‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಗ್ ಬಾಸ್ ಕನ್ನಡ ಸೀಸನ್ 12) ರಿಯಾಲಿಟಿ ಶೋನಲ್ಲಿ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಅಂದರೆ, ಬಿಗ್ ಬಾಸ್ ಸ್ಪರ್ಧಿಗಳ ಕುಟುಂಬದವರು ಒಬ್ಬೊಬ್ಬರಾಗಿಯೇ ದೊಡ್ಮನೆಗೆ ಬಂದು ಹೋಗುತ್ತಿದ್ದಾರೆ. ಅಶ್ವಿನಿ ಗೌಡ (ಅಶ್ವಿನಿ ಗೌಡ) ಅವರ ತಾಯಿ ಕೂಡ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅವರು ಬಂದ ಕ್ಷಣ ಅಶ್ವಿನಿ ಗೌಡ ತುಂಬಾ ಎಮೋಷನಲ್ ಆದರು. ಅಶ್ವಿನಿ ತಾಯಿ ಅವರು ಗಿಲ್ಲಿ ಜೊತೆ ಮಾತನಾಡಿ, ‘ಒಬ್ಬರಿಗೊಬ್ಬರು ಮನಸ್ತಾಪ ಮಾಡಿಕೊಳ್ಳಬೇಡಿ. ಚೆನ್ನಾಗಿರಿ’ ಎಂದು ಸಲಹೆ ನೀಡಿದರು. ಅವರನ್ನು ಅತ್ತೆ ಎಂದು ಕರೆಯಲು ಗಿಲ್ಲಿ ನಟ (ಗಿಲ್ಲಿ ನಟ) ಶುರು ಮಾಡಿದರು. ಈ ಕ್ಷಣ ಸಖತ್ ಫನ್ ಆಗಿದೆ. ಡಿಸೆಂಬರ್ 24 ರ ಸಂಚಿಕೆಯ ಕಾರ್ಯಕ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ‘ಜಿಯೋ ಹಾಟ್ ಸ್ಟಾರ್’ ಒಟಿಟಿ ಹಾಗೂ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪೂರ್ತಿ ಸಂಚಿಕೆ ವೀಕ್ಷಿಸಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.