ಕಾಮಿಡಿ ಕಲಾವಿದ ಗಿಲ್ಲಿ ನಟ (ಗಿಲ್ಲಿ ನಟ) ಅವರಿಗೆ ಇರುವ ಅಭಿಮಾನಿ ಬಳಗ ಬಹಳ ದೊಡ್ಡದು. ಎಷ್ಟರಮಟ್ಟಿಗೆ ಎಂದರೆ ಗಿಲ್ಲಿ ಅವರ ಭಾವಚಿತ್ರವನ್ನು ಅನೇಕರು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಗಿಲ್ಲಿ ಅವರೇ ಈ ಬಾರಿ ಟ್ರೋಫಿ ಗೆಲ್ಲುತ್ತಾರೆ ಎಂಬುದು ಅಭಿಮಾನಿಗಳ ನಂಬಿಕೆ. ಟ್ಯಾಟೂ (ಗಿಲ್ಲಿ ನಾಟಾ ಟ್ಯಾಟೂ) ಹಾಕಿಸಿಕೊಂಡ ಅಭಿಮಾನಿ ಗಿರೀಶ್ ಈಗ ಟಿವಿ9 ಜೊತೆ ಮಾತನಾಡಿದ್ದಾರೆ. ‘ನಾನು ಡ್ರೈವರ್. ಕೆಲಸ ಮುಗಿಸಿ ಬಂದು ಗಿಲ್ಲಿಯ ವಿಡಿಯೋ ನೋಡಿದರೆ ಮತ್ತೆ ಕೆಲಸ ಮಾಡಬೇಕು ಎಂಬ ಚೈತನ್ಯ ಬರುತ್ತದೆ. ಅವರು ರೈತನ ಮಗ. ಅವರು ಬೆಳೆಯಬೇಕು. ಕಾಮಿಡಿ ಕಿಲಾಡಿಗಳು ಶೋ ನೋಡಿ ನಾನು ಅವರ ಅಭಿಮಾನಿ ಆದೆ. ಅವರು ಬಿಗ್ ಬಾಸ್ ಫಿನಾಲೆಯಲ್ಲಿ ಗೆದ್ದೇ ಗೆಲ್ಲುತ್ತಾರೆ’ ಎಂದು ಗಿರೀಶ್ ಹೇಳಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಬಿಕೆ 12) ಫಿನಾಲೆ ಜನವರಿ 18 ರಂದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.