಚುನಾವಣಾಧಿಕಾರಿಗಳಿಗೆ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಬ್ಯಾಲೆಟ್ ಪೇಪರ್ ನಲ್ಲೇ ಚುನಾವಣೆ ಎಂಬುದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಪ್ರತಿಕ್ರಿಯೆ.

ಇದನ್ನೂ ಓದಿ: ಇವಿಎಂ ಬಗ್ಗೆ ಕರ್ನಾಟಕದ ಬಹುಪಾಲು ಜನರಿಗಿದೆ ವಿಶ್ವಾಸ: ಸಿಂ ಸಿದ್ದರಾಮಯ್ಯ, ಖರ್ಗೆ ತವರಲ್ಲೇ ಹೆಚ್ಚು!

ಮಾರ್ಚ್ 26ಕ್ಕೆ ಶಾಲಾ ಮಕ್ಕಳ ಪರೀಕ್ಷೆ ಮುಕ್ತಾಯ ದಿನಾಂಕ. ಹೀಗಾಗಿ ಮಾರ್ಚ್ 16ಕ್ಕೆ ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿ ಜೂನ್ 30 ರಂದು ನೂತನ ಕೌನ್ಸಿಲ್ ಸದಸ್ಯರ ಆಯ್ಕೆ ಪ್ರಕ್ರಿಯೆ ಲಭ್ಯವಾಗಬೇಕಿದೆ. ಇದರ ನಡುವೆ ಕೇಳಿ ಬಂದಿರುವ ಬ್ಯಾಲೆಟ್ ಪೇಪರ್‌ಗೆ ವಿರೋಧವನ್ನು ರಾಜ್ಯ ಚುನಾವಣಾ ಆಯೋಗ ಹೇಗೆ ನಿಭಾಯಿಸುತ್ತದೆ ಎನ್ನುವುದನ್ನು ಕಾದು ನೋಡಬೇಕು.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *