
ಗೀತಾ ಭಾರತಿ ಭಟ್ ಅವರು ಕಳೆದ ವರ್ಷ ಡಿಸೆಂಬರ್ ನಲ್ಲಿ ರಾಜರಾಮ್ ಭಟ್ ಅವರ ಮದುವೆ ಆದರು. ಮದುವೆ ಬಳಿಕವೂ ಅವರು ಸೋಶಿಯಲ್ ಮೀಡಿಯಾದಲ್ಲಿ ಆಯಕ್ಟೀವ್ ಆಗಿದ್ದಾರೆ. ವಿವಿಧ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಗೀತಾ ಭಾರತಿ ಭಟ್ ಅವರು ಪತಿ ಜೊತೆ ಕಳೆದ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. ಈ ಜೋಡಿಯನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ಇವರು ನೂರು ವರ್ಷ ಸುಖವಾಗಿ ಬಾಳಲಿ ಎಂದು ಹರಸಿದ್ದಾರೆ.

ಗೀತಾ ಭಾರತಿ ಭಟ್ ಅವರು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ನಟನೆಗೆ ಎಲ್ಲ ಕಡೆಯಿಂದ ಮೆಚ್ಚುಗೆ ಸಿಕ್ಕಿದೆ. ಗೀತಾ ಭಾರತಿ ಭಟ್ ಅವರು ಈಗ ನಟನೆಯಲ್ಲಿ ಅಷ್ಟು ಆಯಕ್ಟೀವ್ ಆಗಿಲ್ಲ.

ಗೀತಾ ಭಾರತಿ ಭಟ್ ಅವರು ಬಾಡಿಶೇಮಿಂಗ್ ವಿರುದ್ಧ ಸಾಕಷ್ಟು ಬಾರಿ ಸಿಡಿದೆದ್ದಿದ್ದಾರೆ. ತಮಗಾದ ಕಹಿ ಅನುಭವಗಳನ್ನು ಕೂಡ ಅವರು ಹಂಚಿಕೊಂಡಿದ್ದರು. ಈಗ ಅವರನ್ನು ಅವರಾಗಿಯೇ ಒಪ್ಪಿಕೊಳ್ಳುವಂತೆ ಪತಿ ಸಿಕ್ಕಿದ್ದಾರೆ.

ಗೀತಾ ಭಾರತಿ ಭಟ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಅವರನ್ನು ಇಷ್ಟಪಡುವ ಒಂದು ಅಭಿಮಾನಿ ವರ್ಗವೇ ಇದೆ.
ರಂದು ಪ್ರಕಟಿಸಲಾಗಿದೆ – 10:37 am, ಬುಧವಾರ, 18 ಫೆಬ್ರವರಿ 26