Headlines

ಬ್ರಾಹ್ಮಣ ಸಮುದಾಯಕ್ಕೆ ಅವಮಾನ? ಮನೋಜ್ ಸಿನಿಮಾ ವಿರುದ್ಧ ಆಕ್ರೋಶ

ಬ್ರಾಹ್ಮಣ ಸಮುದಾಯಕ್ಕೆ ಅವಮಾನ? ಮನೋಜ್ ಸಿನಿಮಾ ವಿರುದ್ಧ ಆಕ್ರೋಶ


ಸಿನಿಮಾಗಳು (ಸಿನಿಮಾ) ವಿವಾದಕ್ಕೆ ಸಿಲುಕುವುದು ತೀರ ಸಾಮಾನ್ಯ ಆಗಿಬಿಟ್ಟಿದೆ. ಸಿನಿಮಾಗಳಲ್ಲಿ ಜಾತಿ, ಧರ್ಮ, ಸಮುದಾಯ, ವೃತ್ತಿಯ ಅಪಮಾನ ಎಂಬ ದೂರು ಇತ್ತೀಚೆಗೆ ಕೇಳಿ ಬರುತ್ತಲೇ ಇರುತ್ತವೆ. ಇದೀಗ ಇದೇ ಸಾಲಿಗೆ ಖ್ಯಾತ ನಟ ಮನೋಜ್ ಬಾಜಪೇಯಿ ನಟನೆಯ ಸಿನಿಮಾ ಕೂಡಿದೆ. ಮನೋಜ್ ನಟನೆಯ ಹೊಸ ಸಿನಿಮಾ ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಹೆಸರಿನ ಬಗ್ಗೆ ಇದೀಗ ಆಕ್ರೋಶ ವ್ಯಕ್ತವಾಗಿದೆ. ಸಿನಿಮಾದ ಹೆಸರು ಬದಲಾವಣೆ ಮಾಡಿದ್ದು ಸಿನಿಮಾ ಬಹಿಷ್ಕರಿಸುವುದಾಗಿದೆ. ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ

ಮನೋಜ್ ಬಾಜಪೇಯಿ ನಾಯಕನಾಗಿ ನಟಿಸಿರುವ ‘ಗುಸ್‌ಕೋರ್ ಪಂಡತ್’ ಚಿತ್ರದ ಟ್ರೈಲರ್ ನಿನ್ನೆ (ಫೆಬ್ರವರಿ 03) ಬಿಡುಗಡೆಯಾಗಿದೆ. ಟ್ರೈಲರ್‌ನಲ್ಲಿ ತೋರಿಸುವಂತೆ ಮನೋಜ್ ಬಾಜಪೇಯಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಮನೋಜ್ ಅವರ ಭ್ರಷ್ಟಾಚಾರ, ಸಿಟ್ಟು, ಕ್ರೂರತನದಿಂದ ತುಂಬಿರುವ ಪೊಲೀಸ್ ಪಾತ್ರದಲ್ಲಿ ನಟಿಸಿರುವುದು ಟ್ರೈಲರ್ ನಿಂದ ತಿಳಿದು ಬರುತ್ತಿದೆ. ಆದರೆ ಪಾತ್ರದ ಬಗ್ಗೆ ಜೊತೆಗೆ, ಸಿನಿಮಾಕ್ಕೆ ಇಟ್ಟಿರುವ ಹೆಸರು ಇದೀಗ ವಿವಾದಕ್ಕೆ ಕಾರಣವಾಗಿದೆ.

ಸಿನಿಮಾಕ್ಕೆ ‘ಗುಸ್ಕೋರ್ ಪಂಡತ್’ ಎಂದು ಹೆಸರಿಡಲಾಗಿದೆ. ಇದು ಪಂಡಿತರನ್ನು ದೂಷಿಸುತ್ತಿರುವಂತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಗುಸ್ಕೋರ್ ಪಂಡತ್’ ಎಂದರೆ ನುಸುಳುಕೋರ ಪಂಡಿತ್ ಎಂದರ್ಥ. ಅಸಲಿಗೆ ಸಿನಿಮಾದ ಹೆಸರು ‘ಗುಸ್ಕೋರ್ ಪಂಡಿತ್’ ಎಂದೆನ್ನಿಸುತ್ತಿದೆ ಆದರೆ ಸೆನ್ಸಾರ್ ನವರಿಗಾಗಿ ‘ಪಂಡಿತ್’ ಅನ್ನು ಬದಲಾಯಿಸಿ ‘ಪಂಡಿತ್’ ಮಾಡಲಾಗಿದೆ.

ಇದನ್ನೂ ಓದಿ:’ಜನ ನಾಯಕನ್’ ಸಿನಿಮಾದ 20 ನಿಮಿಷದ ದೃಶ್ಯಕ್ಕೆ ಕತ್ತರಿ? ವಿಜಯ್ ಗೆ ನಿರಾಸೆ

ಹಲವಾರು ಮಂದಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಬ್ರಾಹ್ಮಣರಿಗೆ ಅವಮಾನ ಮಾಡುವ ಉದ್ದೇಶದಿಂದ ಸಿನಿಮಾಕ್ಕೆ ಈ ರೀತಿಯ ಹೆಸರನ್ನು ಇಡಲಾಗಿದೆ. ಸಿನಿಮಾದ ಹೆಸರು ಬದಲಾವಣೆ ಮಾಡಿದ್ದು ಸಿನಿಮಾ ಭೀಷ್ಕರಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಗುಸ್ಕೋರ್ ಮುಸ್ಲಿಂ’, ‘ಗುಸ್ಕೋರ್ ದಲಿತ್’ ಎಂದು ಹೆಸರಿಡಿ ಎಂದು ಸಹ ಕೆಲವರು ಸವಾಲು ಹಾಕಿದ್ದಾರೆ.

ಸಿನಿಮಾದಲ್ಲಿ ಮನೋಜ್ ಬಾಜಪೇಯಿ ಪಾತ್ರದ ಹೆಸರು ಅಜಯ್ ದೀಕ್ಷಿತ್, ಆದರೆ ಅವರ ಪಾತ್ರದ ಹೆಸರು ಪಂಡಿತ್ ಎಂದಾಗಿದೆ. ಸಿನಿಮಾದಲ್ಲಿ ಮನೋಜ್ ಜೊತೆಗೆ ನುಸ್ರತ್ ಬರೂಚಾ ಸಹ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ರಿತೇಶ್ ಶಾ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ನೀರಜ್ ಪಾಂಡೆ. ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ನೇರವಾಗಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *