ಬೆಂಗಳೂರಿನಲ್ಲಿ ಕ್ರೂರ ಸ್ವಭಾವದ ನಾಯಿಗಳ ಸೆರೆಗೆ ಮುಂದಾದ ಜಿಬಿಎ: ಶೆಲ್ಟರ್ ನಿರ್ಮಾಣಕ್ಕೆ ಜಾಗ ಹುಡುಕಾಟ

ಬೆಂಗಳೂರಿನಲ್ಲಿ ಕ್ರೂರ ಸ್ವಭಾವದ ನಾಯಿಗಳ ಸೆರೆಗೆ ಮುಂದಾದ ಜಿಬಿಎ: ಶೆಲ್ಟರ್ ನಿರ್ಮಾಣಕ್ಕೆ ಜಾಗ ಹುಡುಕಾಟ


ಬೆಂಗಳೂರು, ಫೆಬ್ರವರಿ 22: ಹೆಚ್ಚಿನ ಬೀದಿ ನಾಯಿಗಳು (ಬೀದಿ ನಾಯಿಗಳು) ಉಪಟಳ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಹೀಗಾಗಿ ಬೀದಿನಾಯಿಗಳ ಆಟಾಟೋಪಕ್ಕೆ ಬ್ರೇಕ್ ಹಾಕುವಂತೆ ಸೂಚನೆ ನೀಡಿತ್ತು. ಅದರಂತೆ ಇದೀಗ ಜಿಬಿಎ ಕ್ರೂರ ಸ್ವಭಾವವುಳ್ಳ ನಾಯಿಗಳಿಗೆ ಶೆಲ್ಟರ್ (ಆಶ್ರಯ) ನಿರ್ಮಾಣ ಮಾಡಲು ಜಾಗದ ಹುಡುಕಾಟಕ್ಕೆ ಮುಂದಾಗಿದೆ.

ಶೆಲ್ಟರ್ ನಿರ್ಮಾಣಕ್ಕೆ 5 ಪಾಲಿಕೆ ವ್ಯಾಪ್ತಿಯ ಜಾಗ ಹುಡುಕಾಟ

ಬೆಂಗಳೂರಿನಲ್ಲಿ ಸರಿಸುಮಾರು 2 ಲಕ್ಷ 30 ಸಾವಿರಕ್ಕೂ ಅಧಿಕ ಬೀದಿನಾಯಿಗಳಿದ್ದು, ಅದರಲ್ಲಿ 2,500ಕ್ಕೂ ಹೆಚ್ಚು ಕ್ರೂರ ಸ್ವಭಾವವುಳ್ಳ ಬೀದಿನಾಯಿಗಳನ್ನು ಗುರುತಿಸಲಾಗಿದೆ. ಇವುಗಳ ರಕ್ಷಣೆ ಮಾಡಿ ಸಾಕುವ ಉದ್ದೇಶಕ್ಕಾಗಿ ಶೆಲ್ಟರ್ ನಿರ್ಮಾಣಕ್ಕೆ 5 ಪಾಲಿಕೆ ವ್ಯಾಪ್ತಿಯಲ್ಲೂ ಜಿಬಿಎ ಜಾಗವನ್ನು ಹುಡುಕಲಾಗುತ್ತಿದೆ. ನಗರದ ಭಂಗೀಪುರ, ಬೆಟ್ಟಹಳ್ಳಿ ಹಾಗೂ ಮಹದೇವಪುರ ಹೊರವಲಯದಲ್ಲಿ ಜಾಗ ಗುರುತಿಸಲಾಗಿದೆ.

7 ಕೋಟಿ ರೂ ವೆಚ್ಚದಲ್ಲಿ ಶೆಲ್ಟರ್ ನಿರ್ಮಾಣ

ಸುಮಾರು 7 ಕೋಟಿ ರೂ ವೆಚ್ಚದಲ್ಲಿ ಶೆಲ್ಟರ್ ನಿರ್ಮಾಣಕ್ಕೆ ಜಿಬಿಎ ಮುಂದಾಗಿದೆ. ಒಂದೊಂದು ಪಾಲಿಕೆಯಲ್ಲಿ ನಿರ್ಮಾಣ ಮಾಡಲಾಗುವ ಶೆಲ್ಟರ್‌ಗಳಲ್ಲಿ ಸರಿಸುಮಾರು 500 ರಿಂದ 600 ಕ್ರೂರ ಬೀದಿನಾಯಿಗಳ ಸಂರಕ್ಷಣೆ ಮಾಡಲು ಪ್ರಾಣಿ ಕಾಯ್ದೆಯಡಿ ಜಿಬಿಎ ಪ್ಲಾನ್ ನಡೆಸಿದೆ. ಈ ಕ್ರೂರ ಸ್ವಭಾವವುಳ್ಳ ನಾಯಿಗಳ ಉಪಚಾರವನ್ನ ಸಂಪೂರ್ಣವಾಗಿ ಜಿಬಿಎ ನೋಡಿಕೊಳ್ಳಲಿದೆ. ಅವುಗಳಿಗೆ ಬೇಕಾದ ಆಹಾರ, ರೇಬಿಸ್ ಇಂಜೆಕ್ಷನ್, ಸಂತಾನಹರಣ ಚಿಕಿತ್ಸೆ ಸೇರಿದಂತೆ ಪ್ರತಿ ಜಿಬಿಎ ನಿರ್ವಹಿಸುತ್ತದೆ.

ಇದನ್ನೂ ಓದಿ: 8 ವಾರದೊಳಗೆ ದೆಹಲಿಯ ಬೀದಿ ನಾಯಿಗಳನ್ನು ಹಿಡಿಯಲು ಸುಪ್ರೀಂ ಕೋರ್ಟ್ ಆದೇಶ; ಏನಿದಕ್ಕೆ ಕಾರಣ?

ಇನ್ನು ನಾಯಿಗಳ ಕಡಿತಕ್ಕೆ ಅನೇಕರು ಆಸ್ಪತ್ರೆ ಪಾಲಾಗುತ್ತಿದ್ದಾರೆ. ಆದರೆ ಇದೀಗ ಜಿಬಿಎ ಕ್ರೂರ ಸ್ವಭಾವದ ಬೀದಿನಾಯಿಗಳಿಗೆ ಶೆಲ್ಟರ್ ನಿರ್ಮಾಣಕ್ಕೆ ಮುಂದಾಗಿರುವುದು ಜನರಲ್ಲಿ ಸ್ವಲ್ಪ ಸಮಾಧಾನ ತಂದಿದೆ.

ಇದನ್ನೂ ಓದಿ: ನಾಯಿಗಳ ಹಾವಳಿ: ವಿಧಾನಸೌಧದೊಳಗೆ ಶ್ವಾನಗಳಿಗೆ ಆಶ್ರಯ, ಇತಿಹಾಸದಲ್ಲೇ ಮೊದಲ

ಒಟ್ಟಿನಲ್ಲಿ ಜಿಬಿಎ ಬೀದಿನಾಯಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಸಾಕಷ್ಟು ಪ್ರಯತ್ನ ಮದ್ಯ ಇದೀಗ ಕ್ರೂರ ಸ್ವಭಾವದ ಬೀದಿನಾಯಿಗಳಿಗೆ ಶೆಲ್ಟರ್ ನಿರ್ಮಾಣಕ್ಕೆ ಮುಂದಾಗಿದೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *