ಅನುಶ್ರೀ ಕಾಲಿಗೆ ಬಿದ್ದ ಗಿಲ್ಲಿ ನಟ; ಶಾಕ್ ಆದ ಆ್ಯಂಕರ್

ಅನುಶ್ರೀ ಕಾಲಿಗೆ ಬಿದ್ದ ಗಿಲ್ಲಿ ನಟ; ಶಾಕ್ ಆದ ಆ್ಯಂಕರ್


‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿ ನಟ ಅವರು ಬಂದಿದ್ದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುವುದನ್ನು ಕಾಣಬಹುದು. ಈಗ ಅವರು ಸಾಕಷ್ಟು ವೇದಿಕೆಗಳನ್ನು ಏರುತ್ತಿದ್ದಾರೆ. ಈಗ ಅವರಿಗೆ ವೇದಿಕೆ ಮೇಲೆ ಅನುಶ್ರೀ ಸಿಕ್ಕಿದ್ದಾರೆ. ಆಗ ಅನುಶ್ರೀ ಕಾಲಿಗೆ ಬಿದ್ದು ಅವರು ಆಶೀರ್ವಾದ ಪಡೆದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಗಿಲ್ಲಿಗೆ ಅನುಶ್ರೀ ಮೇಲಿರುವ ಪ್ರೀತಿ ಎಷ್ಟಿದೆ ಎಂದು ತೋರಿಸಿದ್ದಾರೆ.

ಗಿಲ್ಲಿ ನಟ ಹಾಗೂ ಅನುಶ್ರೀ ಅವರು ಮೊದಲಿನಿಂದಲೂ ಪರಿಚಿತರು. ಜೀ ಕನ್ನಡದ ಇವರು ವೇದಿಕೆ ಇದ್ದಿದ್ದನ್ನು ಕಾಣಬಹುದಾಗಿತ್ತು. ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಈ ಮೊದಲು ಸಂದರ್ಶನದಲ್ಲಿ ಗಿಲ್ಲಿ ಇರುವಾಗಲೇ ಅನುಶ್ರೀಗೆ ಕರೆ ಮಾಡಲಾಗಿತ್ತು. ಈ ಕರೆ ವೇಳೆ ಅನುಶ್ರೀ ಅವರು ಗಿಲ್ಲಿಯನ್ನು ಭೇಟಿ ಮಾಡಬೇಕು ಎಂದು ಹೇಳಿದ್ದರು.

ಇದನ್ನೂ ಓದಿ: ‘ನಾನು ಸಾಯುವವರೆಗೂ ಚಿರಣಿ’; ಧನ್ಯವಾದ ಹೇಳಿದ ಆಯಂಕರ್ ಅನುಶ್ರೀ

ಈಗ ಅನುಶ್ರೀ ಹಾಗೂ ಗಿಲ್ಲಿ ಭೇಟಿ ಆಗುವ ಅವಕಾಶ ಸಿಕ್ಕಿದೆ. ಗಿಲ್ಲಿ ನಟ ಅವರು ಹಲವು ವೇದಿಕೆಗಳಲ್ಲಿದ್ದಾರೆ. ಈ ವೇದಿಕೆ ಒಂದರ ಮೇಲೆ ಗಿಲ್ಲಿ ಹಾಗೂ ಅನುಶ್ರೀ ಪರಸ್ಪರ ಭೇಟಿ ಆದರು. ಆಗ ಅನುಶ್ರೀ ಕಾಲಿಗೆ ಬಿದ್ದು ಅವರು ಆಶೀರ್ವಾದ ಪಡೆದರು ಮತ್ತು ಇದರಿಂದ ಅವರು ಖುಷಿಯಾದರು. ಆ ವೇಳೆ ಅನುಶ್ರೀ ಅವರು ಖುಷಿಪಟ್ಟರು. ಅವರಿಗೆ ಶಾಕ್ ಕೂಡ ಆಯಿತು. ಅನುಶ್ರೀ ಹಾಗೂ ಗಿಲ್ಲಿ ಪರಸ್ಪರ ಭೇಟಿ ಮಾಡಿದಾಗ ಸಾಕಷ್ಟು ಎಂಜಾಯ್ ಮಾಡುತ್ತಿದ್ದರಂತೆ. ಇದನ್ನು ಅವರು ಆಗ ಹೇಳಿದ್ದರು.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಅತ್ಯಧಿಕ ವೋಟ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಬಿಗ್ ಬಾಸ್ ಕಡೆಯಿಂದ ಅವರಿಗೆ ಸಾಕಷ್ಟು ಹಣ ಸಿಕ್ಕಿದೆ. ಸುದೀಪ್ ಅವರು ಗಿಲ್ಲಿ ನಟನಿಗೆ 10 ಲಕ್ಷ ರೂಪಾಯಿ ನೀಡಿರುವುದು ಕಂಡುಬಂದಿದೆ. ಗಿಲ್ಲಿ ನಟ ಅವರ ಸಿನಿಮಾಗಳನ್ನು ಮಾಡಬೇಕು ಎಂದು ಆಸೆ ಇಟ್ಟುಕೊಂಡಿದ್ದಾರೆ. ಹಾಸ್ಯ ನಟನಾಗಿ ಅವರು ಗಮನ ಸೆಳೆಯುವ ಸಾಧ್ಯತೆಯಿದೆ. ಅವರೇ ಸಂದರ್ಶನದಲ್ಲಿ ಹೇಳಿಕೊಂಡಂತೆ ಅವರಿಗೆ ಸಿನಿಮಾ ಮಾಡುವ ಆಸೆ ಇದೆಯಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *