‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಬಿಕೆ 12) ಶೋನಿಂದ ಗಿಲ್ಲಿ ನಟ ಪಡೆದ ಜನಪ್ರಿಯತೆ ಅಪಾರ. ಆ ರಿಯಾಲಿಟಿ ಶೋಗೆ ಹೋಗುವುದಕ್ಕೂ ಮುನ್ನವೇ ಗಿಲ್ಲಿ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಆ ಸಿನಿಮಾಗಳ ಬಗ್ಗೆ ಟಾಕ್ ಶುರು ಆಗಿದೆ. ಗಿಲ್ಲಿ ನಟ (ಗಿಲ್ಲಿ ನಾಟಾ) ಅಭಿನಯದ ‘ಸರ್ಕಾರಿ ಶಾಲೆ ಹೆಚ್ 8’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಆ ಚಿತ್ರದಲ್ಲಿ ಗಿಲ್ಲಿ ಅವರಿಗೆ ಒಂದು ಪಾತ್ರವಿದೆ. ಆದರೆ ಸಿನಿಮಾದ ಪ್ರಚಾರಕ್ಕೆ ಗಿಲ್ಲಿ ನಟ ಬಂದಿಲ್ಲ ಎಂದು ಚಿತ್ರತಂಡ ಗರಂ ಆಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೂಡ ನೆರವು. ಆ ಬಗ್ಗೆ ಗಿಲ್ಲಿ ನಟ ಮೊದಲ ಪ್ರತಿಕ್ರಿಯೆ ತಿಳಿಸಿದೆ.
ಗಿಲ್ಲಿ ನಟ ಪ್ರಮುಖ ಪಾತ್ರ ಮಾಡಿರುವ ‘ಸೂಪರ್ ಸ್ಟಾರ್’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಆ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಗಿಲ್ಲಿ ಅವರಿಗೆ ಹಲವು ಪ್ರಶ್ನೆ ಎದುರಾಯಿತು. ‘ಸರ್ಕಾರಿ ಶಾಲೆ ಹೆಚ್ 8’ ಚಿತ್ರದ ಪ್ರಚಾರಕ್ಕೆ ಯಾಕೆ ಹೋಗಿಲ್ಲ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.
‘ಸರ್ಕಾರಿ ಶಾಲೆ ಹೆಚ್ 8 ಸಿನಿಮಾ ಮಾಡಿ ನನ್ನ ಪ್ರಕಾರ 2 ರಿಂದ ಎರಡೂ ವರ್ಷ ಆಗಿರಬಹುದು. ಅದರಲ್ಲಿ ನಟನೆ ಮಾಡಿದ್ದೇನೆ. ನಾನು ನನ್ನ ಬೈಟ್ಸ್ ಕಳಿಸಿದ್ದೇನೆ. ಹಾಗಿದ್ದರೂ ಕೂಡ ಅವರು ಯಾಕೆ ದೂರು ನೀಡಿದರೋ ಗೊತ್ತಿಲ್ಲ. ನನಗೂ ಒಂದಷ್ಟು ಕೆಲಸಗಳ ಒತ್ತಡ ಇತ್ತು. ನಾನು ಫೋನ್ ಎತ್ತಿಲ್ಲ ಎಂಬ ಕಾರಣಕ್ಕೆ ಪಾಪ ಅವರಿಗೆ ಆ ರೀತಿ ಆಗಿರಬಹುದು. ಅವರದ್ದು ತಪ್ಪಿಲ್ಲ’ ಎಂದು ಗಿಲ್ಲಿ ನಟ ಹೇಳಿದ್ದಾರೆ.’
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ತಮ್ಮ ವಿರುದ್ಧ ದೂರು ದಾಖಲಾಗಿದ್ದರೂ ಕೂಡ ಗಿಲ್ಲಿ ನಟ ಅವರು ‘ಸರ್ಕಾರಿ ಶಾಲೆ ಹೆಚ್8’ ಚಿತ್ರತಂಡವನ್ನು ಸಂಪರ್ಕಿಸಲಿಲ್ಲ. ‘ಬೇರೆ ಕೆಲಸಗಳಲ್ಲಿ ನಾನು ಒಂದಷ್ಟು ಬ್ಯೂಸಿ ಆದೆ. ವಾಣಿಜ್ಯ ಮಂಡಳಿಗೆ ನಾನು ಉತ್ತರ ಕೊಡಬೇಕಿತ್ತು. ಅದನ್ನು ನೀಡಿದ್ದೇನೆ’ ಎಂದು ಗಿಲ್ಲಿ ನಟ ಅವರು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮುಗಿದು ಇಷ್ಟು ದಿನವಾದ್ರೂ ಕಡಿಮೆ ಆಗಿಲ್ಲ ಗಿಲ್ಲಿ ನಟ ಹವಾ
ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅನೇಕರು ಫಿದಾ ಆಗಿದ್ದರು. ಹಲವು ಅಭಿಮಾನಿಗಳು ಗಿಲ್ಲಿಯ ಭಾವಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡಿದ್ದರು. ಆ ಒಬ್ಬ ಅಭಿಮಾನಿಯನ್ನು ಭೇಟಿಯಾಗುವುದಾಗಿ ಗಿಲ್ಲಿ ಹೇಳಿದ್ದರು. ಆದರೆ ಬಿಗ್ ಬಾಸ್ ಮುಗಿದು ಇಷ್ಟು ದಿನ ಕಳೆದರೂ ಆ ಅಭಿಮಾನಿಯನ್ನು ಗಿಲ್ಲಿ ಭೇಟಿ ಆಗಿಲ್ಲ. ಅದಕ್ಕೂ ಅವರು ಸ್ಪಷ್ಟನೆ ನೀಡಿದ್ದಾರೆ. ‘ವಾಹಿನಿ ಕಡೆಯಿಂದ ಅವರೆಲ್ಲರನ್ನೂ ಕರೆಸಲು ಪ್ಲ್ಯಾನ್ ಆಗುತ್ತಿದೆ. ಅಭಿಮಾನಿಗೂ ಕರೆ ಮಾಡಲಾಗಿತ್ತು. ಆದರೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಎಲ್ಲರನ್ನೂ ಭೇಟಿ ಆಗುತ್ತೇನೆ. ತಕ್ಷಣಕ್ಕೆ ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ’ ಎಂದು ಗಿಲ್ಲಿ ನಟ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.