ನಟ ಧ್ರುವಂತ್ ಅವರು ಬಿಗ್ ಬಾಸ್ (BBK 12) ಮನೆಯಿಂದ ಹೊರಗೆ ಹೋಗಲು ನಿರ್ಧರಿಸಲಾಗಿದೆ. ಅದೇ ವಿಷಯವನ್ನು ಇಟ್ಟುಕೊಂಡು ಅವರನ್ನು ಅನೇಕರು ನಾಮಿನೇಟ್ ಮಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಈವರೆಗೆ ಧ್ರುವಂತ್ (ಧ್ರುವಂತ್) ಕಳೆದ ದಿನಗಳ ಬಗ್ಗೆ ಗಿಲ್ಲಿ ನಟ ಕೆಲವು ಪ್ರಶ್ನೆ ಕೇಳಿದ್ದಾರೆ. ‘ನಿಮ್ಮ ಮೇಲೆ ಬುಕ್ ಬರೆಯುತ್ತೇನೆ. ಅದಕ್ಕಾಗಿ ಕೆಲವು ಪ್ರಶ್ನೆ ಕೇಳುತ್ತೇನೆ’ ಎಂದು ಗಿಲ್ಲಿ ನಟ (ಗಿಲ್ಲಿ ನಟ) ಹೇಳಿದ್ದಾರೆ. ಗಿಲ್ಲಿ ಕೇಳಿದ ಎಲ್ಲ ಪ್ರಶ್ನೆಗಳಿಗೆ ಧ್ರುವಂತ್ ಅವರು ಕಾಮಿಡಿಯಾಗಿ ಉತ್ತರ ನೀಡಿದ್ದಾರೆ. ಡಿಸೆಂಬರ್ 4 ರ ಸಂಚಿಕೆಯ ಕಾರ್ಯಕ್ರಮವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ‘ಜಿಯೋ ಹಾಟ್ ಸ್ಟಾರ್’ ಮತ್ತು ‘ಕಲರ್ಸ್ ಕನ್ನಡ’ದಲ್ಲಿ ಪೂರ್ತಿ ಸಂಚಿಕೆ ನೋಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.