Headlines

Nandini Products: ಇನ್ಮುಂದೆ ಇಂದಿರಾ ಕ್ಯಾಂಟೀನ್​ಗಳಲ್ಲೂ ಸಿಗಲಿದೆ ನಂದಿನಿ ಉತ್ಪನ್ನ! ಜಿಬಿಎ ಹೊಸ ಪ್ಲಾನ್

Nandini Products: ಇನ್ಮುಂದೆ ಇಂದಿರಾ ಕ್ಯಾಂಟೀನ್​ಗಳಲ್ಲೂ ಸಿಗಲಿದೆ ನಂದಿನಿ ಉತ್ಪನ್ನ! ಜಿಬಿಎ ಹೊಸ ಪ್ಲಾನ್


ಇಂದಿರಾ ಕ್ಯಾಂಟೀನ್ (ಸಾಂದರ್ಭಿಕ ಚಿತ್ರ)

ಬೆಂಗಳೂರು, ಡಿಸೆಂಬರ್ 12: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವದ ಯೋಜನೆ ಇಂದಿರಾ ಕ್ಯಾಂಟೀನ್ (ಇಂದಿರಾ ಕ್ಯಾಂಟೀನ್). ಇದು ಬಡವರಿಗೆ ಕಡಿಮೆ ದುಡ್ಡಿನಲ್ಲಿ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದೆ. ಆದರೆ ಹಿತಾಸಕ್ತಿ ಕೊರತೆಯಿಂದಾಗಿ ಈ ಕ್ಯಾಂಟೀನ್‌ಗಳ ಸಮರ್ಪಕ ನಿರ್ವಹಣೆ ಅಷ್ಟಕಷ್ಟೇ ಎಂಬಂತಾಗಿದೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಊಟ ನೀಡುವ ಒಂದೊಂದು ಗಂಟೆ ಮಾತ್ರ ಇಂದಿರಾ ಕ್ಯಾಂಟೀನ್‌ಗಳಲ್ಲಿ ಜನರಿಗೆ ಎಂಟ್ರಿ ಇರುತ್ತದೆ. ಹೀಗಾಗಿ ಉಳಿದ ವೇಳೆಯಲ್ಲಿ ಮುಚ್ಚುವ ಬದಲು ಅನ್ಯ ಉದ್ದೇಶಕ್ಕೂ ಬಳಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚಿಂತನೆ ನಡೆಸಿದೆ.

ಈ ವಿಚಾರವಾಗಿ ಮಾತನಾಡಿರುವ ಜಿಬಿಎ ಮುಖ್ಯ ಆಯುಕ್ತ ಎಂ ಮಹೇಶ್ವರ ರಾವ್, ನಗರದ ಬಹತೇಕ ವಾರ್ಡ್‌ಗಳಲ್ಲಿ ಸುಸಜ್ಜಿತ ರೀತಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಿದೆ. ಊಟ, ತಿಂಡಿ ಕೊಡಲು ಇಂತಿಷ್ಟು ಸಮಯ ನಿಗದಿಯಾಗಿದೆ. ಉಳಿದ ವೇಳೆ ಅಮೂಲ್ಯವಾದ ಜಾಗವನ್ನು ಖಾಲಿ ಉಳಿದಿರುವ ಕೆಎಂಎಫ್ ನಂದಿನಿಯ ಹಾಲು, ಮೊಸರು ಸೇರಿದಂತೆ ಇತರ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಜಿಬಿಎ ಪ್ರಸ್ತಾವನೆ ಕೆಎಂಎಫ್ ಬೆಳವಣಿಗೆಗೆ ಪೂರಕವಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ನಂದಿನಿ ಬೂತ್‌ಗಳಲ್ಲಿ ಬೇರೆ ಬ್ರಾಂಡ್ ಪ್ರಾಡಕ್ಟ್ ಗೆ ಬ್ರೇಕ್; ಕೆಎಂಎಫ್ ಹೊಸ ರೂಲ್ಸ್

ಸಾಮಾನ್ಯವಾಗಿ, ನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮುಂದಿನ ದಿನಗಳಲ್ಲಿ ಊಟ ತಿಂಡಿ ಹಾಲು, ಮೊಸರು, ಮಜ್ಜಿಗೆ ಸೇರಿ ನಂದಿನಿಯ ತರಹೇವಾರಿ ಉತ್ಪನ್ನಗಳು ಜನರಿಗೆ ಸಿಗುವ ಸಾಧ್ಯತೆ ಇದೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *