ಮಿಥುನ ರಾಶಿಯವರಿಗೆ ಹೊಸ ವರ್ಷದ ಎರಡನೇ ತಿಂಗಳು ಹೇಗಿದೆ?

ಮಿಥುನ ರಾಶಿಯವರಿಗೆ ಹೊಸ ವರ್ಷದ ಎರಡನೇ ತಿಂಗಳು ಹೇಗಿದೆ?


ಈ ತಿಂಗಳಿನಲ್ಲಿ ಬುಧನ ಅಧಿಪತ್ಯದ ಮಿಥುನ ರಾಶಿಯವರಿಗೆ ಗ್ರಹಗತಿಗಳ ಬದಲಾವಣೆಯಿಂದಾಗಿ ಶುಭ ಮತ್ತು ಅಶುಭ ಫಲಗಳ ಮಿಶ್ರಣವಿರಲಿದೆ. ಪ್ರಮುಖವಾಗಿ ರಾಶಿಯಲ್ಲಿಯೇ ಇರುವ ಗುರು, ದಶಮದ ಶನಿ ಮತ್ತು ನವಮದ ಬುಧ ಗ್ರಹಗಳ ಸಂಚಾರವು ನಿಮ್ಮ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ. ಇದರ ವಿಸ್ತೃತ ಅಂಶಗಳನ್ನು ನೋಡಬಹುದು.

ಶುಭ ಫಲ ನೀಡುವ ಗ್ರಹಗಳ ದಶೆ

ಗುರು:

ಗುರುವು ನಿಮ್ಮ ರಾಶಿಯ ಪ್ರಥಮ ಭಾವದಲ್ಲಿ ಸಂಚರಿಸುತ್ತಿರುವುದರಿಂದ ಗುರು ಬಲ’ ಹೆಚ್ಚಿದೆ. ಇದು ನಿಮಗೆ ಆತ್ಮವಿಶ್ವಾಸ, ಉತ್ತಮ ಆರೋಗ್ಯ ಮತ್ತು ಗೌರವವನ್ನು ನೀಡುತ್ತದೆ. ಫೆಬ್ರವರಿಯಿಂದ ಜೂನ್ ಸಮಯವು ನಿಮಗೆ ಅತ್ಯಂತ ಅನುಕೂಲಕರವಾಗಿರುತ್ತದೆ.

ಬುಧ:

ಫೆಬ್ರವರಿ ಆರಂಭದಲ್ಲಿ ಬುಧನು ನಿಮ್ಮ ಒಂಭತ್ತನೆಯ ಮನೆ ಭಾಗ್ಯ ಸ್ಥಾನವಾದ ಕುಂಭ ರಾಶಿಗೆ ಪ್ರವೇಶಿಸುತ್ತಾನೆ. ಇದು ನಿಮ್ಮ ಅದೃಷ್ಟವನ್ನು ಹೊಂದಿದೆ. ಹಿರಿಯರ ಬೆಂಬಲ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮತ್ತು ವಿದೇಶ ಪ್ರಯಾಣದ ಯೋಗವನ್ನು ನೀಡಲಾಗುತ್ತದೆ.

ಶುಕ್ರ:

ಶುಕ್ರನ ಶುಭ ದೃಷ್ಟಿಯಿಂದ ಪ್ರೇಮ ಜೀವನ ಮತ್ತು ಕೌಟುಂಬಿಕ ಸಂಬಂಧಗಳಲ್ಲಿ ಸಾಮರಸ್ಯ ಇರಲಿದೆ. ಹೊಸ ವಸ್ತುಗಳ ಖರೀದಿ ಅಥವಾ ಐಷಾರಾಮಿ ಜೀವನದ ಒಲವು ಹೆಚ್ಚಾಗಲಿದೆ.

ಅಶುಭ ಅಥವಾ ಮಿಶ್ರ ಫಲ ನೀಡುವ ಗ್ರಹಗಳ ದಶೆ

ಶನಿ:

ಶನಿಯು ನಿಮ್ಮ ಹತ್ತನೇ ಮನೆ ಕರ್ಮ ಸ್ಥಾನವಾದ ಮೀನ ರಾಶಿಯಲ್ಲಿದ್ದಾನೆ. ಇದು ವೃತ್ತಿಜೀವನದಲ್ಲಿ ಅತಿಯಾದ ಕೆಲಸದ ಒತ್ತಡ ಮತ್ತು ಜವಾಬ್ದಾರಿಗಳನ್ನು ತರುತ್ತದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲು ವಿಳಂಬವಾಗುತ್ತದೆ. ಶಾರ್ಟ್ಕಟ್ ಅಥವಾ ಸೋಮಾರಿತನ ಬಿಟ್ಟು ಕೆಲಸ ಮಾಡುವುದು ಅನಿವಾರ್ಯ.

ರಾಹು ಮತ್ತು ಸೂರ್ಯ:

ಕುಂಭ ರಾಶಿಯಲ್ಲಿನ ಗ್ರಹಗಳ ಸಮಾಗಮದಿಂದಾಗಿ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬಹುದು. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಏರಿಳಿತಗಳಿರಬಹುದು.

ಈ ತಿಂಗಳಲ್ಲಿ ಪ್ರಭಾವ ಬೀರುವ ಪ್ರಮುಖ ಅಂಶಗಳಾಗಿದ್ದು, ಜಾಗರೂಕರಾಗಿರಿ. ಶನಿಯ ಪ್ರಭಾವದಿಂದ ಉದ್ಯೋಗ ಸವಾಲು ಇರಲಿದೆ. ಯಶಸ್ಸಿಗೆ ಶಿಸ್ತುಬದ್ಧ ಪ್ರಯತ್ನ ಅಗತ್ಯ.ಹಣಕಾಸಿನಲ್ಲಿ ಸುಧಾರಣೆ ಇದ್ದರೂ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿಕೊಳ್ಳುವುದು. ಅತ್ಯುತ್ತಮ ಸರಸ್ವತಿ ಯೋಗವು ಸಂಭವಿಸಲಿದೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಬರಲಿದೆ. ಆರೋಗ್ಯವು ಸಾಧಾರಣವಾಗಿರುತ್ತದೆ ಮಾನಸಿಕ ನೆಮ್ಮದಿಯನ್ನು ಪಡೆಯುವುದು ಅನಿವಾರ್ಯ.

– ಲೋಹಿತ ಹೆಬ್ಬಾರ್



Source link

Leave a Reply

Your email address will not be published. Required fields are marked *