Headlines

‘ಸದಾಶಿವ ನಗರದಲ್ಲಿ ಮನೆ ಇದೆ, ಇದು 40 ಸಾವಿರ ರೂಪಾಯಿ ಬನಿಯನ್’; ಆಸ್ತಿ ವಿವರ ಹೇಳಿದ ಗಿಲ್ಲಿ ನಟ

‘ಸದಾಶಿವ ನಗರದಲ್ಲಿ ಮನೆ ಇದೆ, ಇದು 40 ಸಾವಿರ ರೂಪಾಯಿ ಬನಿಯನ್’; ಆಸ್ತಿ ವಿವರ ಹೇಳಿದ ಗಿಲ್ಲಿ ನಟ


ಬಿಗ್ ಬಾಸ್ (ಬಿಗ್ ಬಾಸ್) ಮನೆಯಲ್ಲಿ ಸಿಂಪತಿ ಕಾರ್ಡ್ ಚೆನ್ನಾಗಿ ಕೆಲಸ ಮಾಡುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ಈ ಉದ್ದೇಶ ಪೂರ್ವಕವಾಗಿ ಮಾಡಿದರೆ, ಇನ್ನೂ ಕೆಲವರು ಇರೋದೇ ಹೀಗೆ ಎಂದು ಸಿಂಪಲ್ ಆಗಿರುತ್ತಾರೆ. ಕಳೆದ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದ ಹನುಮಂತ ಲುಂಗಿ, ಶರ್ಟ್ ನಲ್ಲೇ ಸೀಸನ್ ಕಳೆದರು. ಅವರು ವಿನ್ ಕೂಡ ಆದರು. ಈ ಬಾರಿ ಗಿಲ್ಲಿ ನಟ ಅವರು, ಬನಿಯನ್ ನಲ್ಲೇ ಇರುತ್ತಿದ್ದಾರೆ. ಇದಕ್ಕೆ ರಿಷಾ ಬೇರೆ ಅರ್ಥ ಕೊಟ್ಟರು. ಅವರಿಗೆ ಗಿಲ್ಲಿ ಕೌಂಟರ್ ಕೊಟ್ಟಿದ್ದಾರೆ.

ಗಿಲ್ಲಿ ಹಾಗೂ ರಿಷಾ ಮಧ್ಯೆ ಸಾಕಷ್ಟು ಕಿತ್ತಾಟ ನಡೆದವು. ಗಿಲ್ಲಿ ಮೇಲೆ ಕೈ ಕೂಡ ಮಾಡಿದೆ ರಿಷಾ. ಈ ವಿಚಾರದಲ್ಲಿ ಯಾವ ರೀತಿಯಲ್ಲಿ ಅವರಿಗೆ ಶಿಕ್ಷೆ ಸಿಗಲಿದೆ ಎಂಬುದನ್ನು ನೋಡಬೇಕಾಗಿದೆ. ಹೀಗಿರುವಾಗಲೇ ‘ನೀನು ಸಿಂಪತಿಗಿಟ್ಟಿಸಿಕೊಳ್ಳಲು ಬನಿಯನ್ ಹಾಕಿ ಡೋಂಟ್ತೀಯಾ’ ಎಂದು ರಿಷಾ ಹೇಳಿದ್ದಾರೆ. ಇದಕ್ಕೆ ಗಿಲ್ಲಿ ಉತ್ತರಿಸಿದ್ದಾರೆ.

‘ನಾನು ಶ್ರೀಮಂತ. ಶ್ರೀಮಂತರೂ ಬನಿಯನ್ ಹಾಕ್ತಾರೆ. ನಮ್ಮ ಅಪ್ಪಂದು ಐಟಿ ಕಂಪನಿ ಇದೆ. 500 ಶಿಪ್ ಇದೆ. 800 ಗೋವುಗಳು ಇವೆ. ಬೆಂಗಳೂರಿನ ಸದಾಶಿವನಗರದಲ್ಲಿ ನಾಲ್ಕು ಮನೆ ಇದೆ. ನಾವು ಫುಲ್ ಸೆಟಲ್ಡ್’ ಎಂದರು. ಆ ಬಳಿಕ ಬಟ್ಟೆಗಳ ಬೆಲೆ ಹೇಳಿದರು. ‘ಈ ಬನಿಯನ್ ಬೆಲೆ 40 ಸಾವಿರ ರೂಪಾಯಿ. ಇದು ಇಂಗ್ಲೆಂಡ್ ಪ್ಯಾಂಟ್. ಇದನ್ನು ತೊಳಿಯಬೇಕು ಎಂದಿಲ್ಲ. ಕುಡುಗಿದ್ರೆ ಕೊಳೆ ಉದುರಿ ಹೋಗುತ್ತದೆ’ ಎಂದು ರಿಷಾ ಗೌಡಗೆ ಟಾಂಟ್ ಕೊಟ್ಟರು. ಈ ವಿಡಿಯೋನ ಗಿಲ್ಲಿ ಅಭಿಮಾನಿಗಳು ವೈರಲ್ ಆಗುತ್ತಿದ್ದಾರೆ.

ಇದನ್ನೂ ಓದಿ: ‘ನಿನ್ನ ಪಾಡಿಗೆ ನೀನಿರು, ನನ್ನ ಪಾಡಿಗೆ ನಾನಿರ್ತೀನಿ’; ಸೂರಜ್ ಗೆ ನೇರವಾಗಿ ಹೇಳಿದ ರಾಶಿಕಾ

ಗಿಲ್ಲಿ ಸಾಕಷ್ಟು ಕಷ್ಟ ನೋಡಿದವರು. ಅವರು ರೈತಾಪಿ ಹಿನ್ನೆಲೆಯಿಂದ ಬಂದವರು. ಬೆಂಗಳೂರಿನಲ್ಲಿ ಅವರು ಒಂದು ಸಣ್ಣ ರೂಂನಲ್ಲಿ ಬಾಡಿಗೆ ಇದ್ದಾರೆ. ಲಗ್ಗೇರಿ ಬಳಿ ಅವರ ಬಾಡಿಗೆ ಮನೆ ಇದೆ. ಕಲಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *