ಗೀತಾ ಭಾರತಿ ಭಟ್ (ಗೀತಾ ಭಾರತಿ ಭಟ್) ಅವರು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಬಿಗ್ ಬಾಸ್ ನಲ್ಲೂ ಇದ್ದರು. ಅವರು ಜೀವನದಲ್ಲಿ ಅನೇಕ ಬಾರಿ ಬಾಡಿ ಶೇಮಿಂಗ್ ಅನುಭವಿಸಿದ್ದಾರೆ. ಅವರಿಗೆ ಸಿನಿಮಾದಲ್ಲೇ ಬಾಡಿ ಶೇಮಿಂಗ್ ಮಾಡಿದ್ದಾರೆ. ಈ ಬಗ್ಗೆ ಅವರು ಸಂದರ್ಶನದಲ್ಲಿ ಆರೋಪ ಹೊರಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿ, ನಿರ್ಮಿಸಿದ ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ಅವರಿಗೆ ಈ ರೀತಿಯ ಅವಮಾನ ಆಗಿದೆ.
‘ಲವ್ ಮಾಕ್ಟೇಲ್’ ಸಿನಿಮಾ 2020ರಲ್ಲಿ ರಿಲೀಸ್ ಆಯಿತು. ಕೋವಿಡ್ ಲಾಕ್‌ಡೌನ್ ಆರಂಭಕ್ಕೂ ಕೆಲವೇ ವಾರದ ಮೊದಲು ಈ ಚಿತ್ರ ತೆರೆಗೆ ಬಂತು. ಈ ಸಿನಿಮಾ ಸೋಲುವ ಹಂತದಲ್ಲಿತ್ತು. ಸುದೀಪ್ ಮಾಡಿದ ಒಂದು ಟ್ವೀಟ್ ನಿಂದ ಚಿತ್ರಕ್ಕೆ ಬಲ ಸಿಕ್ಕಿತು. ಆ ಬಳಿಕ ಸಿನಿಮಾ ಸೂಪರ್ ಹಿಟ್ ಆಯಿತು. ಹಾಸ್ಯ ಹಾಗೂ ಭಾವನಾತ್ಮಕ ವಿಚಾರವನ್ನು ಸಿನಿಮಾದಲ್ಲಿ ಹೇಳಲಾಗಿದೆ. ಗೀತಾ ಭಾರತಿ ಭಟ್ ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದರು. ‘ಹೂವಿನ ರೀತಿ ಇಬ್ಬರು, ಹೂಕೋಸಿನ ರೀತಿ ಆಗಿದ್ದಾಳೆ’ ಎಂದು ಗೀತಾಗೆ ಹೇಳಿಲ್ಲ. ಈ ಡೈಲಾಗ್ ಅವರಿಗೆ ಬೇಸರ ಮೂಡಿಸಿದೆ.
ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ‘ನನ್ನನ್ನು ಕೆಟ್ಟ ರೀತಿಯಲ್ಲಿ ತೋರಿಸಲಾಗಿದೆ. ಬಾಡಿಶೇಮಿಂಗ್ ಆಗಿದೆ. ಲವ್ ಮಾಕ್ಟೇಲ್ ಸಿನಿಮಾದಲ್ಲಿ ಈ ಡೈಲಾಗ್ ಇದೆ. ದೊಡ್ಡ ತೆರೆಯಲ್ಲಿ ನೋಡಿದಾಗ ನನಗೆ ತುಂಬಾ ಬೇಸರ. ಸಿನಿಮಾ ಒಳ್ಳೆಯ ಸಕ್ಸಸ್ ಕಾಣಿಸಿತು. ಸಿನಿಮಾ ಯಶಸ್ಸು ಕಂಡಿದ್ದಕ್ಕೆ ಖುಷಿ ಇದೆ. ಆ ಪಾತ್ರ ಏಕೆ ಮಾಡಬೇಕಿತ್ತು ಎಂದು ಅನಿಸುತ್ತದೆ. ನನ್ನ ರೀತಿ ಇರೋ ಅನಕೇರಿಗೆ ನಾನು ಕೆಟ್ಟ ಮೆಸೇಜ್ ಕೊಟ್ನಾ? ಬಾಡಿ ಶೇಮಿಂಗ್ ಮಾಡಲು ನಾನೇ ಅನುಮತಿ ಕೊಟ್ಟೆ ಎಂದನಿಸುತ್ತದೆ’ ಅವರು.
‘ನನಗೆ ಈ ರೀತಿ ಆಗುತ್ತದೆ ಎಂದು ಗೊತ್ತಿಲ್ಲ. ನಾನು ಅಲ್ಲಿದ್ದಾಗ ಡೈಲಾಗ್ ಚೆನ್ನಾಗಿಯೇ ಇತ್ತು. ಆದರೆ, ನಾನು ಅಲ್ಲಿಂದ ಎಗ್ಸಿಟ್ ಆದಮೇಲೆ ಆ ಡೈಲಾಗ್ ಬರುತ್ತದೆ. ತೆರೆಮೇಲೆ ನೋಡಿದಾಗ ತುಂಬಾ ಬೇಸರ ಆಯಿತು. ನನ್ನ ಎದುರು ಸಿನಿಮಾ ನೋಡುತ್ತಿರುವವರು ಬೇಸರ ಮಾಡಿಕೊಂಡರು. ನಾನು ತಪ್ಪುಗಳನ್ನು ಮಾಡಿದ್ದೇನೆ. ಕೆಲವು ಪಾತ್ರಗಳನ್ನು ತಪ್ಪಾಗಿ ಆಯ್ಕೆ ಮಾಡಿಕೊಂಡಿದ್ದೇನೆ. ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಆ ರೀತಿ ಮೆಸೇಜ್ ಕೊಡೋದು ತಪ್ಪು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಬ್ಲೌಸ್ ಬಗ್ಗೆ ಸಿನಿಮಾ ಅಂದ್ರೆ ಅಸಹ್ಯ ಅಲ್ಲ’; ‘ರವಿಕೆ ಪ್ರಸಂಗ’ ಚಿತ್ರದ ಬಗ್ಗೆ ಗೀತಾ ಭಾರತಿ ಭಟ್ ಮಾತು
‘ಆ ಪಾತ್ರದಿಂದ ನಾನು ತುಂಬಾನೇ ಫೇಮಸ್ ಆದೆ. ಆದರೆ, ಆ ರೀತಿಯ ಖ್ಯಾತಿ ಯಾರಿಗೆ ಬೇಕು? ಲವ್ ಮ್ಯಾಕ್ಟೇಲ್ ನಲ್ಲಿ ಚೆನ್ನಾಗಿ ಮಾಡಿದ್ರಿ ಎಂದು ಹೇಳುತ್ತಾರೆ. ಏಕೆ ಆ ಪಾತ್ರ ಮಾಡಿದ್ದೇನೆ ಎಂದು ಅನಿಸುತ್ತದೆ’ ಎನ್ನುತ್ತಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.