Headlines

ಚಾಮರಾಜಪೇಪೆ ವೈಟ್ ಟಾಪಿಂಗ್ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕ ಎಂದ ತಜ್ಞರು

ಚಾಮರಾಜಪೇಪೆ ವೈಟ್ ಟಾಪಿಂಗ್ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕ ಎಂದ ತಜ್ಞರು


ಬೆಂಗಳೂರು, (ಅಕ್ಟೋಬರ್ 31): ಜಿಬಿಎ ಅಧಿಕಾರಿಗಳು ಚಾಮರಾಜಪೇಟೆ ವಿಧಾನ ಸಭಾ ಕ್ಷೇತ್ರದ ಟಿ.ಆರ್ ಮಿಲ್ ಟು ಮಕ್ಕಳ ಕೂಟದ ವರೆಗೆ, ಹದಿನೈದು ಕೋಟಿ ರೂಪಾಯಿ ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿಗೆ ಮುಂದಾಗಿದ್ದು, ಮೊದಲ ಹಂತದಲ್ಲಿ ಟಿ.ಆರ್ ಮಿಲ್ ಟು ವಿಶಾಲ್ ಮಾರ್ಟ್ ಸಿಗ್ನಲ್ ವರೆಗೆ ಕಾಮಗಾರಿ ನಡೆಯುತ್ತಿದೆ. ಏಪ್ರಿಲ್‌ನಲ್ಲೇ ಕಾಮಗಾರಿ ಆರಂಭ ಮಾಡಿದ್ರು ಇಲ್ಲಿ ಅರ್ಧದಷ್ಟು ಕಾಮಗಾರಿ ಮುಗಿದಿಲ್ಲ. ಇನ್ನೊಂದೆಡೆ ಕಾಮಗಾರಿ ಸ್ಥಳಕ್ಕೆ ಟಿವಿ9 ತಂಡ ಇಂಜಿನಿಯರಿಂಗ್, ತಜ್ಞ ಶ್ರೀಹರಿ ಅವರನ್ನು ಕರೆದೊಯ್ದು ಪರಿಶೀಲನೆ ನಡೆಸಿದ್ದು, ಈ ವೇಳೆ ಒಂದು ಕಾಮಗಾರಿಯಾಗಿದೆ ಎನ್ನುವುದನ್ನು ಇಂಜಿನಿಯರಿಂಗ್ ಶ್ರೀಹರಿ ಅಭಿಪ್ರಾಯಪಟ್ಟಿದ್ದಾರೆ.

9 ತಿಂಗಳ ಕಾಮಗಾರಿ ಮುಗಿಸಲು ಗಡುವು ನೀಡಲಾಗಿದೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆ, ಟಿವಿ9 ತಂಡ ಇಂಜಿನಿಯರಿಂಗ್ ತಜ್ಞ ಶ್ರೀ ಹರಿ ಅವರನ್ನು ಕರೆದುಕೊಂಡು ಬಂದು ಈ ರಸ್ತೆ ಕಾಮಗಾರಿಯನ್ನು ತೋರಿಸಲಾಯಿತು. ಕಾಮಗಾರಿ ಪರಿಶೀಲನೆ ಮಾಡಿದ ಶ್ರೀಹರಿ ಅವರು ಈ ರಸ್ತೆಯಲ್ಲಿ ಪ್ರತಿ ಮರಕ್ಕೂ ಹಾಕಿಕೊಂಡು ಬಾಕ್ಸ್ ಮಾಡಲಾಗಿದೆ. ಈ ವೈಟ್ ಟಾಪಿಂಗ್ ವೆಚ್ಚಕ್ಕಿಂತ ಹೆಚ್ಚು ವೆಚ್ಚವಾಗಲಿದೆ ಮತ್ತು ಇದರ ಸಮಯ, ಹಣ ವ್ಯತ್ಯಯ ಅಷ್ಟೇ. ಮುಂದೆ ಏನಾದರೂ ಸಮಸ್ಯೆ ಆದರೆ ಕೇಬಲ್ಗಳನ್ನು ಹೊರಗೆ ತೆಗೆಯಲು ಮತ್ತೆ ಬಾಕ್ಸ್ ಡೆಮಾಲಿಷನ್ ಮಾಡಬೇಕು. ಈ ರಸ್ತೆಗೆ ವೈಟ್ಪಿಂಗ್ ಅವಶ್ಯಕತೆ ಇರಲಿಲ್ಲ ಮತ್ತು ಇದು ಒಂದು ಕಾಮಗಾರಿಯಾಗಿದೆ. ಯಾರದ್ದೋ ಒತ್ತಡಕ್ಕೆ ಮಣಿದು ಈ ಕೆಲಸ ಮಾಡಲಾಗ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನೂ ರಾಜ್ಯದ ಇಬ್ಬರು ಪ್ರಭಾವಿ ಸಚಿವರು ಮತ್ತು ಸಿಎಂ ಆಪ್ತರಾಗಿದ್ದು ದಿನೇಶ್ ಗುಂಡೂರಾವ್ ಮತ್ತು ಜಮೀರ್ ಅಹಮದ್ ಪ್ರತಿನಿಧಿಸುವ ಚಾಮರಾಜಪೇಟೆ ಮತ್ತು ಗಾಂಧಿನಗರ ವಿಧಾನ ಕ್ಷೇತ್ರದಲ್ಲಿ ಬರುವ ಪೊಲೀಸ್ ರಸ್ತೆಗೆ ಡಾಂಬರ್ ಹಾಕಿ ವರ್ಷಗಳೇ ಕಳೆದು ಹೋಗಿವೆ. ಕಾರಣ ರಸ್ತೆಯ ಅರ್ಧ ಭಾಗ ಗಾಂಧಿನಗರ ವಿಧಾನ ಸಭಾ ಕ್ಷೇತ್ರಕ್ಕೆ,ಉಳಿದ ಅರ್ಧ ಭಾಗ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು, ಇಬ್ಬರಲ್ಲಿ ಯಾರು ರಸ್ತೆಗೆ ಡಾಂಬರ್ ಹಾಕಬೇಕು ಅನ್ನೋ ಗೊಂದಲದಲ್ಲಿ ರಸ್ತೆ ಹಾಕುವುದನ್ನೇ ಮರೆತಂತಿದೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ವಾಹನ ಸವಾರರು, ಈ ರೋಡ್ ನಲ್ಲಿ ಬರುವುದು ಅಂದರೆ ಸಾವಿನ ಜೊತೆ ಹೋರಾಟ ಮಾಡಿದಂತೆ. ಸಾಕಷ್ಟು ವರ್ಷಗಳಿಂದ ರಸ್ತೆ ಹಾಕಲೇ ಇಲ್ಲ. ಇದು ಬೆಂಗಳೂರಿನಲ್ಲಿರುವ ರೋಡ್ ಅಥವಾ ಹಳ್ಳಿಯ ರಸ್ತೆನಾ ಅನ್ನಿಸುತ್ತದೆ. ಈ ರಸ್ತೆಯ ಮೂಲಕವೇ ಕೆಲಸಕ್ಕೆ ಹೋಗಬೇಕು ಬೇರೆ ದಾರಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಂದು ಪ್ರಕಟಿಸಲಾಗಿದೆ – 9:04 pm, ಶುಕ್ರ, 31 ಅಕ್ಟೋಬರ್ 25



Source link

Leave a Reply

Your email address will not be published. Required fields are marked *