Headlines

ಬೆಂಗಳೂರು ಆಸ್ತಿ ಮಾಲೀಕರಿಗೆ ಜಿಬಿಎ ಗುಡ್​ನ್ಯೂಸ್: ಫೇಸ್‌ಲೆಸ್, ಕಾಂಟ್ಯಾಕ್ಟ್ ಲೆಸ್, ಆನ್‌ಲೈನ್ ಇ-ಖಾತಾ ಜಾರಿ

ಬೆಂಗಳೂರು ಆಸ್ತಿ ಮಾಲೀಕರಿಗೆ ಜಿಬಿಎ ಗುಡ್​ನ್ಯೂಸ್: ಫೇಸ್‌ಲೆಸ್, ಕಾಂಟ್ಯಾಕ್ಟ್ ಲೆಸ್, ಆನ್‌ಲೈನ್ ಇ-ಖಾತಾ ಜಾರಿ


ಬೆಂಗಳೂರು, ನವೆಂಬರ್ 12: ರಾಜಧಾನಿ ಬೆಂಗಳೂರಿನ ಆಸ್ತಿಮಾಲೀಕರಿಗೆ ಇ-ಖಾತಾ (ಇ-ಖಾತಾ) ನೋಂದಣಿಯಲ್ಲಿ ಆಗುತ್ತಿದ್ದ ಸಮಸ್ಯೆಗಳಿಗೆ ಕೊನೆಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಪರಿಹಾರ ನೀಡುವುದಕ್ಕೆ ಹೊರಟಿದೆ. ಇಷ್ಟು ದಿನ ಜಿಬಿಎ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದ ಆಸ್ತಿಗೆ ಕೊನೆಗೂ ಗುಡ್ ನ್ಯೂಸ್ ನೀಡಲಾಗಿದೆ ಜಿಬಿಎ, ಫೇಸ್‌ಲೆಸ್, ಕಾಂಟ್ಯಾಕ್ಟ್ ಲೆಸ್ ಮತ್ತು ಲೈನ್ ಇ-ಖಾತಾ ಮಾಡುವ ಮೂಲಕ ಕೊಂಚ ರಿಲೀಫ್ ನೀಡಿದೆ.

ಮಧ್ಯವರ್ತಿಗಳ ಹಾವಳಿ ಸೇರಿ ಭ್ರಷ್ಟಾಚಾರಕ್ಕೂ ಬ್ರೇಕ್

ಬೆಂಗಳೂರಿನ ಆಸ್ತಿಗೆ ಇ-ಖಾತಾ ನೋಂದಣಿ ಆಗ್ತಿದ್ದ ಸಮಸ್ಯೆಗಳನ್ನ ಬಗೆಹರಿಸೋಕೆ ಹೊರಟಿರೋ ಜಿಬಿಎ, ಇದೀಗ ಫೇಸ್‌ಬುಕ್‌ನಲ್ಲಿ, ಕಾಂಟ್ಯಾಕ್ಟ್-ಲೆಸ್ ಮತ್ತು ಆನ್‌ಲೈನ್ ಇ-ಖಾತಾ ಜಾರಿಯಾಗಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಅಂತಿಮ ಇ-ಖಾತಾ ಅಥವಾ ಹೊಸ ಖಾತಾ ಅನುಮೋದಿಸಲು ಎಆರ್‌ಒ ಅಥವಾ ಕೇಸ್ ವರ್ಕರ್ ಆಸ್ತಿ ದಾಖಲೆಗಳನ್ನು ಮಾತ್ರ ಪರಿಶೀಲಿಸಬೇಕು. ಪ್ರಸ್ತುತ ದಾಖಲೆಗಳು ಆನ್‌ಲೈನ್‌ನಲ್ಲಿ ಪ್ರಸ್ತುತ ನಾಗರಿಕರು ಅವರನ್ನ ಭೇಟಿ ಮಾಡಲು ಅಗತ್ಯವಿಲ್ಲದ ಮಧ್ಯವರ್ತಿಗಳ ಹಾವಳಿ ಮತ್ತು ಭ್ರಷ್ಟಾಚಾರಕ್ಕೆ ಬ್ರೇಕ್ ಬೀಳಲಿದೆ.

ಇದನ್ನೂ ಓದಿ: ಇಂದಿನಿಂದ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಅವಕಾಶ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಇನ್ನು ಇಷ್ಟು ದಿನ ಈ-ಖಾತಾ ನೋಂದಣಿಗೆ ಅಂತಾ ಕಾದು ಸುಸ್ತಾಗಿದ್ದ ಆಸ್ತಿ, ಸರ್ವರ್ ಸಮಸ್ಯೆ, ಅಧಿಕಾರಿಗಳು ಸಿಗದೇ ಇರೋದರ ಜೊತೆಗೆ ಜಾತಿ ಸಮೀಕ್ಷೆಗೆ ಸಿಬ್ಬಂದಿ ನೇಮಿಸಿ ಹೋಗಿದ್ದರು. ಇದೀಗ ಫೇಸ್‌ಲೆಸ್ ಕಾಂಟ್ಯಾಕ್ಟ್ – ಲೆಸ್ ಮತ್ತು ಆನ್‌ಲೈನ್ ಇ-ಖಾತಾ ವ್ಯವಸ್ಥೆಯಿಂದ ಆಸ್ತಿ ಒದಗಿಸಿದ ಮಧ್ಯವರ್ತಿಗಳ ಸಹಾಯ ಇಲ್ಲದೇ ಇ-ಖಾತಾ ಪಡೆಯೋಕೆ ಸಹಕಾರಿಯಾಗಲಿದೆ.

ಫೇಸ್ ಲೆಸ್ ಇ-ಖಾತಾ ಪ್ರಯೋಜನಗಳೇನು?

  • 25 ಲಕ್ಷ ಇ-ಖಾತಾಗಳು ಆನ್‌ಲೈನ್‌ನಲ್ಲಿ ಸಾರ್ವಜನಿಕರಿಗೆ ಯಾವುದೇ ಸಮಯದಲ್ಲಿ ಲಭ್ಯವಿಲ್ಲ.
  • ಕಾವೇರಿ ಮತ್ತು ಸ್ವಯಂಚಾಲಿತ ತಿದ್ದುಪಡಿಗಳೊಂದಿಗೆ ಏಕೀಕರಣ.
  • ಇ-ಖಾತಾ ಬದಲಾವಣೆಗಳ ಪ್ರಕಾರ ಆಸ್ತಿ ತೆರಿಗೆ ದಾಖಲೆಗಳು ಮತ್ತು ಬೆಸ್ಕಾಂ ಮಾಲೀಕತ್ವದಲ್ಲಿ ಸ್ವಯಂಚಾಲಿತ ಬದಲಾವಣೆ.
  • ಮಧ್ಯವರ್ತಿಗಳಿಗೆ ಬ್ರೇಕ್:ಭ್ರಷ್ಟಾಚಾರವನ್ನು ಕಡಿಮೆ ಮಾಡುವುದು ಮತ್ತು ಏಜೆಂಟರು ಅಥವಾ ಮಧ್ಯವರ್ತಿಗಳಿಂದ ಶೋಷಣೆಗೆ ಬ್ರೇಕ್ ಬೀಳಲಿದೆ.
  • ಕೆಲಸದ ಹೊರೆ ಕಡಿಮೆ ಮಾಡುವ ಜೊತೆಗೆ ಎಲ್ಲಾ ಅಧಿಕಾರಿಗಳಿಗೆ ಅರ್ಜಿಗಳ ಏಕರೂಪದ ವಿತರಣೆಯನ್ನು ಖಚಿತಪಡಿಸುತ್ತದೆ.
  • ಪ್ರತಿಯೊಬ್ಬ ಆಸ್ತಿದಾರರು ಅಂತಿಮ ಈ ಖಾತಾ ಅರ್ಜಿಯನ್ನು 7 ದಿನಗಳು ಮತ್ತು ಹೊಸ ಖಾತಾ ಸಂದರ್ಭದಲ್ಲಿ 60 ದಿನಗಳಲ್ಲಿ ಪಡೆಯಲಾಗುತ್ತದೆ.

ಇದನ್ನೂ ಓದಿ: ಬೆಂಗಳೂರು: ಈ ಖಾತಾ ಮಾಹಿತಿ ನೀಡಲು ಬರಲಿದೆ ಮೊಬೈಲ್ ಆಯಪ್!

ಇತ್ತೀಚೆಗಷ್ಟೇ ಎ ಖಾತಾ ಬಿ ಖಾತಾ ಬದಲಾವಣೆಗೆ ಅವಕಾಶ ನೀಡಿದ್ದ ಜಿಬಿಎ, ಇದೀಗ ಐಟಿಸಿಟಿಯ ಆಸ್ತಿ ತಮ್ಮ ಆಸ್ತಿಗಳನ್ನು ಇ-ಖಾತಾ ನೋಂದಣಿ ಮಾಡುವುದಕ್ಕೆ ಸಹಾಯವಾಗುವಂತೆ ಜಿಬಿಎ ವ್ಯವಸ್ಥೆ ಮಾಡಿದೆ. ಸದ್ಯ ಸರ್ಕಾರದ ಸೂಚನೆ ಬೆನ್ನಲ್ಲೇ ಶೀಘ್ರವಾಗಿ ಇ-ಖಾತಾ ತಲುಪಿಸೋಕೆ ಹೊಸ ಪ್ರಯೋಗ ಮಾಡೋಕೆ ಹೊರಟಿರೋ ಜಿಬಿಎ ನಡೆಯಿಂದ ಇನ್ನಾದರೂ ಖಾತಾ ಸಮಸ್ಯೆಗಳು ಬಗೆಹರಿಯುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 9:21 pm, ಬುಧವಾರ, 12 ನವೆಂಬರ್ 25



Source link

Leave a Reply

Your email address will not be published. Required fields are marked *