ಆಫೀಸ್‌ಗೆ ಬಂದು ಮೀಟಿಂಗ್ ಹಾಜರಾಗಲು ವಾರ್ನಿಂಗ್, ಮನೆಯಲ್ಲಿ ಕುಳಿತು ಆನ್‌ಲೈನ್ ಮೀಟಿಂಗ್ ಆಗಲ್ಲ ಎಂದು ಬಾಸ್ ಹೇಳಿದ್ದಾರೆ ಇದಕ್ಕೆ ಜೆನ್‌ಝಿ ಉದ್ಯೋಗಿ ನೀಡಿದ ಉತ್ತರಕ್ಕೆ ಬಾಸ್ ಕಂಗಾಲಾಗಿದ್ದಾರೆ.

ಬಹುತೇಕ ಕಂಪನಿಗಳು ವರ್ಕ್ ಫ್ರಮ್ ಹೋಮ್ ಆಯ್ಕೆ ಅಂತ್ಯಗೊಳಿಸಿದೆ. ಕೋವಿಡ್ ಸಮಯದಲ್ಲಿ ವ್ಯಾಪಕವಾಗಿದ್ದ ಈ ಅವಕಾಶ ಇದೀಗ ಬಹುತೇಕ ಅಂತ್ಯಗೊಂಡಿದೆ. ಕೆಲ ಐಟಿ ಕಂಪನಿಗಳಲ್ಲಿ ಹೈಬ್ರಿಡ್ ವರ್ಕ್ ಮಾಡೆಲ್ ಜಾರಿಯಲ್ಲಿದೆ. ಹಲವು ಬಾರಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಚೇರಿಗೆ ಕರೆಸಲು, ಆಫೀಸ್‌ನಿಂದ ಕೆಲಸ ಮಾಡುವಂತೆ ಮಾಡಲು ಭಾರಿ ಕಸರತ್ತು ನಡೆಸುತ್ತಿದೆ. ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡುತ್ತದೆ. ಹೀಗೆ ಕಂಪನಿ ಬಾಸ್, ಎಲ್ಲರೂ ಆಫೀಸ್‌ಗೆ ಬಂದು ಮೀಟಿಂಗ್ ಅಟೆಂಡ್ ಆಗಲು ಸೂಚಿಸಿದ್ದಾರೆ. ಇದಕ್ಕೆ ಈಗನ ಜೆನ್‌ಝಿ ನೀಡಿದ ಉತ್ತರ ಇದೀಗ ವೈರಲ್ ಆಗುತ್ತಿದೆ.

ಉದ್ಯೋಗಿಗಳು ಮನೆಯಿಂದಲೇ ಮೀಟಿಂಗ್ ಹಾಜರಾಗುತ್ತಿದ್ದಾರೆ, ಕೆಲಸಕ್ಕೆ ಬರುತ್ತಿಲ್ಲ ಎಂದು ಬಾಸ್ ರೊಚ್ಚಿಗೆದ್ದಿದ್ದಾರೆ. ಹೀಗಾಗಿ ಕಚೇರಿ ಮೀಟಿಂಗ್ ಕುರಿತು ಗ್ರೂಪ್‌ನಲ್ಲಿ ಮೆಸೇಜ್ ಮಾಡಿದ್ದು ಮಾತ್ರವಲ್ಲ, ಉದ್ಯೋಗಳಿಗೆ ವೈಯುಕ್ತಿಕವಾಗಿ ಮೆಸೇಜ್ ಮಾಡಿದ್ದಾರೆ. ಬೆಳಗ್ಗೆ 7 ಗಂಟೆಗೆ ನಡೆಯುವ ವರ್ಚುವಲ್ (ಆನ್‌ಲೈನ್) ಮೀಟಿಂಗ್‌ಗೆ ಸರಿಯಾಗಿ 6.30ಕ್ಕೆ ಎಲ್ಲಾ ಉದ್ಯೋಗಿಗಳು ಕಚೇರಿಯಲ್ಲಿ ಹಾಜರಿರಬೇಕು. ಬರದಿದ್ದರೆ ಶಿಸ್ತು ಉಲ್ಲಂಘನೆ ಎಂದು ಪರಿಗಣಿಸಿ ಅಮಾನತು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ ಮೆಸೇಜ್ ಮಾಡಿದ್ದರು.

ಬಾಸ್ ಬೆಳಗ್ಗೆ 7 ಗಂಟಗೆ ಆನ್‌ಲೈನ್ ಮೂಲಕ ಮೀಟಿಂಗ್ ಮಾಡುತ್ತೇನೆ. ಎಲ್ಲಾ ಉದ್ಯೋಗಿಳು ಕಚೇರಿಯಲ್ಲಿ ಹಾಜರಿರಬೇಕು ಅನ್ನೋದು ಬಾಸ್ ನೀಡಿದ ಮೆಸೇಜ್ ಸಾರಾಂಶ. ಇದಕ್ಕೆ ಎಚ್ಚರಿಕೆ,ಅಮಾನತು, ಶಿಕ್ಷೆ ಸೇರಿದಂತೆ ಖಡಕ್ ವಾರ್ನಿಂಗ್ ಕೂಡ ನೀಡಲಾಗಿತ್ತು.

ಬಾಸ್ ನೀಡಿದ ಖಡಕ್ ವಾರ್ನಿಂಗ್‌ಗೆ ಜೆನ್‌ಝಿ ಉದ್ಯೋಗಿ ರಿಪ್ಲೈ ಇದೀಗ ಭಾರಿ ವೈರಲ್ ಆಗಿದೆ. ನಿಮ್ಮ ಸಂದೇಶ ಗಮನಿಸಿದ್ದೇನೆ. ಆದರೆ ಈ ಮೂಲಕ ಸ್ಪಷ್ಟವಾಗಿ ಹೇಳುವುದೇನೆಂದರೆ, ಆನ್‌ಲೈನ್ ಮೀಟಿಂಗ್‌ಗಾಗಿ ನಾನು ಕಚೇರಿಗೆ ಬರುವುದಿಲ್ಲ. ಕಾರಣ ಮೊದಲೇ ಮೀಟಿಂಗ್ ಮಾರಿ ವರ್ಚುವಲ್(ಆನ್‌ಲೈನ್) ಆಗಿದೆ. ಹೀಗಾಗಿ ನಾನು ಮನೆಯಂದಲೇ ಲಾಗಿನ್ ಆಗುತ್ತೇನೆ. ನಾನು ಮೀಟಿಂಗ್‌ನಲ್ಲಿ ಹಾಜರಾಗುವುದಕ್ಕಿಂತ ನಾನು ಎಲ್ಲಿದ್ದೇನೆ ಅನ್ನೋ ಸ್ಥಳದ ಬಗ್ಗೆ ಬೆದರಿಕೆ ಹಾಕುವುದು ನೋಡಿದರೆ ನೀತಿಗಿಂತ ಹಚ್ಚು ಅದಿಕಾರ ದುರುಪಯೋಗ ಮಾಡಿದಂತೆ ಕಾಣುತ್ತಿದೆ. ಸದ್ಯ ನಾನು ಆನ್‌ಲೈನ್‌ನಲ್ಲಿದ್ದೇನೆ ಎಂದು ಜೆನ್‌ಝಿ ಉದ್ಯೋಗಿ ಖಡಕ್ ರಿಪ್ಲೈ ಮಾಡಿದ್ದಾರೆ.

ಜೆನ್‌ಝಿ ನೀಡಿದ ಉತ್ತರ ಇದೀಗ ವೈರಲ್ ಆಗಿದೆ. ಹಲವರು ಪ್ರತಿಕ್ರಿಯಿಸಿದ್ದಾರೆ. ಉದ್ಯೋಗಿಗಳನ್ನು ಕಚೇರಿಗೆ ಹಾಜರಾಗಲು ಸೂಚಿಸಿ, ಬಾಸ್ ಮನೆಯಿಂದಲೇ ಆನ್‌ಲೈನ್ ಮೂಲಕ ಹಾಜರಾಗುವುದು ಎಷ್ಟು ಸರಿ. ಎಲ್ಲರೂ ಫಿಸಿಕಲ್ ಹಾಜರಾತಿ ಅಗತ್ಯ ಎಂದರೆ ಬಾಸ್ ಕೂಡ ಹಾಜರಾಗಬೇಕು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಮತ್ತೆ ಕೆಲವರು ಇದು ಯಾವ ರೀತಿ ಮೀಟಿಂಗ್ ಎಂದು ಪ್ರಶ್ನಿಸಿದ್ದಾರೆ. ಉದ್ಯೋಗಿಗಳನ್ನು ಬೆಳಗ್ಗೆ 6.30ಕ್ಕೆ ಕಚೇರಿಯಲ್ಲಿ ಹಾಜರಿರಬೇಕು ಅನ್ನೋದು ಯಾವ ರೀತಿಯ ಮೀಟಿಂಗ್ ಇದು ಎಂದಿದ್ದಾರೆ. ಆನ್‌ಲೈನ್ ಮೀಟಿಂಗ್, ಆಫ್‌ಲೈನ್ ಹಾಜರಾತಿ ಒಂದು ಅರ್ಥವಾಗದ ಮೀಟಿಂಗ್ ಎಂದು ಪ್ರತಿಕ್ರಿಯಿಸಿದ್ದಾರೆ.

Source link
ಆಫೀಸ್‌ಗೆ ಬಂದು ಮೀಟಿಂಗ್ ಹಾಜರಾಗಲು ವಾರ್ನಿಂಗ್, ಜೆನ್‌ಝಿ ಉದ್ಯೋಗಿ ಉತ್ತರಕ್ಕೆ ಬಾಸ್ ಕಂಗಾಲು