
ಈ ಮಾಸದಲ್ಲಿ ನಿಮ್ಮ ರಾಶಿಪತಿ ಬುಧು ಸಂಚಾರ ಮತ್ತು ಹಿಮ್ಮುಖ ಚಲನೆಯ ಗುರುವಿನ ಪ್ರಭಾವದಿಂದಾಗಿ ಜೀವನದ ವಿವಿಧ ಕ್ಷೇತ್ರಗಳಲ್ಲಿ ಮಿಶ್ರಫಲಗಳು ಕಂಡುಬರುತ್ತವೆ. ಏಪ್ರಿಲ್ ಮಾಸದ ಮಿಥುನ ರಾಶಿಯ ಭವಿಷ್ಯದ ಸಮಗ್ರ ನೋಟ ಇಲ್ಲಿದೆ. ಇದರ ಆಧಾರದಲ್ಲಿ ನಿಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು
ಉದ್ಯೋಗ ಮತ್ತು ವೃತ್ತಿಜೀವನ
ಉದ್ಯೋಗ ಕ್ಷೇತ್ರದಲ್ಲಿ ಈ ತಿಂಗಳು ನಿಮಗೆ ಶುಭ ಫಲಗಳು ಹೆಚ್ಚಾಗಿವೆ. ದಶಮ ಸ್ಥಾನದ ಮೇಲೆ ಗ್ರಹಗಳ ಶುಭ ದೃಷ್ಟಿ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಭಾವ ಹೆಚ್ಚಲಿದೆ. ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳ ಸಂಪೂರ್ಣ ಸಹಕಾರ ಸಿಗಲಿದೆ. ವೃತ್ತಿಯಲ್ಲಿ ಬಡ್ತಿ ಅಥವಾ ವರ್ಗಾವಣೆಯನ್ನು ನಿರೀಕ್ಷಿಸುತ್ತಿರುವವರಿಗೆ ಈ ತಿಂಗಳ ಸಕಾರಾತ್ಮಕ ಸುದ್ದಿ ಸಿಗುವ ಸಾಧ್ಯತೆ ಇದೆ.
ವಿದ್ಯಾಭ್ಯಾಸ
ವಿದ್ಯಾಾರ್ಥಿಗಳಿಗೆ ಈ ತಿಂಗಳ ಮಧ್ಯಮ ಫಲದಾಯಕವಾಗಿದೆ. ಬುಧನ ಸ್ಥಾನ ಬದಲಾವಣೆಯಿಂದಾಗಿ ಏಕಾಗ್ರತೆಯಲ್ಲಿ ಸ್ವಲ್ಪ ಏರುಪೇರಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರು ಕಠಿಣ ಪರಿಶ್ರಮ ಪಡಬೇಕಾಯಿತು. ತಾಂತ್ರಿಕ ಮತ್ತು ಸಂಶೋಧನಾ ಕ್ಷೇತ್ರದಿಂದ ಹೆಚ್ಚಿನ ಅನುಕೂಲವಿದೆ. ಓದಿನ ಕಡೆಗೆ ಹೆಚ್ಚಿನ ಗಮನ ಹರಿಸುವುದು ಒಳಿತು.
ಹಣಕಾಸು ಸ್ಥಿತಿ
ಹಣಕಾಸಿನ ವಿಚಾರದಲ್ಲಿ ಮಿಥುನ ರಾಶಿಯವರಿಗೆ ಈ ತಿಂಗಳ ಶುಭ ಫಲ ನೀಡಲಿದೆ. ಆದಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ಹಳೆಯ ಹೂಡಿಕೆಗಳಿಂದ ಲಾಭ ಬರುವ ಸಾಧ್ಯತೆ ಇದೆ. ಐಷಾರಾಮಿ ವಸ್ತುಗಳ ಖರೀದಿಗಾಗಿ ಹಣ ವ್ಯಯವಾಗಬಹುದು, ಆದರೆ ಅದು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರದು.
ವಿವಾಹ ಮತ್ತು ಕೌಟುಂಬಿಕ ಜೀವನ
ವಿವಾಹ ಮತ್ತು ವೈಯಕ್ತಿಕ ಜೀವನದಲ್ಲಿ ಮಧ್ಯಮ ಫಲಗಳು ಇವೆ. ವಿವಾಹ ಸಂಬಂಧಗಳಿಗಾಗಿ ಹುಡುಕಾಟ ನಡೆಸುತ್ತಿರುವವರಿಗೆ ಉತ್ತಮ ಪ್ರಸ್ತಾಪಗಳು ಬರಬಹುದು. ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆಯಿದೆ, ಸಂಗಾತಿಯೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.
ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ವಿದೇಶ ಪ್ರವಾಸ
ವಿದೇಶಕ್ಕೆ ಹೋಗುವ ಹಂಬಲ ಇರುವವರಿಗೆ ಈ ತಿಂಗಳು ಅತ್ಯಂತ ಆಶಾದಾಯಕವಾಗಿದೆ. ವೀಸಾ ಸಂಬಂಧಿತ ಸಮಸ್ಯೆಗಳು ಬಗೆಹರಿಯಲಿವೆ.ಉದ್ಯೋಗದ ನಿಮಿತ್ತ ಅಥವಾ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವವರಿಗೆ ಗ್ರಹಗತಿಗಳು ಪೂರಕವಾಗಿರುತ್ತವೆ. ನಿರೀಕ್ಷಿತವಾಗಿ ದೂರದ ಪ್ರಯಾಣ ಮಾಡುವ ಸಂದರ್ಭಗಳು ಎದುರಾಗಲಿವೆ.
ಸಾಲ ಮತ್ತು ಶತ್ರು ಬಾಧೆ
ಸಾಲದ ವಿಚಾರದಲ್ಲಿ ನೀವು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಅನಗತ್ಯ ಸಾಲ ಮಾಡುವುದನ್ನು ಈ ತಿಂಗಳು ತಪ್ಪಿಸಿ. ಹಳೆಯ ಸಾಲವನ್ನು ತೀರಿಸಲು ನಿಮಗೆ ಅವಕಾಶಗಳು ಸಿಗುತ್ತವೆ, ಆದರೆ ಹೊಸದಾಗಿ ಯಾರಿಗಾದರೂ ಹಣ ನೀಡುವಾಗ ಜಾಗರೂಕರಾಗಿರಿ.
ಗುಪ್ತ ಶತ್ರುಗಳ ಬಗ್ಗೆ ನಿಗಾ ಇರಲಿ, ನಿಮ್ಮ ಯೋಜನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಡಿ.
ಈ ತಿಂಗಳು ನಿಮ್ಮ ಸಂವಹನ ಕಲೆ ನಿಮಗೆ ಶ್ರೀರಕ್ಷೆಯಾಗಲಿದೆ. ಮಾತು ಮತ್ತು ತಾಳ್ಮೆಯಿಂದ ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸಬಹುದು. ಬುಧವಾರ ಪ್ರತಿ ವಿಷ್ಣು ಸಹಸ್ರನಾಮ ಪಠಿಸುವುದು ಅಥವಾ ಹಸಿರು ಬಣ್ಣದ ಬಟ್ಟೆಯನ್ನು ಧರಿಸುವುದು ನಿಮ್ಮ ರಾಶಿಗೆ ಹೆಚ್ಚಿನ ಶುಭಫಲಗಳನ್ನು ನೀಡಲಿದೆ.
– ಲೋಹಿತ ಹೆಬ್ಬಾರ್