ಬಿಗ್ ಬಾಸ್ ಮನೆಯಲ್ಲಿ ರಘು, ಅಶ್ವಿನಿ ಗೌಡ ಸ್ವಯಂವರ? ಗಿಲ್ಲಿ ನಟ ಶಾಕ್

ಬಿಗ್ ಬಾಸ್ ಮನೆಯಲ್ಲಿ ರಘು, ಅಶ್ವಿನಿ ಗೌಡ ಸ್ವಯಂವರ? ಗಿಲ್ಲಿ ನಟ ಶಾಕ್


ಈ ವಾರಂತ್ಯದಲ್ಲಿ ಕಿಚ್ಚ ಸುದೀಪ್ ಅವರಿಗೆ ಬಿಗ್ ಬಾಸ್ (ಬಿಬಿಕೆ 12) ಶೋ ನಡೆಸಿಕೊಡಲು ಸಾಧ್ಯವಾಗಿಲ್ಲ. ಅವರ ಬದಲಿಗೆ ಬೇರೆ ಬೇರೆ ಅತಿಥಿಗಳು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಭಾನುವಾರದ (ಡಿಸೆಂಬರ್ 28) ಸಂಚಿಕೆಗೆ ನಟಿ, ನಿರೂಪಕಿ ಅನುಪಮಾ ಗೌಡ ಅವರು ಆಗಮಿಸಿದ್ದಾರೆ. ದೊಡ್ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಅವರು ಸುತ್ತುವಟಿಕೆ ನೀಡಿದ್ದಾರೆ. ಈ ವೇಳೆ ಮ್ಯೂಟೆಂಟ್ ರಘು ಬಗ್ಗೆ ಅಶ್ವಿನಿ ಗೌಡ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಅದೇ ರೀತಿ, ಅಶ್ವಿನಿ ಗೌಡ (ಅಶ್ವಿನಿ ಗೌಡ) ಕುರಿತು ರಘು ಅವರು ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ’14ನೇ ವಾರದಲ್ಲಿ ಇದ್ದೇವೆ. ಆವತ್ತು ರಘುನ ಕಂಡೆ, ಇವತ್ತು ಒಂದು ಮಗುನಾ ನೋಡಿದೆ’ ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ‘ವ್ಯಕ್ತಿಯಾಗಿ ಅಶ್ವಿನಿ ಗೌಡ ನನಗೆ ತುಂಬಾ ಇಷ್ಟ’ ಎಂದು ರಘು ಹೇಳಿದ್ದಾರೆ. ಇದನ್ನೆಲ್ಲ ಕಂಡು ಗಿಲ್ಲಿ ನಟ ಅವರಿಗೆ ಅಚ್ಚರಿ ಆಗಿದೆ. ‘ನಿಜವಾಗಿಯೂ ಇದು ಸ್ವಯಂವರ ಥರ ಫೀಲ್ ಆಗುತ್ತಿದೆ’ ಎಂದು ಗಿಲ್ಲಿ ನಟ (ಗಿಲ್ಲಿ ನಟ) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *