ನಾಗಾರ್ಜುನಗೆ ಮತ್ತೆ ಶಾಕ್ ಕೊಟ್ಟ ಸರ್ಕಾರ, ಸ್ಟುಡಿಯೋ ವಿರುದ್ಧ ತೆರಿಗೆ ವಂಚನೆ ಆರೋಪ

ನಾಗಾರ್ಜುನಗೆ ಮತ್ತೆ ಶಾಕ್ ಕೊಟ್ಟ ಸರ್ಕಾರ, ಸ್ಟುಡಿಯೋ ವಿರುದ್ಧ ತೆರಿಗೆ ವಂಚನೆ ಆರೋಪ


ನಟ ನಾಗಾರ್ಜುನಗೆ (ನಾಗಾರ್ಜುನ) ತೆಲಂಗಾಣ ಸರ್ಕಾರ ಶಾಕ್ ನೀಡುತ್ತಲೇ ಬರುತ್ತಿದೆ. ಈ ಹಿಂದೆ ನಾಗಾರ್ಜುನಗೆ ಸೇರಿದ ದೊಡ್ಡ ಕಲ್ಯಾಣ ಮಂಟಪವನ್ನು ನೋಟಿಸ್ ನೀಡಿ ನೆಲಸಮಗೊಳಿಸಿತ್ತು. ಸರ್ಕಾರದ ಕ್ರಮವನ್ನು ಪ್ರಶ್ನಿಸಿ ನಾಗಾರ್ಜುನ ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಕರಣ ಇನ್ನೂ ಚಾಲ್ತಿಯಲ್ಲಿದೆ. ಇದು ಹೀಗಿರುವಾಗ ಮತ್ತೊಂದು ಆಘಾತ ಎದುರಾಗಿದೆ. ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಇದೀಗ ನಾಗಾರ್ಜುನ ಒಡೆತನದ ಅನ್ನಪೂರ್ಣ ಸ್ಟುಡಿಯೋಗೆ ನೊಟೀಸ್ ನೀಡಿದೆ. ಅನ್ನಪೂರ್ಣ ಸ್ಟುಡಿಯೋ ಮಾತ್ರವೇ ಜನಪ್ರಿಯ ರಾಮನಾಯ್ಡು ಸ್ಟುಡಿಯೋಗೂ ನೋಟಿಸ್ ಜಾರಿಯಲ್ಲಿದೆ.

ಅನ್ನಪೂರ್ಣ ಸ್ಟುಡಿಯೋಸ್ ಮತ್ತು ರಾಮನಾಯ್ಡು ಸ್ಟುಡಿಯೋಗಳು ತೆರಿಗೆ ವಂಚನೆ ಮಾಡಿರುವ ಆರೋಪವನ್ನು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಮಾಡಿದ್ದು, ಈ ಕುರಿತು ಎರಡೂ ಫಿಲಂಸಿಟಿಗಳಿಗೆ ನೋಟಿಸ್ ಜಾರಿಯಾಗಿದೆ. ತಪ್ಪು ಲೆಕ್ಕ ತೋರಿಸಿ ತೆರಿಗೆ ವಂಚನೆ ಮಾಡಿರುವ ಆರೋಪವನ್ನು ಮುನ್ಸಿಪಲ್ ಕಾರ್ಪೊರೇಷನ್ ಮಾಡಿದ್ದು, ನೋಟಿಸ್‌ಗೆ ಉತ್ತರಿಸುವಂತೆ ಸೂಚನೆ ನೀಡಿದೆ.

ನಾಗಾರ್ಜುನ ಒಡೆತನದ ಅನ್ನಪೂರ್ಣ ಸ್ಟುಡಿಯೋ 1.92 ಚದರ ಅಡಿ ವಿಸ್ತೀರ್ಣ ಹೊಂದಿದೆ ಆದರೆ ಕೇವಲ 8100 ಚದರ ಅಡಿಯ ವಿಸ್ತೀರ್ಣವಷ್ಟೆ ಲೆಕ್ಕದಲ್ಲಿ ತೋರಿಸಿ ಅಷ್ಟು ವಿಸ್ತೀರ್ಣಕ್ಕೆ ಮಾತ್ರವೇ ತೆರಿಗೆ ಪಾವತಿ ಮಾಡಲಾಗುತ್ತಿದೆ. ಇನ್ನು ರಾಮನಾಯ್ಡು ಸ್ಟುಡಿಯೋ 11.52 ಲಕ್ಷ ಚದರ ಅಡಿಗಳಷ್ಟು ಬೃಹತ್ ವಿಸ್ತೀರ್ಣವಿದೆ ಆದರೆ 49 ಸಾವಿರ ಚದರ ಅಡಿಗಳಿಗೆ ಮಾತ್ರವೇ ತೆರಿಗೆ ಪಾವತಿಯಾಗಿದೆ ಎಂದು ಮುನ್ಸಿಪಲ್ ಕಾರ್ಪೊರೇಷನ್ ನೋಟಿಸ್‌ನಲ್ಲಿ ಹೇಳಿದೆ.

ಇದನ್ನೂ ಓದಿ:ಪೊಲೀಸ್ ಆಯುಕ್ತರ ಭೇಟಿಗೆ ಧನ್ಯವಾದ ಹೇಳಿದ ಚಿರಂಜೀವಿ-ನಾಗಾರ್ಜುನ: ಕಾರಣವೇನು?

ರಾಮನಾಯ್ಡು ಸ್ಟುಡಿಯೋ 2.73 ಲಕ್ಷ ರೂಪಾಯಿ ತೆರಿಗೆ ಪಾವತಿ ಆದರೆ ಈಗ ಕೇವಲ 7600 ರೂಪಾಯಿಗಳ ತೆರಿಗೆಯನ್ನಷ್ಟೆ ಪಾವತಿಯಾಗಿದೆ. ಇದೇ ರೀತಿ ಅನ್ನಪೂರ್ಣ ಸ್ಟುಡಿಯೋ ಸಹ ಕಡಿಮೆ ಮೊತ್ತದ ತೆರಿಗೆ ಪಾವತಿ ಮಾಡುತ್ತಿದೆ ಎಂದು ನೋಟಿಸ್ ನಲ್ಲಿ ಆರೋಪಿಸಲಾಗಿದೆ. ಇದೀಗ ಎರಡೂ ಸ್ಟುಡಿಯೋಗಳಿಗೆ ನೋಟೀಸ್ ನೀಡಿರುವ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್, ಪೂರ್ಣ ವಿಸ್ತೀರ್ಣಕ್ಕೆ ತೆರಿಗೆ ಪಾವತಿಸುವಂತೆ. ಜೊತೆಗೆ ಹಿಂದಿನ ವರ್ಷಗಳ ತೆರಿಗೆಯನ್ನು ಸೇರಿಸಿ ದಂಡದ ಸಮೇತ ಪಾವತಿ ಮಾಡುವಂತೆ ಸೂಚನೆ ನೀಡಲಾಗಿದೆ.

ಅನ್ನಪೂರ್ಣ ಸ್ಟುಡಿಯೋಸ್ ನಾಗಾರ್ಜುನ ಅವರ ಒಡೆತನದಲ್ಲಿದ್ದರೆ ರಾಮನಾಯ್ಡು ಸ್ಡುಡಿಯೋ ದಗ್ಗುಬಾಟಿ ಕುಟುಂಬದ ಸುರೇಶ್ ಅವರ ಓಡಾಟದಲ್ಲಿತ್ತು. ಇವರು ಖ್ಯಾತ ನಟ ರಾಣಾ ದಗ್ಗುಬಾಟಿ ಅವರ ತಂದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *